ನೈಸರ್ಗಿಕವಾಗಿ ರಕ್ತ ಶುದ್ಧೀಕರಿಸುತ್ತದೆ ಈ ಕಹಿ ತರಕಾರಿ! ಈ ರೀತಿ ಅದರ ಕಹಿಯನ್ನು ನಿವಾರಿಸಿ...

Natural Blood Purifier: ಹಾಗಲಕಾಯಿಯನ್ನು ನೈಸರ್ಗಿಕ ರಕ್ತ ಶುದ್ಧಿಕಾರಕ ಎಂದು ಪರಿಗಣಿಸಲಾಗುತ್ತದೆ. ಹಾಗಲಕಾಯಿಯ ಅನೇಕ ಪ್ರಯೋಜನಗಳನ್ನು ಆಯುರ್ವೇದದಲ್ಲಿ ಕೂಡ ಪಟ್ಟಿ ಮಾಡಲಾಗಿದೆ. ಆದರೂ ಕೂಡ, ಅದರ ಕಹಿ ರುಚಿಯಿಂದಾಗಿ, ಅನೇಕ ಜನರು ಅದನ್ನು ತಿನ್ನುವುದನ್ನು ತಪ್ಪಿಸುತ್ತಾರೆ. Lifestyle News In Kannada

Written by - Nitin Tabib | Last Updated : Sep 24, 2023, 09:30 PM IST
  • ಹಾಗಲಕಾಯಿಯಲ್ಲಿರುವ ಕೇರಂಟಿನ್ ಅಂಶವು ದೇಹದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
  • ಹೆಚ್ಚುವರಿಯಾಗಿ, ಪಾಲಿಪೆಪ್ಟೈಡ್ ಕೂಡ ಹಾಗಲಕಾಯಿಯಲ್ಲಿ ಹೇರಳ ಪ್ರಮಾಣದಲ್ಲಿವೆ,
  • ಇದು ರಕ್ತದಲ್ಲಿನ ಹೆಚ್ಚಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ಇನ್ಸುಲಿನ್‌ನಂತೆ ಕಾರ್ಯನಿರ್ವಹಿಸುತ್ತದೆ.
ನೈಸರ್ಗಿಕವಾಗಿ ರಕ್ತ ಶುದ್ಧೀಕರಿಸುತ್ತದೆ ಈ ಕಹಿ ತರಕಾರಿ! ಈ ರೀತಿ ಅದರ ಕಹಿಯನ್ನು ನಿವಾರಿಸಿ... title=

ಬೆಂಗಳೂರು: ಹಾಗಲಕಾಯಿ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇದನ್ನು ನೈಸರ್ಗಿಕ ರಕ್ತ ಶುದ್ಧಿಕಾರಕ ಎಂದೂ ಪರಿಗಣಿಸಲಾಗುತ್ತದೆ. ಹಾಗಲಕಾಯಿಯ ಅನೇಕ ಆರೋಗ್ಯ ಪ್ರಯೋಜನಗಳನ್ನು ಆಯುರ್ವೇದದಲ್ಲಿ ಪಟ್ಟಿ ಮಾಡಲಾಗಿದೆ. ಆದಾಗ್ಯೂ, ಅದರ ಕಹಿ ರುಚಿಯಿಂದಾಗಿ, ಅನೇಕ ಜನರು ಅದನ್ನು ತಿನ್ನುವುದನ್ನು ತಪ್ಪಿಸುತ್ತಾರೆ. ಇದರ ಕಹಿಯಿಂದಾಗಿ ಅನೇಕರು ಇದನ್ನು ತಿನ್ನಲು ಇಷ್ಟಪಡುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಇಂದು ನಾವು ನಿಮಗೆ ಹಾಗಲಕಾಯಿಯ ಕಹಿಯನ್ನು ಹೋಗಲಾಡಿಸಲು ಕೆಲವು ಸುಲಭ ಮಾರ್ಗಗಳನ್ನು ಹೇಳಿಕೊಡಳಿದ್ದೇವೆ. ಅವುಗಳ ಸಹಾಯದಿಂದ ನೀವು ಹಾಗಲಕಾಯಿಯ ಕಹಿಯನ್ನು ತೆಗೆದುಹಾಕಿ ಅದನ್ನು ತರಕಾರಿಯಾಗಿ ರೂಪದಲ್ಲಿ ಅಥವಾ ನಿಮ್ಮ ಆಹಾರದಲ್ಲಿ ಬೇರೆ ರೀತಿಯಲ್ಲಿ ಸೇರಿಸುವ ಮೂಲಕ ಉಪಯೋಗಿಸಬಹುದು.
 
ಹಾಗಲಕಾಯಿ ತಿನ್ನುವುದರಿಂದ ಆಗುವ ಪ್ರಯೋಜನಗಳು
1. ಹಾಗಲಕಾಯಿ ರಕ್ತವನ್ನು ಶುದ್ಧೀಕರಿಸುತ್ತದೆ

ಹಾಗಲಕಾಯಿಯನ್ನು ಅತ್ಯುತ್ತಮ ರಕ್ತ ಶುದ್ಧಿಕಾರಿ ಎಂದು ಪರಿಗಣಿಸಲಾಗಿದೆ. ಇದರಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ನಮ್ಮ ದೇಹಕ್ಕೆ ಪ್ರಯೋಜನಕಾರಿಯಾದ ಆಂಟಿ-ಆಕ್ಸಿಡೆಂಟ್ ಅಂಶಗಳೂ ಇದರಲ್ಲಿ ಕಂಡುಬರುತ್ತವೆ.
 
2. ಮಧುಮೇಹಕ್ಕೆ ರಾಮಬಾಣ
ಹಾಗಲಕಾಯಿಯಲ್ಲಿರುವ ಕೇರಂಟಿನ್ ಅಂಶವು ದೇಹದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಪಾಲಿಪೆಪ್ಟೈಡ್ ಕೂಡ ಹಾಗಲಕಾಯಿಯಲ್ಲಿ ಹೇರಳ ಪ್ರಮಾಣದಲ್ಲಿವೆ, ಇದು ರಕ್ತದಲ್ಲಿನ ಹೆಚ್ಚಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ಇನ್ಸುಲಿನ್‌ನಂತೆ ಕಾರ್ಯನಿರ್ವಹಿಸುತ್ತದೆ.
 
3.ರಕ್ತದೊತ್ತಡಕ್ಕೂ ಹಾಗಲಕಾಯಿ ಪ್ರಯೋಜನಕಾರಿ
ಹಾಗಲಕಾಯಿಯಲ್ಲಿರುವ ಪೊಟ್ಯಾಶಿಯಂ ನಮ್ಮ ದೇಹದ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಅಷ್ಟೇ ಅಲ್ಲ, ಇದನ್ನು ತಿನ್ನುವುದರಿಂದ ನ್ಯೂರೋಟ್ರಾನ್ಸಮಿಷನಲ್ ಪ್ರಕ್ರಿಯೆ ಸುಧಾರಿಸುತ್ತದೆ. ಹೀಗಾಗಿ ಹಾಗಲಕಾಯಿಯನ್ನು ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ.
 
ಹಾಗಲಕಾಯಿಯ ಕಹಿಯನ್ನು ಹೇಗೆ ನಿವಾರಿಸಬೇಕು?
 1. ಉಪ್ಪನ್ನು ಬೆರೆಸಿ ಸ್ವಲ್ಪ ಸಮಯ ಇಡಿ

ಹಾಗಲಕಾಯಿಯ ಕಹಿಯನ್ನು ಕಡಿಮೆ ಮಾಡಲು, ಅದನ್ನು ಕತ್ತರಿಸಿ ಉಪ್ಪು ಸಿಂಪಡಿಸಿ. ಸುಮಾರು 15-20 ನಿಮಿಷಗಳ ನಂತರ, ಹಾಗಲಕಾಯಿಯಿಂದ ಹೊರಬರುವ ನೀರನ್ನು ಎಸೆಯಿರಿ. ಇದರಿಂದ ಅದರ ಕಹಿಯ ತೀಕ್ಷ್ಣತೆ ಸಾಕಷ್ಟು ಕಡಿಮೆಯಾಗುತ್ತದೆ.
 
2. ಹುರಿಯುವ ಮೊದಲು, ಹಾಗಲಕಾಯಿಯನ್ನು ಜೇನುತುಪ್ಪ ಅಥವಾ ಸಕ್ಕರೆ ನೀರಿನಲ್ಲಿ ಹಾಕಿ.
ಹಾಗಲಕಾಯಿಯನ್ನು ಹುರಿಯುವ ಮೊದಲು, ಒಂದು ಪಾತ್ರೆಯಲ್ಲಿ ನೀರಿಗೆ ಅಗತ್ಯಕ್ಕೆ ಅನುಗುಣವಾಗಿ ಜೇನುತುಪ್ಪ ಅಥವಾ ಸಕ್ಕರೆ ಬೆರೆಸಿ ಮತ್ತು ಅದರಲ್ಲಿ ಹಾಗಲಕಾಯಿಯನ್ನು ಹಾಕಿ. ಇದಾದ ನಂತರ ಹಾಗಲಕಾಯಿಯನ್ನು ಹುರಿದು ತಿಂದರೆ ಜೇನುತುಪ್ಪ ಅಥವಾ ಸಕ್ಕರೆಯಿಂದ ಅದರ ಕಹಿ ರುಚಿಯ ತೀಕ್ಷ್ಣತೆ ಕಡಿಮೆಯಾಗುತ್ತದೆ.
 
3. ಹಾಗಲಕಾಯಿಯನ್ನು ಮೊಸರಿನಲ್ಲಿ ಹಾಕಿ
ಹಾಗಲಕಾಯಿಯ ಕಹಿಯನ್ನು ಕಡಿಮೆ ಮಾಡಲು ಮೊಸರಿನಲ್ಲಿ ಸ್ವಲ್ಪ ಸಮಯ ನೆನೆಸಿಡಿ. ಸ್ವಲ್ಪ ಸಮಯದ ನಂತರ, ಹಾಗಲಕಾಯಿಯನ್ನು ನೀರಿನಿಂದ ಚೆನ್ನಾಗಿ ತೊಳೆಯಿರಿ. ಇದರ ನಂತರ ಹಾಗಲಕಾಯಿ ಕರಿ ಮಾಡಿದರೆ ಅದರ ಕಹಿ ಕಡಿಮೆಯಾಗುತ್ತದೆ.

ಇದನ್ನೂ ಓದಿ- ಮಣ್ಣಿನ ಕೆಳಗೆ ಬೆಳೆಯುವ ಈ ಗೆಡ್ಡೆ ಮಧುಮೇಹ ನಿಯಂತ್ರಣಕ್ಕೆ ಒಂದು ರಾಮಬಾಣ ಚಿಕಿತ್ಸೆ!

4. ಹಾಗಲಕಾಯಿಯನ್ನು ತೆಂಗಿನ ನೀರಿನೊಂದಿಗೆ ಮ್ಯಾರಿನೇಟ್ ಮಾಡಿ
ಹಾಗಲಕಾಯಿಯ ಕಹಿಯನ್ನು ತೆಂಗಿನ ನೀರನ್ನು ಬಳಸುವುದರ ಮೂಲಕವೂ ಕಡಿಮೆ ಮಾಡಬಹುದು. ಹಾಗಲಕಾಯಿಯನ್ನು ತೆಂಗಿನ ನೀರಿನಲ್ಲಿ ಮ್ಯಾರಿನೇಟ್ ಮಾಡಿ ನಂತರ ಅದರಲ್ಲಿ 15-20 ನಿಮಿಷಗಳ ಕಾಲ ಬಿಡಿ. ಸ್ವಲ್ಪ ಸಮಯದ ನಂತರ, ಅದನ್ನು ಚೆನ್ನಾಗಿ ತೊಳೆಯಿರಿ ಮತ್ತು ನಂತರ ಅದನ್ನು ಬಳಸಿ. ಇದರಿಂದ ಹಾಗಲಕಾಯಿಯ ಕಹಿ ಕಡಿಮೆಯಾಗುತ್ತದೆ.

ಇದನ್ನೂ ಓದಿ-ನಿಮ್ಮ ತಲೆ ಕೂದಲುಗಳು ಕೂಡ ಕೊಲೆಸ್ಟ್ರಾಲ್ ಹೆಚ್ಚಳದ ಸಂಕೇತ ನೀಡುತ್ತವೆ, ಯಾವ ರೀತಿಯ ಸಂಕೇತಗಳು ಇಲ್ಲಿ ತಿಳಿದುಕೊಳ್ಳಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News