ಕೇವಲ ಒಂದು ತಿಂಗಳಿನಲ್ಲಿ ನಿಮ್ಮ ಕೂದಲುದುರುವಿಕೆ ಸಮಸ್ಯೆಗೆ ಹೇಳಿ ಗುಡ್ ಬೈ
Home Remedies For Hair Loss: ನಿಮಗೂ ಕೂಡ ಕೂದಲು ಉದುರುವ ಸಮಸ್ಯೆ ಕಾಡುತ್ತಿದೆಯೇ? ಚಿಂತೆಬಿಡಿ, ನಿಮ್ಮ ದಿನಚರಿ ಮತ್ತು ಆಹಾರ ಪದ್ದತಿಯ ಬಗ್ಗೆ ಈ ರೀತಿ ಗಮನಹರಿಸಿ ಕೇವಲ ಒಂದೇ ತಿಂಗಳಿನಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಪಡೆಯಿರಿ.
Home Remedies For Hair Loss: ಬದಲಾದ ಜೀವನ ಶೈಲಿಯಲ್ಲಿ ಕೂದಲು ಉದುರುವ ಸಮಸ್ಯೆ ಪ್ರತಿಯೊಬ್ಬರಲ್ಲೂ ಕೂಡ ಸರ್ವೇ ಸಾಮಾನ್ಯವಾದ ಸಮಸ್ಯೆಯಾಗಿದೆ. ಕೂದಲು ಉದುರುವಿಕೆಗೆ ಆಯುರ್ವೇದದಲ್ಲಿ ಅನೇಕ ಕಾರಣಗಳನ್ನು ಉಲ್ಲೇಖಿಸಲಾಗಿದೆ.
ಕೂದಲುದುರುವಿಕೆಗೆ ಕಾರಣ:
ಕೂದಲುದುರುವಿಕೆ ಸಮಸ್ಯೆಗೆ ಹಲವು ಕಾರಣಗಳಿವೆ. ಕೆಲವರಲ್ಲಿ ಇದು ಅನುವಂಶಿಕ ಸಮಸ್ಯೆ ಆಗಿದ್ದರೆ, ಇನ್ನೂ ಕೆಲವರಲ್ಲಿ ಹಾರ್ಮೋನುಗಳ ಅಸಮರ್ಪಕತೆ, ಕೆಟ್ಟ ಜೀವನಶೈಲಿ, ಒತ್ತಡ, ನಿದ್ರೆ ಕೊರತೆ, ಧೂಳು ಹೀಗೆ ಹಲವು ಕಾರಣಗಳಿರಬಹುದು.
ಆಯುರ್ವೇದ ಸಲಹೆ:
ಕೂದಲು ಉದುರುವಿಕೆಯನ್ನು ತಡೆಯಲು ಆಯುರ್ವೇದದಲ್ಲಿ ಹಲವಾರು ಕ್ರಮಗಳನ್ನು ಸೂಚಿಸಲಾಗಿದೆ. ಇದನ್ನು ಅಳವಡಿಸಿಕೊಳ್ಳುವುದರಿಂದ ಕೇವಲ ಒಂದೇ ಒಂದು ತಿಂಗಳಿನಲ್ಲಿ ಕೂದಲುದುರುವಿಕೆ ಸಮಸ್ಯೆಗೆ ಗುಡ್ ಬೈ ಹೇಳಬಹುದು ಎಂದು ನಂಬಲಾಗಿದೆ.
ಇದನ್ನೂ ಓದಿ- ಈ ಹೂವಿನ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿದರೆ ಬಿಳಿ ಕೂದಲಿಗೆ ಸಿಗುವುದು ಶಾಶ್ವತ ಪರಿಹಾರ ! ಹಿತ್ತಲಲ್ಲೇ ಅರಳುತ್ತದೆ ಈ ಹೂವು
ದೇಸಿ ತುಪ್ಪದೊಂದಿಗೆ ಈ 2 ಪದಾರ್ಥ ಸೇವಿಸಿ:
ಆಯುರ್ವೇದದ ಪ್ರಕಾರ, ಕೂದಲು ಉದುರುವಿಕೆಯ ಸಮಸ್ಯೆಯಿಂದ ನೀವು ತೊಂದರೆಗೊಳಗಾಗಿದ್ದರೆ, 1/2 ಚಮಚ ಆಮ್ಲಾ ಪುಡಿಯೊಂದಿಗೆ 1/2 ಚಮಚ ಆಮ್ಲಾ ಪುಡಿ ಮತ್ತು 1/2 ಚಮಚ ದೇಸಿ ತುಪ್ಪವನ್ನು ಬೆರೆಸಿ ದಿನಕ್ಕೆರಡು ಬಾರಿ ಅಗಿದು ತಿನ್ನುವುದು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ, ಎಲ್ಲಾ ಮೂರು ದೋಷಗಳು (ವಾತ, ಪಿತ್ತ ಮತ್ತು ಕಫ) ದೇಹದಲ್ಲಿ ನಿಯಂತ್ರಣದಲ್ಲಿರುತ್ತವೆ.
ಪೋಷಕಾಂಶಯುಕ್ತ ಆಹಾರ:
ಇದಲ್ಲದೆ, ಕೂದಲಿನ ಬೆಳವಣಿಗೆ ಮತ್ತು ಅದರ ಆರೋಗ್ಯವು ನೇರವಾಗಿ ಪೋಷಣೆಗೆ ಸಂಬಂಧಿಸಿದೆ, ಆದ್ದರಿಂದ ಆರೋಗ್ಯಕರ, ಸಮತೋಲಿತ ಆಹಾರವನ್ನು ಸೇವಿಸುವುದು ಮುಖ್ಯವಾಗಿದೆ. ನೀವು ತೆಗೆದುಕೊಳ್ಳುವ ಆಹಾರವು ಜೀವಸತ್ವಗಳಿಂದ ಪ್ರೋಟೀನ್‌ಗಳವರೆಗೆ ಎಲ್ಲಾ ಪ್ರಮುಖ ಪೋಷಕಾಂಶಗಳನ್ನು ಒಳಗೊಂಡಿರಬೇಕು ಎಂಬುದನ್ನೂ ನೆನಪಿನಲ್ಲಿಡಿ.
ನಿಮ್ಮ ದೈನಂದಿನ ಆಹಾರದಲ್ಲಿರಲಿ ಈ ಪದಾರ್ಥಗಳು:
ನಿಮ್ಮ ದೈನಂದಿನ ಆಹಾರದಲ್ಲಿ ಹಸಿರು ಸೊಪ್ಪು-ತರಕಾರಿಗಳು, ಆಮ್ಲಾ, ಸೌತೆಕಾಯಿ, ಮಜ್ಜಿಗೆ, ಬಾದಾಮಿ, ವಾಲ್ನಟ್ಸ್, ಕಡಲೆಬೀಜ, ಎಳ್ಳು, ಜೀರಿಗೆ, ತೆಂಗಿನಕಾಯಿ, ತ್ರಿಫಲ, ಮೆಂತ್ಯ ಬೀಜಗಳು, ದಾಳಿಂಬೆ, ಫೆನ್ನೆಲ್ ಬೀಜಗಳು, ಮೊಟ್ಟೆ ಮತ್ತು ವಿಟಮಿನ್ ಬಿ 12ನ ಇತರ ಮೂಲಗಳನ್ನು ತಪ್ಪದೇ ಸೇರಿಸಿ. ಇದೂ ಕೂಡ ನಿಮ್ಮ ಕೂದಲುದುರುವಿಕೆಯನ್ನು ಕಡಿಮೆ ಮಾಡುವುದರ ಜೊತೆಗೆ ಕೂದಲ ಬೆಳವಣಿಗೆಗೂ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ.
ಇದನ್ನೂ ಓದಿ- ಕೂದಲಿನ ಎಲ್ಲಾ ಸಮಸ್ಯೆಗಳಿಗೆ ರಾಮಬಾಣ ಈ ಒಂದು ಎಲೆ!
ಕೂದಲುದುರುವಿಕೆಯನ್ನು ತಪ್ಪಿಸಲು ಈ ವಿಷಯಗಳ ಬಗ್ಗೆ ವಿಶೇಷ ಗಮನಹರಿಸಿ:
>> ಕೊಬ್ಬರಿ ಎಣ್ಣೆ, ಅರಳೆಣ್ಣೆಯಂತಹ ತೈಲಗಳಿಂದ ನಿಮ್ಮ ತಲೆಯನ್ನು ನಿಯಮಿತವಾಗಿ ಮಸಾಜ್ ಮಾಡಿ.
>> ನೆತ್ತಿಯನ್ನು ಹೆಚ್ಚು ಹೊತ್ತು ಒಣಗಲು ಬಿಡಬೇಡಿ.
>> ನಿತ್ಯ ತಪ್ಪದೇ ಕನಿಷ್ಠ 7-8 ಗಂಟೆಗಳ ಕಾಲ ನಿದ್ರೆ ಮಾಡಿ.
>> ಪ್ರತಿದಿನ ಶಿರಶಾಸನ ಮತ್ತು ಸರ್ವಾಂಗಾಸನದಂತಹ ಯೋಗವನ್ನು ಮಾಡಿ. ಇದು ತಲೆಯ ಕಡೆಗೆ ರಕ್ತದ ಹರಿವನ್ನು ಹೆಚ್ಚಿಸುವುದರಿಂದ, ಕೂದಲುದುರುವಿಕೆ ಸಮಸ್ಯೆ ನಿವಾರಿಸಲು ಮತ್ತು ಕೂದಲ ಬೆಳವಣಿಗೆಗೂ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.