Monthly Horoscope September 2022 : ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿನಲ್ಲಿ ತನ್ನ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿರುತ್ತದೆ. ಸೆಪ್ಟೆಂಬರ್ ತಿಂಗಳ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇವೆ. ಮುಂದಿನ ತಿಂಗಳು ಹೇಗಿರುತ್ತದೆ ?  ಯಶಸ್ಸು ಸಿಗುತ್ತದೆಯೇ ಇಲ್ಲವೇ? ಅದೃಷ್ಟ ಕೈ ಹಿಡಿಯಲಿದೆಯಾ ಎಂದು ತಿಳಿದುಕೊಳ್ಳುವ ತವಕ ಖಂಡಿತವಾಗಿಯೂ ಎಲ್ಲರಿಗೂ ಇರುತ್ತದೆ. ಸೆಪ್ಟೆಂಬರ್ 2022 ರ ತಿಂಗಳು 3 ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ. ಈ ತಿಂಗಳು ಈ ರಾಶಿಯವರಿಗೆ  ಹಠಾತ್ ಧನಲಾಭಾವಾಗಲಿದೆ. ಮಾಡುವ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ.  


COMMERCIAL BREAK
SCROLL TO CONTINUE READING

ಈ  ರಾಶಿಯವರ ಅದೃಷ್ಟ ಸೆಪ್ಟೆಂಬರ್‌ನಲ್ಲಿ ಬೆಳಗುತ್ತದೆ  :
ಧನು ರಾಶಿ : ಸೆಪ್ಟೆಂಬರ್ ತಿಂಗಳು ಧನು ರಾಶಿಯವರಿಗೆ ಉತ್ತಮವಾಗಿರುತ್ತದೆ. ಅವರ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಹಣಕಾಸಿನ ಲಾಭದಿಂದಾಗಿ ಆರ್ಥಿಕ ಸ್ಥಿತಿಯು ಬಲಗೊಳ್ಳುತ್ತದೆ. ಕೆಲಸದಲ್ಲಿ ಯಶಸ್ಸು ಸಿಗಲಿದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ. 


ಇದನ್ನೂ ಓದಿ : Numerology: ಈ ದಿನಾಂಕಗಳಲ್ಲಿ ಜನಿಸಿದ ಜನರು ಅತೀ ಬುದ್ದಿವಂತರು ಮತ್ತು ಅತ್ಯಂತ ಅದೃಷ್ಟಶಾಲಿಗಳು


ಕುಂಭ: ಕುಂಭ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳು ತುಂಬಾ ಶುಭಕರವಾಗಿರುತ್ತದೆ. ಇದುವರೆಗೆ ವೃತ್ತಿ ಜೀವನದಲ್ಲಿ ಬರುತ್ತಿದ್ದ ಅಡೆತಡೆಗಳು ನಿವಾರಣೆಯಾಗಲಿದೆ. ಇಲ್ಲಿಯವರೆಗೆ ಕೆಲಸದಲ್ಲಿ ಯಶಸ್ಸು ಪಡೆಯಲು ವಿಳಂಬವಾಗಿದ್ದರೂ ಈಗ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ. ಈ ತಿಂಗಳು ವೃತ್ತಿಜೀವನವು ವೇಗವನ್ನು ಪಡೆಯುತ್ತದೆ. ವ್ಯಾಪಾರಿಗಳಿಗೆ ಭಾರೀ ಲಾಭವಾಗಲಿದೆ. 


ಮೀನ: ಸೆಪ್ಟೆಂಬರ್ 2022 ಮೀನ ರಾಶಿಯವರಿಗೆ ಸಹ ಉತ್ತಮವಾಗಿರುತ್ತದೆ. ಅದೃಷ್ಟದ ಸಹಾಯದಿಂದ ಕೆಲಸವು ಸುಲಭವಾಗಿ ಪೂರ್ಣಗೊಳ್ಳುತ್ತದೆ. ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯಮಿಗಳು ಇಬ್ಬರೂ ಯಶಸ್ಸನ್ನು ಪಡೆಯುತ್ತಾರೆ. ಆದಾಯ ಹೆಚ್ಚಾಗುತ್ತದೆ. ಪ್ರೇಮ ಜೀವನ - ವೈವಾಹಿಕ ಜೀವನ ಉತ್ತಮವಾಗಿರುತ್ತದೆ. 


ಇದನ್ನೂ ಓದಿ : Shani ಸೇರಿದಂತೆ ತನ್ನ ಸ್ವಂತ ರಾಶಿಯಲ್ಲಿ ಗೋಚರಿಸಿದ ಮೂರು ಗ್ರಹಗಳು, ಈ ರಾಶಿಗಳ ಜನರಿಗೆ ವರದಾನಕ್ಕೆ ಸಮ ಈ ಯೋಗ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.