ಬೆಂಗಳೂರು : ಜಾತಕದಲ್ಲಿ ಶನಿ ದೇವನ ಕೃಪಾ ದೃಷ್ಟಿ ಇದ್ದರೆ, ವ್ಯಕ್ತಿಯ ಜೀವನ ಸಂತೋಷದಿಂದ ನಡೆಯುತ್ತದೆ. ಶನಿ ದೇವನು ಯಾರ ಮೇಲಾದರೆ ಮುನಿಸಿಕೊಂಡರೆ ಆ ವ್ಯಕ್ತಿಯ ಜೀವನ ಹಾಳಾದಂತೆ. ಕೈ ಹಾಕಿದ ಕೆಲಸಗಳೆಲ್ಲವೂ ಕೆಡುತ್ತದೆ. ಆರ್ಥಿಕ ನಷ್ಟವನ್ನು ಎದುರಿಸಬೇಕಾಗುತ್ತದೆ. ಈ ಬಾರಿಯ ಶನಿ ಜಯಂತಿಯನ್ನು ಮೇ 30 ರಂದು ಆಚರಿಸಲಾಗುವುದು. ಶನಿದೇವನ ಆಶೀರ್ವಾದ ಪಡೆಯಲು ಈ ದಿನ ಶೇಷ್ಠ ಎಂದು ಹೇಳಲಾಗುತ್ತದೆ. ಈ ದಿನ ಮಾಡುವ ಶನಿದೇವನ ಪೂಜೆ ಮತ್ತು ಪರಿಹಾರಗಳು ಬಹಳಷ್ಟು ಪ್ರಯೋಜನಗಳನ್ನು ನೀಡುತ್ತವೆ. ಜ್ಯೇಷ್ಠ ಮಾಸದ ಅಮಾವಾಸ್ಯೆಯಂದು ಶನಿ ಜಯಂತಿ ಬರುತ್ತಿದೆ. 


COMMERCIAL BREAK
SCROLL TO CONTINUE READING

ರೂಪುಗೊಳ್ಳಲಿದೆ 2 ಶುಭ ಯೋಗ :  
ಮೇ 30 ರಂದು ಶನಿ ಜಯಂತಿಯಂದು 2 ಅತ್ಯಂತ ಶುಭ ಯೋಗಗಳು ರೂಪುಗೊಳ್ಳುತ್ತಿವೆ. ಈ ಶುಭ ಯೋಗಗಳು ಯಾವುವೆಂದರೆ ಸುಕರ್ಮ ಯೋಗ ಮತ್ತು ಸರ್ವಾರ್ಥ ಸಿದ್ಧಿ ಯೋಗ. ಈ ಯೋಗಗಳಲ್ಲಿ ಶನಿ ದೇವರನ್ನು ವಿಧಿ ವಿಧಾನಗಳೊಂದಿಗೆ ಪೂಜಿಸಿದರೆ ಎಲ್ಲಾ ತೊಂದರೆಗಳು ದೂರವಾಗುತ್ತವೆ ಮತ್ತು ಇಷ್ಟಾರ್ಥಗಳು ಈಡೇರುತ್ತವೆ. ಸರ್ವಾರ್ಥ ಸಿದ್ಧಿ ಯೋಗವು ಮೇ 30 ರಂದು ಬೆಳಿಗ್ಗೆ 07:12 ರಿಂದ ಪ್ರಾರಂಭವಾಗಲಿದ್ದು, ಮರುದಿನ ಮೇ 31 ರಂದು ಬೆಳಿಗ್ಗೆ 05:24 ರವರೆಗೆ ಮುಂದುವರಿಯುತ್ತದೆ. ಶನಿ ದೇವನನ್ನು ಪೂಜಿಸಲು ಈ ಯೋಗವು ಅತ್ಯಂತ ಮಂಗಳಕರವಾಗಿದೆ. ಮೇ 30 ರಂದು ಸೂರ್ಯೋದಯದಿಂದ ರಾತ್ರಿ 11:39 ರವರೆಗೆ ಸುಕರ್ಮ ಯೋಗವಿದೆ. ಈ ಯೋಗವು ಕೂಡಾ ಮಂಗಳಕರವಾಗಿದ್ದು, ಶುಭ ಕಾರ್ಯಗಳಿಗೆ ತುಂಬಾ ಒಳ್ಳೆಯದು ಎಂದು ಹೇಳಲಾಗಿದೆ. 


ಇದನ್ನೂ ಓದಿ : Tulsi Puja Niyam: ನಿಯಮಿತ ತುಳಸಿ ಪೂಜೆಯಿಂದ ಸಿಗುತ್ತೆ ಲಕ್ಷ್ಮೀ ದೇವಿ ಆಶೀರ್ವಾದ, ಆದರೆ ಈ ನಿಯಮಗಳನ್ನು ನಿರ್ಲಕ್ಷಿಸಬೇಡಿ


ಶನಿ ಜಯಂತಿಯಂದು ಈ ಕೆಲಸ ಮಾಡಿ :
ಶನಿ ಜಯಂತಿಯ ದಿನದಂದು ಶನಿದೇವನನ್ನು ವಿಧಿವಿಧಾನಗಳೊಂದಿಗೆ ಪೂಜಿಸಬೇಕು. ಶನಿ ದೇವಸ್ಥಾನಕ್ಕೆ ತೆರಳಿ ಎಳ್ಳೆಣ್ಣೆ, ಹೂವು, ಕಪ್ಪು ಎಳ್ಳು, ಉದ್ದಿನಬೇಳೆ, ಇತ್ಯಾದಿಗಳನ್ನು ಅರ್ಪಿಸಬೇಕು. ಎಳ್ಳೆಣ್ಣೆ ದೀಪವನ್ನು ಬೆಳಗಬೇಕು. ಈ ದಿನ ಶನಿ ಚಾಲೀಸವನ್ನು ಪಠಿಸಿದರೆ ಶುಭ ಫಲ ಕರುಣಿಸುತ್ತಾನಂತೆ ಶನಿ ಮಹಾತ್ಮ.  ಇದರೊಂದಿಗೆ ಶನಿದೇವನಿಗೆ ಇಷ್ಟವಾಗುವ ಕೆಲಸ ಕೂಡಾ ಮಾಡಬೇಕು. ಅಂದರೆ ಅಸಹಾಯಕ, ಬಡವರಿಗೆ ಸಹಾಯ ಮಾಡುವುದು. ಅವರಿಗೆ ಆಹಾರ ನೀಡುವುದು. ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ದಾನ ಧರ್ಮ ಮಾಡಿ. ಶನಿದೇವನು ವ್ಯಕ್ತಿಯು ಕಾರ್ಯಗಳಿಗೆ ಅನುಗುಣವಾಗಿ ಫಲವನ್ನು ನೀಡುತ್ತಾನೆ. ಆದ್ದರಿಂದ ಒಳ್ಳೆಯ ಕಾರ್ಯಗಳನ್ನು ಮಾಡುವುದರಿಂದ ಶನಿ ಮಹಾತ್ಮನ ಕೃಪೆ ಸಿಗುತ್ತದೆ.  ಶನಿ ಸಾಡೇ ಸಾತಿ ಮತ್ತು ಧೈಯ್ಯಾದಲ್ಲಿ ಈ ಪರಿಹಾರಗಳು ಪರಿಹಾರವನ್ನು ನೀಡುತ್ತವೆ. 


ಇದನ್ನೂ ಓದಿ :  Jyeshtha Month 2022: ವೈಶಾಖ ಹುಣ್ಣಿಮೆಯ ಬಳಿಕ ಜೇಷ್ಠ ಮಾಸ ಆರಂಭ, ಭಾಗ್ಯವೃದ್ಧಿ ಹಾಗೂ ಪುಣ್ಯ ಪ್ರಾಪ್ತಿಗೆ ಈ 8 ಕೆಲಸಗಳನ್ನು ಮಾಡಿ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.