ಮೀನ ರಾಶಿಯಲ್ಲಿ ವ್ಯಾಪಾರ ಕಾರಕ ಬುಧನ ಉದಯ, ಈ ರಾಶಿಗಳ ಜನರು ಮುಟ್ಟಿದ್ದೆಲ್ಲ ಚಿನ್ನ!

Mercury Constellation: ಪಂಚಾಂಗದ ಪ್ರಕಾರ ಶೀಘ್ರದಲ್ಲಿಯೇ ಮೀನ ರಾಶಿಯಲ್ಲಿ ವ್ಯಾಪಾರದ ಕಾರಕ ಗ್ರಹ ಮತ್ತು ಗ್ರಹಗಳ ರಾಜಕುಮಾರ ಬುಧನ ಉದಯ ನೆರವೇರಲಿದೆ. ಬುಧನ ಈ ಉದಯದಿಂದ ಮೂರು ರಾಶಿಗಳ ಜನರಿಗೆ ಅಪಾರ ಧನ ಪ್ರಾಪ್ತಿ ಮತ್ತು ಬಡ್ತಿಯ ಯೋಗಗಳು ನಿರ್ಮಾಣಗೊಳ್ಳುತ್ತಿವೆ. ಆ ಮೂರೂ ಅದೃಷ್ಟದ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : Feb 20, 2023, 04:54 PM IST
  • ಬುಧನ ಉದಯ ಕುಂಭ ರಾಶಿಯ ಜನರಿಗೆ ಅನುಕೂಲಕರ ಸಾಬೀತಾಗಲಿದೆ.
  • ಏಕೆಂದರೆ ಬುಧ ನಿಮ್ಮ ರಾಶಿಯಿಂದ ದ್ವಿತೀಯ ಭಾವದಲ್ಲಿ ಉದಯಿಸಲಿದ್ದಾನೆ.
  • ಸಂಪತ್ತು ಮತ್ತು ಮಾತಿನ ಸ್ಥಳವೆಂದು ಇದನ್ನು ಪರಿಗಣಿಸಲಾಗಿದೆ.
ಮೀನ ರಾಶಿಯಲ್ಲಿ ವ್ಯಾಪಾರ ಕಾರಕ ಬುಧನ ಉದಯ, ಈ ರಾಶಿಗಳ ಜನರು ಮುಟ್ಟಿದ್ದೆಲ್ಲ ಚಿನ್ನ! title=
ಮೀನ ರಾಶಿಯಲ್ಲಿ ಬುಧನ ಉದಯ

Budh Uday 2023: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳು ಕಾಲಕಾಲಕ್ಕೆ ಉದಯಿಸುತ್ತವೆ ಮತ್ತು ಅಸ್ತಮಿಸುತ್ತವೆ. ಅವುಗಳ ಪರಿಣಾಮವು ಮಾನವ ಜೀವನ ಮತ್ತು ಭೂಮಿಯ ಮೇಲೆ ಕಂಡುಬರುತ್ತದೆ. ವ್ಯಾಪಾರ ಮತ್ತು ಬುದ್ಧಿವಂತಿಕೆಯನ್ನು ಕಾರಕ ಬುಧ ಗ್ರಹವು ಮಾರ್ಚ್‌ನಲ್ಲಿ ಉದಯಿಸಲಿದೆ. ಇದರ ಪ್ರಭಾವವು ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ಕಂಡುಬರಲಿದೆ. ಆದರೆ 3 ರಾಶಿಗಳ ಜಾತಕದವರ ಪಾಲಿಗೆ ಇದು ವಿಶೇಷವಾಗಿರಲಿದೆ, ಅವರಿಗೆ ಈ ಅವಧಿಯಲ್ಲಿ ಪ್ರತಿ ಕೆಲಸದಲ್ಲಿ ವಿತ್ತೀಯ ಲಾಭ ಮತ್ತು ಯಶಸ್ಸಿನ ಸಾಧ್ಯತೆಗಳಿವೆ. ಆ ಅದೃಷ್ಟವಂತ ರಾಶಿಗಳು ಈ ಕೆಳಗಿನಂತಿವೆ.

ಕುಂಭ ರಾಶಿ
ಬುಧನ ಉದಯ ಕುಂಭ ರಾಶಿಯ ಜನರಿಗೆ ಅನುಕೂಲಕರ ಸಾಬೀತಾಗಲಿದೆ ಏಕೆಂದರೆ ಬುಧ ನಿಮ್ಮ ರಾಶಿಯಿಂದ ದ್ವಿತೀಯ ಭಾವದಲ್ಲಿ ಉದಯಿಸಲಿದ್ದಾನೆ. ಸಂಪತ್ತು ಮತ್ತು ಮಾತಿನ ಸ್ಥಳವೆಂದು ಇದನ್ನು ಪರಿಗಣಿಸಲಾಗಿದೆ. ಹೀಗಾಗಿ ಈ ಅವಧಿಯಲ್ಲಿ ನೀವು ಹಠಾತ್ ಧನಲಾಭ ಪಡೆಯಬಹುದು. ಅಲ್ಲದೆ, ಈ ಸಮಯದಲ್ಲಿ ನೀವು ಪಿತ್ರಾರ್ಜಿತ ಆಸ್ತಿಯ ಲಾಭವನ್ನು ಸಭಾ ಪಡೆಯಬಹುದು. ಈ ಅವಧಿಯಲ್ಲಿ ನಿಮ್ಮ ಮಾತಿನಲ್ಲಿ ಸಾಕಷ್ಟು ಪ್ರಭಾವ ಕಂಡುಬರಲಿದ್ದು, ಇದರಿಂದ ಜನರು ನಿಮ್ಮ ಬಗ್ಗೆ ಪ್ರಭಾವಿತರಾಗಬಹುದು. ಇನ್ನೊಂದೆಡೆ, ಆರ್ಥಿಕ ಸಮಸ್ಯೆಗಳು ಅನ್ತ್ಯವಾಗಳಿವೆ ಮತ್ತು ನೆನೆಗುದಿಗೆ ಬಿದ್ದ ನಿಮ್ಮ ಕಾರ್ಯಗಳು ವೇಗ ಪಡೆದುಕೊಳ್ಳಲಿವೆ. ಮಾರ್ಕೆಟಿಂಗ್ ಕೆಲಸಗಾರರು, ಮಾಧ್ಯಮ ಮತ್ತು ಶಿಕ್ಷಣದೊಂದಿಗೆ ಸಂಬಂಧ ಹೊಂದಿರುವವರಿಗೆ, ಈ ಸಮಯ ಅತ್ಯುತ್ತಮ ಸಾಬೀತಾಗಲಿದೆ.

ಇದನ್ನೂ ಓದಿ-ಮಾರ್ಚ್ 13 ರಂದು ಗ್ರಹಗಳ ಸೇನಾಪತಿಯ ಮಿಥುನ ಗೋಚರ, 3 ರಾಶಿಗಳ ಜನರಿಗೆ ಧನಲಾಭ-ಭಾಗ್ಯೋದಯದ ಯೋಗ!

ವೃಷಭ ರಾಶಿ
ಬುಧ ಗ್ರಹದ ಉದಯವು ನಿಮಗೆ ಮಂಗಳಕರ ಮತ್ತು ಸಾಕಷ್ಟು ಫಲದಾಯಿ ಸಾಬೀತಾಗಲಿದೆ, ಏಕೆಂದರೆ ಬುಧ ಗ್ರಹವು ನಿಮ್ಮ ಸಂಕ್ರಮಣದ ಜಾತಕದ ಆದಾಯದ ಮನೆಯಲ್ಲಿ ಉದಯಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ಭಾರಿ ಹೆಚ್ಚಳವಾಗಬಹುದು. ಇದರೊಂದಿಗೆ ಹೊಸ ಆದಾಯದ ಮೂಲಗಳನ್ನು ಸೃಷ್ಟಿಯಾಗುವ ಎಲ್ಲಾ ಲಕ್ಷಣಗಳಿವೆ. ಈ ಅವಧಿಯಲ್ಲಿ ನೀವು ಆರ್ಥಿಕ ಸುಧಾರಣೆಗಾಗಿ ಮಾಡಿದ ಯೋಜನೆಗಳು ಸಹ ಯಶಸ್ವಿಯಾಗಲಿವೆ. ವ್ಯಾಪಾರಸ್ಥರಿಗೆ ಈ ಸಮಯ ಸಾಕಷ್ಟು ಅನುಕೂಲಕರವಾಗಿದ್ದು, ವ್ಯಾಪಾರದಲ್ಲಿ ಉತ್ತಮ ಪ್ರಾಪ್ತಿಯಾಗಲಿದೆ. ಅಲ್ಲದೆ, ನೀವು ಷೇರು ಮಾರುಕಟ್ಟೆ, ಬೆಟ್ಟಿಂಗ್ ಮತ್ತು ಲಾಟರಿಯಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದರೆ, ನೀವು ಅದನ್ನು ಮಾಡಬಹುದು. ಸಮಯ ಅನುಕೂಲಕರವಾಗಿದೆ.

ಇದನ್ನೂ ಓದಿ-Ugadi 2023: ಮಾರ್ಚ್ 22 ರಿಂದ ಹಿಂದೂ ಹೊಸವರ್ಷ ಆರಂಭ, 3 ರಾಶಿಗಳ ಜನರ ಜೀವನದಲ್ಲಿ ಭಾಗ್ಯೋದಯ!

ಮಿಥುನ ರಾಶಿ
ಬುಧ ಗ್ರಹದ ಉದಯವು ಮಿಥುನ ರಾಶಿಯವರಿಗೆ ವೃತ್ತಿ ಮತ್ತು ವ್ಯವಹಾರದ ವಿಷಯದಲ್ಲಿ ಅತ್ಯಂತ ಮಂಗಳಕರವೆಂದು ಸಾಬೀತಾಗಲಿದೆ. ಏಕೆಂದರೆ ಬುಧ ಗ್ರಹವು ನಿಮ್ಮ ರಾಶಿಯ ದಶಮ ಭಾವದಲ್ಲಿ ಉದಯಿಸಲಿದ್ದಾನೆ. ಇದನ್ನು ಕಾರ್ಯಕ್ಷೇತ್ರ ಹಾಗೂ ನೌಕರಿಯ ಸ್ಥಾನ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಈ ಅವಧಿಯಲ್ಲಿ, ಉದ್ಯೋಗಿಗಳು ಕಿರಿಯ ಮತ್ತು ಹಿರಿಯರ ಬೆಂಬಲವನ್ನು ಪಡೆಯಬಹುದು. ಇದರೊಂದಿಗೆ, ವೇತನ ಪದಯೂಯುವ ಜನರಿಗೆ ಕಚೇರಿಯಲ್ಲಿ ಬಡ್ತಿ ಮತ್ತು ಇನ್ಕ್ರೀಮೆಂಟ್ ಸಿಗುವ ಎಲ್ಲಾ ಸಾಧ್ಯತೆಗಳಿವೆ.  ಮತ್ತೊಂದೆಡೆ, ಈ ಅವಧಿಯು ದೈನಂದಿನ ವ್ಯಾಪಾರಿಗಳಿಗೆ ತುಂಬಾ ಉತ್ತಮವಾಗಿದೆ. ಅವರಿಗೆ ಸಾಕಷ್ಟು ಆರ್ಥಿಕ ಲಾಭ ಸಿಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನಿಮ್ಮ ತಂದೆಯೊಂದಿಗಿನ ನಿಮ್ಮ ಸಂಬಂಧವು ಉತ್ತಮವಾಗಿರುತ್ತದೆ.

ಇದನ್ನೂ ಓದಿ-Auspicious Rajyog: 617 ವರ್ಷಗಳ ಬಳಿಕ 3 ರಾಜಯೋಗಗಳು, 4 ರಾಶಿಗಳ ಜನರಿಗೆ ಭಾರಿ ಧನಲಾಭದ ಪ್ರಬಲ ಯೋಗ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News