ಈ ಹೂವಿನ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿದರೆ ಬಿಳಿ ಕೂದಲಿಗೆ ಸಿಗುವುದು ಶಾಶ್ವತ ಪರಿಹಾರ ! ಹಿತ್ತಲಲ್ಲೇ ಅರಳುತ್ತದೆ ಈ ಹೂವು

ತಲೆಯಲ್ಲಿ ಒಂದು ಬಿಳಿ ಕೂದಲು ಕಾಣದ ತಕ್ಷಣ ಹೇರ್ ಕಲರ್ ಹಚ್ಚಲು ಆರಂಭಿಸಿದರೆ ಒಂದು ಬಿಳಿ ಕೂದಲು ಹತ್ತು ಯಾವಾಗ ಆಗುತ್ತದೆ ಎನ್ನುವುದೇ ತಿಳಿಯುವುದಿಲ್ಲ.    

Written by - Ranjitha R K | Last Updated : Sep 25, 2023, 12:18 PM IST
  • ಬಿಳಿ ಕೂದಲಿಗೆ ನೈಸರ್ಗಿಕ ಪರಿಹಾರ
  • ಸದಾ ಪುಷ್ಪಾ ಹೂವಿನ ಪ್ರಯೋಜನ
  • ಈ ಹೂವನ್ನು ಕೂದಲಿಗೆ ಹಚ್ಚುವುದು ಹೇಗೆ ?
ಈ ಹೂವಿನ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿದರೆ ಬಿಳಿ ಕೂದಲಿಗೆ ಸಿಗುವುದು ಶಾಶ್ವತ ಪರಿಹಾರ ! ಹಿತ್ತಲಲ್ಲೇ ಅರಳುತ್ತದೆ ಈ ಹೂವು  title=

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ, ಸಣ್ಣ ವಯಸ್ಸಿನವರಲ್ಲಿಯೂ ಕೂದಲು ಬೆಳ್ಳಗಾಗುವುದು, ಕೂದಲು ಉದುರಿ ಬೋಳು ತಲೆಯಾಗುವುದು ಸಾಮಾನ್ಯ ಸಮಸ್ಯೆಯಾಗಿ ಬಿಟ್ಟಿದೆ. ಇದಕ್ಕೆ ಕಾರಣಗಳು ಹಲವು ಇರಬಹುದು. ಸಂಶೋಧಕರ ಪ್ರಕಾರ, ಇಂದಿನ ದಿನಗಳಲ್ಲಿ ನಾವು ಅನುಸರಿಸುತ್ತಿರುವ ಆಹಾರ ಪದ್ದತಿಯೇ ಈ ಸಮಸ್ಯೆಗೆ ಮೂಲ ಕಾರಣ. ಇದರ ಹೊರತಾಗಿ ಜಾಹೀರಾತಿಗೆ ಜೋತು ಬಿದ್ದು ಕಂಡ ಕಂಡ ಪ್ರಾಡಕ್ಟ್ ಗಳನ್ನು ಕೂದಲಿಗೆ ಹಚ್ಚುವುದು ಕೂಡಾ ಮತ್ತೊಂದು ಕಾರಣ. ಯಾಕೆಂದರೆ  ಯಾವುದೇ ದುಬಾರಿ ಉತ್ಪನ್ನವಾಗಲಿ, ಎಷ್ಟೇ ಆರ್ಗ್ಯಾನಿಕ್ ಎಂದು ಹೇಳಲಿ ಅಲ್ಲಿ ರಾಸಾಯನಿಕಗಳ ಬಳಕೆ ಇದ್ದೇ ಇರುತ್ತದೆ. ಇದು ಕೂದಲು ಇನ್ನಷ್ಟು ದುರ್ಬಲಗೊಳ್ಳಲು ಕಾರಣವಾಗುತ್ತದೆ. ಇನ್ನು ತಲೆಯಲ್ಲಿ ಒಂದು ಬಿಳಿ ಕೂದಲು ಕಾಣದ ತಕ್ಷಣ ಹೇರ್ ಕಲರ್ ಹಚ್ಚಲು ಆರಂಭಿಸಿದರೆ ಒಂದು ಬಿಳಿ ಕೂದಲು ಹತ್ತು ಯಾವಾಗ ಆಗುತ್ತದೆ ಎನ್ನುವುದೇ ತಿಳಿಯುವುದಿಲ್ಲ.  

ಬಿಳಿ ಕೂದಲಿಗೆ ನೈಸರ್ಗಿಕ ಪರಿಹಾರ : 
ಆದರೆ, ಈ ರಾಸಾಯನಿಕಗಳ ಬದಲು ನೈಸರ್ಗಿಕವಾಗಿ ಸಿಗುವ ಕೆಲವು ಪರಿಹಾರಗಳನ್ನು ಬಳಸಿದರೆ ಯಾವ ಅಡ್ಡ ಪರಿಣಾಮವೂ ಇಲ್ಲದೆ ಕೂದಲಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಇಂದು ನಾವು ಒಂದು ಹೂವಿನ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಈ ಹೂವನ್ನು ಅರೆದು ಹಚ್ಚಿದರೆ ಬಿಳಿ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತದೆ. ನಿಮ್ಮ ಕೂದಲಿಗೆ ಹೇರ್ ಕಲರ್ ಹಚ್ಚುವ ಅಗತ್ಯವೇ ಇರುವುದಿಲ್ಲ. 

ಇದನ್ನೂ ಓದಿ : ನೈಸರ್ಗಿಕವಾಗಿ ರಕ್ತ ಶುದ್ಧೀಕರಿಸುತ್ತದೆ ಈ ಕಹಿ ತರಕಾರಿ! ಈ ರೀತಿ ಅದರ ಕಹಿಯನ್ನು ನಿವಾರಿಸಿ...

ಸದಾ ಪುಷ್ಪಾ ಹೂವಿನ ಪ್ರಯೋಜನ :  
ಸದಾ ಪುಷ್ಪಾ ನಿಮ್ಮ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಡಲು ಸಹಾಯ ಮಾಡುತ್ತದೆ. ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಇದು ತುಂಬಾ ಪ್ರಯೋಜನಕಾರಿ. ಕೂದಲಿನ ಸಮಸ್ಯೆಗಳನ್ನು ತೊಡೆದು ಹಾಕಲು ಇದು ರಾಮಬಾಣ. ಈ ಹೂವನ್ನು ಬಳಸಿದರೆ ಮತ್ತೆ ಕೂದಲಿಗೆ ರಾಸಾಯನಿಕಗಳನ್ನು ಬಳಸಬೇಕಾಗಿಲ್ಲ. ಈ ಹೂವು ಕೂದಲಿಗೆ ಕಪ್ಪು ಬಣ್ಣವನ್ನು ನೀಡುತ್ತದೆ. ಒಂದು ತಿಂಗಳವರೆಗೆ ಈ ಹೂವನ್ನು ಕೂದಲಿಗೆ ಹಚ್ಚುತ್ತಾ ಬಂದರೆ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುತ್ತದೆ. 

ಈ ಹೂವನ್ನು ಕೂದಲಿಗೆ ಹಚ್ಚುವುದು ಹೇಗೆ ? : 
ಸದಾ ಪುಷ್ಪದ 20 ರಿಂದ 30 ಹೂವುಗಳು ಮತ್ತು 15 ರಿಂದ 20 ಎಲೆಗಳನ್ನು ತೆಗೆದುಕೊಳ್ಳಿ. ಎರಡು ಟೀ ಚಮಚ  ಟೀ ಪುಡಿ ಒಂದು ಚಮಚ ಕಾಫಿ ಪುಡಿಯನ್ನು ತೆಗೆದುಕೊಳ್ಳಿ. ಮೊದಲು ಅರ್ಧ ಕಪ್ ನೀರಿಗೆ ಟೀ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ ನಂತರ ಫಿಲ್ಟರ್ ಮಾಡಿ ತಣ್ಣಗಾಗಿಸಿ. ಅದು ತಣ್ಣಗಾದ ನಂತರ ಅದಕ್ಕೆ ಸದಾ ಪುಷ್ಪಾ ಹೂ ಮತ್ತು ಎಲೆಗಳನ್ನು ಹಾಕಿ  ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ ಪೇಸ್ಟ್ ಅನ್ನು ತೆಗೆದುಕೊಂಡು ಅದಕ್ಕೆ ಕಾಫಿ ಸೇರಿಸಿ. ಇದನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಅದನ್ನು ಕಬ್ಬಿಣದ ಪ್ಯಾನ್‌ನಲ್ಲಿ 2 ಗಂಟೆಗಳ ಕಾಲ ಮುಚ್ಚಿಡಿ. ಏಕೆಂದರೆ ಇದನ್ನು ಕಬ್ಬಿಣದ ಪ್ಯಾನ್‌ನಲ್ಲಿ ಇಡುವುದರಿಂದ ಕಬ್ಬಿಣದ ಅಂಶ ಈ ಪೇಸ್ಟ್ ಅನ್ನು ಸೇರಿಕೊಳ್ಳುತ್ತದೆ. ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚುವ ಮೂಲಕ ಈ ಪೋಷಕಾಂಶಗಳು ಕೂದಲನ್ನು ಸೇರಿಕೊಳ್ಳುತ್ತದೆ. 

ಇದನ್ನೂ ಓದಿ : ಕೂದಲುದುರುವಿಕೆ ಸಮಸ್ಯೆಗೆ ಈರುಳ್ಳಿ ಎಣ್ಣೆ ಒಂದು ರಾಮಬಾಣ ಉಪಾಯ, ಈ ರೀತಿ ಬಳಸಿ ನೋಡಿ!

ವಾರಕ್ಕೆ ಎರಡು ಬಾರಿ ಪ್ರಯತ್ನಿಸಿ : 
ಈ ಪೇಸ್ಟ್ ಅನ್ನು ಸಿದ್ದಪಡಿಸಿಕೊಂಡ ನಂತರ ಇದನ್ನು ನಿಮ್ಮ ಕೂದಲಿಗೆ ಹಚ್ಚಿ. ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿದ ಸುಮಾರು 1 ಗಂಟೆಯ ನಂತರ, ನಿಮ್ಮ ಕೂದಲಿಗೆ ಹಚ್ಚಿ. ಈ ಪ್ರಕ್ರಿಯೆಯನ್ನು ವಾರಕ್ಕೆ ಎರಡು ಬಾರಿ  ಪುನಾರವರ್ತಿಸಬಹುದು. ಹೀಗೆ ಮಾಡುತ್ತಾ ಬಂದರೆ ಶೀಘ್ರದಲ್ಲೇ ನಿಮ್ಮ ಕೂದಲು ಬಿಳಿ ಬಣ್ಣದಿಂದ ಕಪ್ಪು ಬಣ್ಣಕ್ಕೆ ತಿರುಗುತ್ತದೆ.

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News