Shani Dev: ಶನಿದೇವನ ಕೃಪೆಯಿಂದ ಈ 3 ರಾಶಿಗಳ ಜನರು ರಾಜನಂತೆ ಜೀವನ ನಡೆಸುತ್ತಾರೆ
ಶನಿದೇವನು ಎಲ್ಲಾ ರಾಶಿಗಳಿಗೆ ಕ್ರೂರನಲ್ಲ. ಜ್ಯೋತಿಷ್ಯದ ಪ್ರಕಾರ ಕೆಲವು ರಾಶಿಗಳನ್ನು ಶನಿ ದೇವನಿಗೆ ಪ್ರಿಯವೆಂದು ಪರಿಗಣಿಸಲಾಗುತ್ತದೆ. ಶನಿ ದೇವನು ಈ ರಾಶಿಯ ಜನರಿಗೆ 12 ತಿಂಗಳವರೆಗೆ ದಯೆ ತೋರುತ್ತಾನೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
ನವದೆಹಲಿ: ಜ್ಯೋತಿಷ್ಯದಲ್ಲಿ ಶನಿಯನ್ನು ನ್ಯಾಯದ ದೇವರು ಮತ್ತು ಕರ್ಮವನ್ನು ಕೊಡುವ ದೇವರೆಂದು ಕರೆಯಲಾಗುತ್ತದೆ. ಯಾವುದೇ ಒಬ್ಬ ವ್ಯಕ್ತಿ ಆತನ ಒಳ್ಳೆಯ ಮತ್ತು ಕೆಟ್ಟ ಕರ್ಮಗಳ ಪ್ರಕಾರ ಫಲ ಪಡೆಯುತ್ತಾನೆಂದು ಹೇಳಲಾಗುತ್ತದೆ. ಕೆಟ್ಟ ಕೆಲಸಗಳನ್ನು ಮಾಡುವವರು ಶನಿದೇವನಿಂದ ಕೆಡುಕನ್ನು ಎದುರಿಸಬೇಕಾಗುತ್ತದೆ. ಮತ್ತೊಂದೆಡೆ ಶನಿದೇವನು ಒಳ್ಳೆಯ ಕಾರ್ಯಗಳನ್ನು ಮಾಡುವವರಿಗೆ ವಿಶೇಷ ಆಶೀರ್ವಾದ ನೀಡುತ್ತಾನೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಶನಿಯಿಂದ ಆಶೀರ್ವಾದ ಪಡೆಯುವ ಕೆಲವು ರಾಶಿಯ ಜನರಿದ್ದಾರೆ. ಇವರು ಶನಿದೇವನ ಕೃಪೆಯಿಂದ ರಾಜನಂತೆ ಜೀವನ ನಡೆಸುತ್ತಾರೆ.
ಶನಿಯು ಎಲ್ಲಾ 12 ರಾಶಿಗಳ ಸ್ಥಳೀಯರ ಮೇಲೆ ಕೆಟ್ಟ ದೃಷ್ಟಿ ಬೀರುವುದಿಲ್ಲ. ಕೆಲವು ರಾಶಿಗಳನ್ನು ಅವರ ನೆಚ್ಚಿನವೆಂದು ಪರಿಗಣಿಸಲಾಗುತ್ತದೆ. ಶನಿಯ ಸಾಡೇ ಸಾತಿ ಮತ್ತು ಶನಿ ಧೈಯಾ ಇತ್ಯಾದಿಗಳು ಈ ರಾಶಿಗಳ ಜನರ ಮೇಲೆ ಪರಿಣಾಮ ಬೀರುವುದಿಲ್ಲ. ಇಂದು ನಾವು ಅಂತಹ 3 ರಾಶಿಗಳ ಬಗ್ಗೆ ತಿಳಿಸಲಿದ್ದೇವೆ. ಈ ರಾಶಿಯವರು 12 ತಿಂಗಳ ಕಾಲ ಶನಿಯ ವಿಶೇಷ ಆಶೀರ್ವಾದ ಹೊಂದಲಿದ್ದಾರೆ.
ಇದನ್ನೂ ಓದಿ: Budh Gochar 2023 : ಬುಧ ಸಂಕ್ರಮಣ 2023 ರಿಂದ ಬುಧಾದಿತ್ಯ ಯೋಗ, ಈ ರಾಶಿಯವರಿಗೆ ಭಾರಿ ಆರ್ಥಿಕ ಲಾಭ, ಉದ್ಯೋಗದಲ್ಲಿ ಪ್ರಗತಿ!
ಶನಿಯು ಈ ರಾಶಿಗಳ ಜನರಿಗೆ ದಯೆ ತೋರುತ್ತಾನೆ
ತುಲಾ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತುಲಾ ರಾಶಿಯನ್ನು ಶನಿ ದೇವನ ಉನ್ನತ ರಾಶಿ ಎಂದು ಪರಿಗಣಿಸಲಾಗುತ್ತದೆ. ಈ ಕಾರಣಕ್ಕಾಗಿ ತುಲಾ ರಾಶಿಯ ಜನರು ಶನಿದೇವನ ನೆಚ್ಚಿನ ರಾಶಿಗಳಲ್ಲಿ ಸೇರಿದ್ದಾರೆ. ಈ ಜನರು ಬುದ್ಧಿವಂತರು ಮತ್ತು ಶ್ರಮಜೀವಿಗಳು. ಇವರು ಯಾವಾಗಲೂ ಸತ್ಯದ ಪರ ನಿಂತು ಇತರರನ್ನು ಬೆಂಬಲಿಸುತ್ತಾರೆ. ಶನಿಯ ದಶಾವು ಇತರ ರಾಶಿಗಳ ಜೀವನದಲ್ಲಿ ಕಂಡುಬರುವಷ್ಟು ಈ ರಾಶಿಯ ಜನರ ಮೇಲೆ ಪರಿಣಾಮ ಬೀರುವುದಿಲ್ಲವೆಂದು ನಂಬಲಾಗಿದೆ.
ಮಕರ ರಾಶಿ: ಶನಿಯು ಮಕರ ರಾಶಿಯ ಅಧಿಪತಿ, ಆದ್ದರಿಂದ ಮಕರ ರಾಶಿಯನ್ನು ಶನಿ ದೇವರಿಗೆ ಪ್ರಿಯವೆಂದು ಪರಿಗಣಿಸಲಾಗುತ್ತದೆ. ಈ ರಾಶಿಯ ಜನರು ಪ್ರತಿಭಾವಂತರು ಮತ್ತು ಬುದ್ಧಿವಂತರು. ಇವರು ಯಾವುದೇ ಕೆಲಸ ಕೈಗೆತ್ತಿಕೊಂಡಾಗ ಅದರಲ್ಲಿ ಯಶಸ್ಸು ಪಡೆಯಲು ಪ್ರಯತ್ನಮಾಡುತ್ತಾರೆ. ಇಷ್ಟೇ ಅಲ್ಲ ಈ ಜನರು ಯಾವುದೇ ಕಷ್ಟವನ್ನು ದೃಢವಾಗಿ ಎದುರಿಸುತ್ತಾರೆ ಮತ್ತು ಸುಲಭವಾಗಿ ಬಿಟ್ಟುಕೊಡುವುದಿಲ್ಲ. ಕಠಿಣ ಪರಿಶ್ರಮದ ಮೇಲೆ ಜೀವನದಲ್ಲಿ ಏನನ್ನಾದರೂ ಸಾಧಿಸುತ್ತಾರೆ. ಶನಿಯ ವಕ್ರದೃಷ್ಟಿ ಈ ಜನರ ಮೇಲೆ ಪರಿಣಾಮ ಬೀರುವುದಿಲ್ಲ.
ಇದನ್ನೂ ಓದಿ: Astro Tips: ಏಕಾದಶಿಯಂದು ಈ ಕೆಲಸ ಮಾಡಿದ್ರೆ ನಿಮ್ಮ ಮನೆಯಲ್ಲಿ ಹಣದ ಸುರಿಮಳೆಯಾಗಲಿದೆ!
ಕುಂಭ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಯು ಕುಂಭ ರಾಶಿಯ ಅಧಿಪತಿ. ಈ ರಾಶಿಯ ಜನರು ಶಾಂತಿಗಾಗಿ ಒಲವು ಹೊಂದಿರುತ್ತಾರೆ. ಇವರು ಶಿಸ್ತು, ಕಠಿಣ ಪರಿಶ್ರಮ, ತಾಳ್ಮೆ ಮತ್ತು ಹಠಮಾರಿಗಳು. ಇವರು ಯಾವುದೇ ಕೆಲಸ ಮಾಡಲು ನಿರ್ಧರಿಸಿದ ನಂತರ ಅದರಲ್ಲಿ ಯಶಸ್ಸನ್ನು ಸಾಧಿಸುತ್ತಲೇ ಇರುತ್ತಾರೆ. ಇವರು ಆರ್ಥಿಕವಾಗಿ ಸಬಲರಾಗಿರುತ್ತಾರೆ. ಈ ಜನರು ಯಾವೂದನ್ನು ಸುಲಭವಾಗಿ ಬಿಟ್ಟುಕೊಡುವುದಿಲ್ಲ. ಪ್ರತಿ ಸಮಸ್ಯೆಯನ್ನು ಧೈರ್ಯವಾಗಿ ಎದುರಿಸುತ್ತಾರೆ. ಶನಿಯ ಕೃಪೆಯಿಂದ ಇವರು ಅಶುಭ ಪರಿಣಾಮಗಳಿಗೆ ತುತ್ತಾಗುವುದಿಲ್ಲ.
(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.