ನವದೆಹಲಿ: Guru Gochar 2022 - ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹವು ಅಸ್ತಮಿಸಿದಾಗ ಅದು ಎಲ್ಲಾ ರಾಶಿಚಕ್ರದ ಮೇಲೆ ಪರಿಣಾಮ ಬೀರುತ್ತದೆ. ದೇವ ಗುರು ಬೃಹಸ್ಪತಿ (Guru Gochar) ಶನಿಯ ಕುಂಭ ರಾಶಿಯಲ್ಲಿ ಅಸ್ತಮಿಸಲಿದೆ. ಫೆಬ್ರವರಿ 19, ಶನಿವಾರದಿಂದ ಮಾರ್ಚ್ 20 ರವರೆಗೆ, ಗುರು (Guru Gochar 2022 In Kannada) ಕುಂಭ ರಾಶಿಯಲ್ಲಿ ಉಳಿಯಲಿದ್ದಾನೆ. ಗುರುವನ್ನು ಜ್ಞಾನ, ಸಂತೋಷ ಮತ್ತು ಅದೃಷ್ಟದ ಅಂಶವೆಂದು ಪರಿಗಣಿಸಲಾಗಿದೆ. ಗುರುಗ್ರಹದ (Guru Rashi Parivartan 2022 Time) ಈ ಸ್ಥಿತಿಯಿಂದ, ಕೆಲವು ರಾಶಿಗಳ ಜನರ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗಲಿದೆ. ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.
ಮೇಷ ರಾಶಿ
ಮೇಷ ರಾಶಿಯವರಿಗೆ ಗುರುವಿನ (Guru Rashi Parivartan 2022) ಅಸ್ತ ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಈ ಸಮಯದಲ್ಲಿ, ನೀವು ಕೆಲಸದ ಸ್ಥಳದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವೃಥಾ ಖರ್ಚು ಹೆಚ್ಚಾಗಲಿದೆ. ಜೀವನ ಸಂಗಾತಿಯೊಂದಿಗೆ ಉದ್ವಿಗ್ನತೆ ಉಂಟಾಗಬಹುದು. ವ್ಯವಹಾರದಲ್ಲಿ ಹಣಕಾಸಿನ ಸಮಸ್ಯೆಗಳು ಎದುರಾಗಬಹುದು.
ವೃಷಭ ರಾಶಿ
ವೃಷಭ ರಾಶಿಯ ಜನರು ಈ ಅವಧಿಯಲ್ಲಿ ಕೆಲಸದಲ್ಲಿ ಯಶಸ್ಸನ್ನು ಪಡೆಯುವಲ್ಲಿ ವಿಳಂಬ ಎದುರಿಸಲಿದ್ದಾರೆ. ಯಾವುದೇ ಆಸೆ ಈಡೇರದೆ ಉಳಿಯಬಹುದು. ಉದ್ಯೋಗದಲ್ಲಿ ಬದಲಾವಣೆ ಆಗಬಹುದು. ವ್ಯಾಪಾರದಲ್ಲಿ ಆರ್ಥಿಕ ಹಿಂಜರಿತದ ಸಂದರ್ಭಗಳು ಉಂಟಾಗಬಹುದು. ಸಂಗಾತಿಯೊಂದಿಗೆ ವೈಮನಸ್ಸು ಉಂಟಾಗಬಹುದು.
ಮಿಥುನ ರಾಶಿ
ಗುರುವಿನ (Bruhaspati Rashi Parivartan) ಅಸ್ತದ ಈ ಅವಧಿಯಲ್ಲಿ, ನಿಮ್ಮ ವೃತ್ತಿಜೀವನದಲ್ಲಿ ನೀವು ಎಲ್ಲಾ ರೀತಿಯ ತೊಂದರೆಗಳನ್ನು ಎದುರಿಸಬೇಕಾಗಬಹುದು. ವೈವಾಹಿಕ ಜೀವನದಲ್ಲಿ ಸಂಗಾತಿಯೊಂದಿಗೆ ವೈಮನಸ್ಸು ಉಂಟಾಗಬಹುದು. ಮಾಡಿದ ಕೆಲಸಗಳು ಹಾಳಾಗಬಹುದು. ಹಣಕಾಸಿನ ನಿರ್ಬಂಧಗಳು ನಿಮ್ಮನ್ನು ತೊಂದರೆಗೊಳಿಸಬಹುದು. ನೀವು ಮಾನಸಿಕ ಒತ್ತಡವನ್ನು ಅನುಭವಿಸುವಿರಿ.
ಇದನ್ನೂ ಓದಿ-Mars Transit 2022 : ಈ 4 ರಾಶಿಯವರ ಭವಿಷ್ಯ ಬಹುಬೇಗ ಬದಲಾಗಲಿದೆ! ಮಂಗಳನ ಕೃಪೆಯಿಂದ ಭಾರೀ ಧನ ಲಾಭ
ಕರ್ಕ ರಾಶಿ
ಗುರುಗ್ರಹದ ಅಸ್ತ ಕರ್ಕ ರಾಶಿಯವರಿಗೆ ಶುಭ ಸಂಕೇತಗಳನ್ನು ನೀಡುವುದಿಲ್ಲ. ಈ ಸಮಯದಲ್ಲಿ, ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯಲು ನೀವು ಶ್ರಮಿಸಬೇಕಾಗುತ್ತದೆ. ನೀವು ಹಣಕಾಸಿನ ತೊಂದರೆಗಳನ್ನು ಎದುರಿಸಬೇಕಾಗಬಹುದು. ಜೀವನ ಸಂಗಾತಿಯೊಂದಿಗೆ ಬಿರುಕು ಉಂಟಾಗಬಹುದು. ವ್ಯಾಪಾರದಲ್ಲಿ ನಷ್ಟ ಉಂಟಾಗಬಹುದು. ಗುರು ಅಸ್ತ ಸಮಯದಲ್ಲಿ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ.
ಇದನ್ನೂ ಓದಿ-ಪ್ರೀತಿಯ ವಿಷಯದಲ್ಲಿ ಮಿತಿ ಮೀರಿ ವರ್ತಿಸುತ್ತಾರೆ ಈ 4 ರಾಶಿಯವರು, ಮದುವೆಯ ವಿಷಯದಲ್ಲಿಯೂ ಇಡುತ್ತಾರೆ ಈ ಹೆಜ್ಜೆ
(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆಯಿರಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.