ಕೂದಲಿನ ಎಲ್ಲಾ ಸಮಸ್ಯೆಗಳಿಗೆ ರಾಮಬಾಣ ಈ ಒಂದು ಎಲೆ!

Bramhi leaf for hair: ಪೂರ್ವಜರಿಂದ ಬೆಳೆದುಕೊಂಡ ಬಂದ ಸಂಪ್ರದಾಯಗಳಲ್ಲಿ ಆಯುರ್ವೇದವೂ ಒಂದು. ಆರೋಗ್ಯದಿಂದ ಹಿಡಿದು ಚರ್ಮ ಕೂದಲು ಹೀಗೆ ಮನುಷ್ಯನ ಹಲವಾರು ಸಮಸ್ಯೆಗಳಿಗೆ ಆಯುರ್ವೇದ ಒಂದು ರಾಮಬಾಣ. 

Written by - Savita M B | Last Updated : Sep 25, 2023, 10:33 AM IST
  • ಇತ್ತೀಚೆನ ದಿನಗಳಗಳಲ್ಲಿ ಕಳಪೆ ಜೀವನ ಶೈಲಿಯಿಂದಾಗಿ ಅನೇಕ ಕೂದಲಿನ ಸಮಸ್ಯೆಗಳು ಉದ್ಭವವಾಗುತ್ತಿವೆ
  • ಇದಕ್ಕೆ ತಾತ್ಕಾಲಿಕ ಪರಿಹಾರವಾಗಿ ಮಾರುಕಟ್ಟೆಯಲ್ಲಿ ಅನೇಕ ಉತ್ಪನ್ನಗಳು ಲಭ್ಯವಿರುತ್ತವೆ
  • ಹಳೆಯ ಕಾಲದಿಂದಲೂ ರೂಢಿಯಲ್ಲಿರುವ ಆಯುರ್ವೇದದಿಂದ ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.
ಕೂದಲಿನ ಎಲ್ಲಾ ಸಮಸ್ಯೆಗಳಿಗೆ ರಾಮಬಾಣ ಈ ಒಂದು ಎಲೆ! title=

Hair Care Tips: ಇತ್ತೀಚಿನ ದಿನಗಳಲ್ಲಿ ಕಳಪೆ ಜೀವನ ಶೈಲಿಯಿಂದಾಗಿ ಕೂದಲಿನ  ಅನೇಕ ಸಮಸ್ಯೆಗಳು ಉದ್ಭವವಾಗುತ್ತಿವೆ. ಇದಕ್ಕೆ ತಾತ್ಕಾಲಿಕ ಪರಿಹಾರವಾಗಿ ಮಾರುಕಟ್ಟೆಯಲ್ಲಿ ಅನೇಕ ಉತ್ಪನ್ನಗಳು ಲಭ್ಯವಿವೆ. ಆದಾಗ್ಯೂ, ಅವುಗಳಿಂದ ಸಮಸ್ಯೆಗಳಿಗೆ ಮುಕ್ತಿ ಸಿಗಬಹುದು, ಇಲ್ಲವೇ ಸಿಗದೆಯೂ ಇರಬಹುದು. ಆದರೆ, ಈ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ. ಇಂತಹ ಹತ್ತು ಹಲವು ಸಮಸ್ಯೆಗಳಿಗೆ ಆಯುರ್ವೇದದಲ್ಲಿ ಸರಳ ಪರಿಹಾರಗಳನ್ನು ಸೂಚಿಸಲಾಗಿದೆ. 

ವಾಸ್ತವವಾಗಿ,  ಪುರಾತನ ಕಾಲದಿಂದಲೂ ರೂಢಿಯಲ್ಲಿರುವ ವೈದ್ಯಕೀಯ ಪದ್ಧತಿ ಆಯುರ್ವೇದದಲ್ಲಿ ಕೂದಲಿನ ಸಮಸ್ಯೆಗಳಿಗೆ ಸುಲಭ ಪರಿಹಾರಗಳನ್ನು ಸೂಚಿಸಲಾಗಿದೆ. ಅದೂ ಕೂಡ ಈ ಪರಿಹಾರಗಳನ್ನು ಕೈಗೊಳ್ಳಲು ನೀವು ಹೆಚ್ಚಿನ ಹಣವನ್ನು ವೆಚ್ಚಮಾಡುವ ಅಗತ್ಯವೂ ಇಲ್ಲ. ಇದರೊಂದಿಗೆ ನಿಮ್ಮ ಸಮಸ್ಯೆಗಳಿಗೂ ಕೂಡ ಖಚಿತ ಪರಿಹಾರ ಕಂಡುಕೊಳ್ಳಬಹುದು.  ಇನ್ನೊಂದು ಪ್ರಮುಖವಾದ ವಿಷಯವೆಂದರೆ, ಆಯುರ್ವೇದ ಸಲಹೆಗಳನ್ನು ಅನುಸರಿಸುವುದರಿಂದ ಕೂದಲಿಗೆ ಯಾವುದೇ ರೀತಿಯ ಅಡ್ಡ ಪರಿಣಾಮಗಳ ಭಯವೂ ಇರುವುದಿಲ್ಲ. ಕೂದಲಿನ ಹಲವು ಸಮಸ್ಯೆಗಳಿಗೆ ಆಯುರ್ವೇದದಲ್ಲಿ ಪೋಷಕಾಂಶಗಳ ಗಣಿ ಎಂದು ಪರಿಗಣಿಸಲಾಗಿರುವ 'ಬ್ರಾಹ್ಮಿ' ಸಹ ಒಂದು.

ಇದನ್ನೂ ಓದಿ-ನೈಸರ್ಗಿಕವಾಗಿ ರಕ್ತ ಶುದ್ಧೀಕರಿಸುತ್ತದೆ ಈ ಕಹಿ ತರಕಾರಿ! ಈ ರೀತಿ ಅದರ ಕಹಿಯನ್ನು ನಿವಾರಿಸಿ...

ಬ್ರಾಹ್ಮಿ ಇದೊಂದು ಗಿಡಮೂಲಿಕೆಯಾಗಿದ್ದು, ಆಯುರ್ವೇದಲ್ಲಿ ಇದನ್ನು ಅದ್ಭುತ ಸಸ್ಯವೆಂದು ಪರಿಗಣಿಸಲಾಗಿದೆ. ಏಕೆಂದರೆ ಈ ಸಸ್ಯದ ಎಲ್ಲಾ ಭಾಗಗಳು ಎಂದರೇ ಇದರ ಎಲೆಗಳು, ಹೂವುಗಳು ಮತ್ತು ಬೇರುಗಳು ಸಹ ಔಷಧೀಯ ಗುಣಗಳನ್ನು ಹೊಂದಿವೆ. ಹೀಗಾಗಿ ಇದನ್ನು ಕೂದಲಿನ ಆರೈಕೆಯಲ್ಲಿ ಬಳಸುವುದು ಉತ್ತಮ. ಹಾಗಾದರೆ ಈ ಬ್ರಾಹ್ಮಿ ಬಳಕೆಯಿಂದಾಗುವ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ..

ತಲೆಹೊಟ್ಟಿನಿಂದ ಮುಕ್ತಿ ನೀಡುತ್ತದೆ: ಬ್ರಾಹ್ಮಿಯ ಬಳಕೆ ತಲೆ ಹೊಟ್ಟಿನ ನಿವಾರಣೆಗೆ ಸಹಕಾರಿಯಾಗುತ್ತದೆ. ಇದು ನೆತ್ತಿಯನ್ನು ಪೋಷಿಸುವುದಲ್ಲದೇ ಆರೋಗ್ಯಕರವಾಗಿರುವಂತೆ ನೋಡಿಕೊಳ್ಳುತ್ತದೆ. 

ಕೂದಲು ಉದುರುವಿಕೆ ತಡೆಯುತ್ತದೆ: ಬ್ರಾಹ್ಮಿ ಎಣ್ಣೆ ಒಂಗಿದ ನೆತ್ತಿಗೆ ತೇವಾಂಶವನ್ನು ಒದಗಿಸಿ ಕೂದಲು ಉದುರುವುದನ್ನು ಕಡಿಮೆಮಾಡುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ ಗುಣಗಳು ನೆತ್ತಿಯನ್ನು ಸೋಂಕುಗಳಿಂದ ರಕ್ಷಿಸುತ್ತದೆ. ಹೀಗಾಗಿ ಕೂದಲು ಉದುರುವ ಸಮಸ್ಯೆ ಇರುವವರು ಈ ಬ್ರಾಹ್ಮಿ ಎಣ್ಣೆಯನ್ನು ಬಳಸಬಹುದು. 

ಇದನ್ನೂ ಓದಿ-ಕೂದಲುದುರುವಿಕೆ ಸಮಸ್ಯೆಗೆ ಈರುಳ್ಳಿ ಎಣ್ಣೆ ಒಂದು ರಾಮಬಾಣ ಉಪಾಯ, ಈ ರೀತಿ ಬಳಸಿ ನೋಡಿ!

ಸೀಳು ಕೂದಲಿನ ಸಮಸ್ಯೆಗೆ ರಾಮಬಾಣ: ಬ್ರಾಹ್ಮಿ ಪುಡಿಯನ್ನು ಕೂದಲಿಗೆ ನಿಯಮಿತವಾಗಿ ಬಳಸಿದರೇ ಅದು ಕೂದಲಿನ ಒಡೆದ ತುದಿಗಳನ್ನು ಸರಿಪಡಿಸುತ್ತದೆ. ಅಲ್ಲದೇ ಕೂದಲು ಉದ್ದವಾಗಿ ಬೆಳೆಯುವಂತೆ ನೋಡಿಕೊಳ್ಳುತ್ತದೆ. 

ಒತ್ತಡವನ್ನು ನಿಯಂತ್ರಿಸಬಹುದು: ಬ್ರಾಹ್ಮಿ ಎಣ್ಣೆಯನ್ನು ತಲೆಗೆ ಹಚ್ಚಿ ಮಸಾಜ್ ಮಾಡುವುದರಿಂದ ಒತ್ತಡದಿಂದ ಉತ್ತಮ ಪರಿಹಾರ ಸಿಗುತ್ತದೆ. ಇದರ ಎಣ್ಣೆಯಿಂದ ಕೂದಲಿಗೆ ಮಸಾಜ್ ಮಾಡುವುದರಿಂದ ಒತ್ತಡ ಕಡಿಮೆಯಾಗುವುದಲ್ಲದೇ, ಕೂದಲಿಗೆ ಪೋಷಣೆ ಸಿಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News