Shani ಸೇರಿದಂತೆ ತನ್ನ ಸ್ವಂತ ರಾಶಿಯಲ್ಲಿ ಗೋಚರಿಸಿದ ಮೂರು ಗ್ರಹಗಳು, ಈ ರಾಶಿಗಳ ಜನರಿಗೆ ವರದಾನಕ್ಕೆ ಸಮ ಈ ಯೋಗ

Planetary Yog: ಶನಿ ಸೇರಿದಂತೆ ಸೂರ್ಯ ಹಾಗೂ ಗುರುಗ್ರಹಗಳು ಪ್ರಸ್ತುತ ತನ್ನದೇ ಆದ ರಾಶಿಯಲ್ಲಿ ಗೋಚರಿಸುತ್ತಿವೆ. ಗ್ರಹಗಳ ಈ ಸ್ಥಿತಿ ತುಂಬಾ ವಿಶೇಷವಾಗಿದೆ. ಗ್ರಹಗಳ ಸ್ಥಿತಿಯಲ್ಲಿ ಈ ರೀತಿ ಸ್ವರಾಶಿ ಗೋಚರ ಹಲವು ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ.  

Written by - Nitin Tabib | Last Updated : Aug 23, 2022, 10:35 PM IST
  • ಶನಿ ಸೇರಿದಂತೆ ಸೂರ್ಯ ಹಾಗೂ ಗುರುಗ್ರಹಗಳು ಪ್ರಸ್ತುತ ತನ್ನದೇ ಆದ ರಾಶಿಯಲ್ಲಿ ಗೋಚರಿಸುತ್ತಿವೆ.
  • ಗ್ರಹಗಳ ಈ ಸ್ಥಿತಿ ತುಂಬಾ ವಿಶೇಷವಾಗಿದೆ.
  • ಗ್ರಹಗಳ ಸ್ಥಿತಿಯಲ್ಲಿ ಈ ರೀತಿ ಸ್ವರಾಶಿ ಗೋಚರ ಹಲವು ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ.
Shani ಸೇರಿದಂತೆ ತನ್ನ ಸ್ವಂತ ರಾಶಿಯಲ್ಲಿ ಗೋಚರಿಸಿದ ಮೂರು ಗ್ರಹಗಳು, ಈ ರಾಶಿಗಳ ಜನರಿಗೆ ವರದಾನಕ್ಕೆ ಸಮ ಈ ಯೋಗ title=
Shani, Jupiter And Sun In Their Own Zodiac

Shani, Jupiter And Sun In Their Own Zodiac - ಶನಿ ಸೇರಿದಂತೆ ಸೂರ್ಯ ಹಾಗೂ ಗುರುಗ್ರಹಗಳು ಪ್ರಸ್ತುತ ತನ್ನದೇ ಆದ ರಾಶಿಯಲ್ಲಿ ಗೋಚರಿಸುತ್ತಿವೆ. ಗ್ರಹಗಳ ಈ ಸ್ಥಿತಿ ತುಂಬಾ ವಿಶೇಷವಾಗಿದೆ. ಗ್ರಹಗಳ ಸ್ಥಿತಿಯಲ್ಲಿ ಈ ರೀತಿ ಸ್ವರಾಶಿ ಗೋಚರ ಹಲವು ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಪ್ರಸ್ತುತ ಸೂರ್ಯ ತನ್ನದೇ ಆದ ಸಿಂಹ ರಾಶಿಯಲ್ಲಿದ್ದರೆ, ಶನಿ ಮಕರ ಹಾಗೂ ಗುರು ಮೀನ ರಾಶಿಯಲ್ಲಿ ಗೋಚರಿಸುತ್ತಿವೆ. 

ಶನಿಯ ಕುರಿತು ಹೇಳುವುದಾದರೆ, ಜುಲೈ 12 ರಿಂದ ಶನಿ ಮಕರರಾಶಿಯಲ್ಲಿ ವಕ್ರ ಭಾವದಲ್ಲಿ ವಿರಾಜಮಾನನಾಗಿದ್ದಾನೆ. ಶನಿಯ ಈ ವಕ್ರಾವಸ್ಥೆ ಅಕ್ಟೋಬರ್ 23ರವರೆಗೆ ಮುಂದುವರೆಯಲಿದೆ. ನಂತರ ಜನವರಿ 17 2023 ರಂದು ಆಟ ಮಕರ ರಾಶಿಯಲ್ಲಿಯೇ ನೇರ ನಡೆ ಅನುಸರಿಸಲಿದ್ದಾನೆ. ಬಳಿಕ ಶನಿ ಕುಂಭ ರಾಶಿಯನ್ನು ಪ್ರವೆಶಿಸಲಿದ್ದಾನೆ. ಅಲ್ಲಿ ಆತ ಮಾರ್ಚ್ 29, 2025ರವರೆಗೆ ಇರಲಿದ್ದಾನೆ. ಶನಿಯನ್ನು ಹೊರತುಪಡಿಸಿ, ಸೂರ್ಯ ಒಂದು ತಿಂಗಳ ಬಳಿಕ ತನ್ನ ರಾಶಿಯನ್ನು ಪರಿವರ್ತಿಸಲಿದ್ದಾನೆ. ಶನಿ ಒಂದೆಡೆ ನಿಮಗೆ ಕರ್ಮಗಳ ಫಲ ನೀಡಿದರೆ, ಗುರು ವಿವಾಹ, ಸಂತಾನ, ಧನ ಹಾಗೂ ವಿದ್ಯೆಯನ್ನು ನೀಡುತ್ತಾನೆ. ರೂರ್ಯ ತನ್ನ ಸ್ವಂತ ರಾಶಿಯಲ್ಲಿರುವುದರಿಂದ, ರಾಜಕೀಯ ಜೀವನದಲ್ಲಿ ವರ್ಚಸ್ವದ ಲಾಭ ನಿಮಗೆ ಸಿಗಲಿದೆ.

ಮಿಥುನ ರಾಶಿ- ಈ ರಾಶಿಯ ಜನರಿಗೆ ಶನಿ, ಸೂರ್ಯ ಹಾಗೂ ಗುರು ಸ್ವರಾಶಿಯಲ್ಲಿ ವಿರಾಜಮಾನರಾಗಿರುವುದು ಅತ್ಯಂತ ಶುಭ ಕಾಕತಾಳೀಯ ಸೃಷ್ಟಿಸುತ್ತಿದೆ. ಈ ರಾಶಿಯ ಜನರಿಗೆ ಬಿಸಿನೆಸ್ ನಲ್ಲಿ ಆರ್ಥಿಕ ಲಾಭ ಸಿಗಲಿದೆ. ಇದಲ್ಲದೆ ಆಡಳಿತಾರೂಢ ಜನರಿಗೆ ಈ ಸಮಯ ತುಂಬಾ ಉತ್ತಮವಾಗಿರಲಿದೆ.

ಇದನ್ನೂ ಓದಿ-24 ಗಂಟೆಗಳಲ್ಲಿ ಈ ರಾಶಿಯವರ ಭಾಗ್ಯ ಬದಲಿಸಲಿದ್ದಾರೆ ಶುಕ್ರ ಮತ್ತು ಚಂದ್ರ

ಕರ್ಕ ರಾಶಿ- ಕರ್ಕ ರಾಶಿಯ ಜನರಿಗೆ ಈ ಮೂರು ಗ್ರಹಗಳ ತಮ್ಮ ಸ್ವರಾಶಿಯಲ್ಲಿನ ಉಪಸ್ಥಿತಿ ಪ್ರಬಲ ಯೋಗ ನಿರ್ಮಿಸಲಿದೆ. ಯಾವುದಾದರೊಂದು ಹಳೆಯ ಪ್ರಕರಣದಲ್ಲಿ ನಿಮಗೆ ಜಯ ಸಿಗಲಿದೆ. ಇದಲ್ಲದೆ ನಿಮಗೆ ಈ ಅವಧಿಯಲ್ಲಿ ಅತ್ಯಧಿಕ ಲಾಭ ಸಿಗಲಿದೆ.

ಇದನ್ನೂ ಓದಿ-ಈ ಮೂರು ರಾಶಿಯವರ ಮೇಲೆ ಅಪಾರ ಕೃಪಾ ದೃಷ್ಟಿ ಹರಿಸಲಿದ್ದಾನೆ ಶನಿ : ಯಶಸ್ಸು ನೀಡಲಿದ್ದಾನೆ ಛಾಯಾ ಪುತ್ರ

ತುಲಾ ರಾಶಿ- ತುಲಾ ರಾಶಿಯ ಜನರಿಗೆ ಈ ಸ್ಥಿತಿ ತುಂಬಾ ವಿಶೇಷವಾಗಿರಲಿದೆ ಹಾಗೂ ಇವರು ಕೈ ಹಾಕುವ ಪ್ರತಿಯೊಂದು ಕೆಲಸದಲ್ಲಿ ಇವರಿಗೆ ಯಶಸ್ಸು ಸಿಗಲಿದೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News