ಬೆಂಗಳೂರು : ಶನಿ ಗ್ರಹ ಅಂದ ಕೂಡಲೇ ಸಾಮಾನ್ಯವಾಗಿ ಎಲ್ಲರ ಮನದಲ್ಲಿಯೂ ಭಯ ಮೂಡುತ್ತದೆ.  ಶನಿ ಗ್ರಹವನ್ನು ಅಶುಭ ಗ್ರಹ ಎಂದೇ ಕರೆಯಲಾಗುತ್ತದೆ. ಆದರೆ ಶನಿದೇವನು (Shani deva) ವ್ಯಕ್ತಿಯು ಮಾಡುವ ಕೆಲಸವನ್ನು ಅವಲಂಬಿಸಿ ಶುಭ ಅಥವಾ ಅಶುಭ ಫಲಿತಾಂಶಗಳನ್ನು ಕರುಣಿಸುತ್ತಾನೆ. ಶನಿ ದೇವನು ಖಂಡಿತವಾಗಿಯೂ ವ್ಯಕ್ತಿಯ ಮೇಲೆ ತನ್ನ ಪ್ರಭಾವವನ್ನು ಬೀರುತ್ತಾನೆ. ಅದು ಶುಭವಾದರೂ ಆಗಬಹುದು, ಅಶುಭ ಫಲಿತಾಂಶವಾದರೂ ಆಗಬಹುದು. ವ್ಯಕ್ತಿಯ ಕರ್ಮದ ಆಧಾರದ ಮೇಲೆ ಕರ್ಮ ಫಲದಾತ ಫಲ ನೀಡುತ್ತಾನೆ ಎನ್ನುವುದು ನಂಬಿಕೆ (Shani effect on zodiac sign). ಆದರೆ  ಶನಿದೇವನು ಕೆಟ್ಟ ಫಲವನ್ನು ಮಾತ್ರ ನೀಡುತ್ತಾನೆ ಎನ್ನುವ ಭಯ ಜನರ ಮನಸ್ಸಿನಲ್ಲಿದೆ. ಜೀವನದಲ್ಲಿ ಏನೇ ತೊಂದರೆಯಾದರೂ ಅದಕ್ಕೆ ಶನೀಶ್ವರನೇ ಕಾರಣ ಎಂದು ಅನೇಕರು ಅಂದುಕೊಳ್ಳುತ್ತಾರೆ.  ಆದರೆ ಇದು ಸತ್ಯವಲ್ಲ. ಶನಿ ಮಹಾತ್ಮ ಕೇವಲ ಕಷ್ಟವನ್ನು ಮಾತ್ರ ನೀಡುವುದಿಲ್ಲ, ಇಷ್ಟಾರ್ಥಗಳನ್ನು ಕೂಡಾ ನೆರವೇರಿಸುತ್ತಾನೆ. 


COMMERCIAL BREAK
SCROLL TO CONTINUE READING

ಏಪ್ರಿಲ್ 28, 2022 ರಂದು ಗುರುವಾರ ಬೆಳಿಗ್ಗೆ 6.20 ಕ್ಕೆ ಕುಂಭ ರಾಶಿಯಲ್ಲಿ ಶನಿದೇವನ ಸಂಕ್ರಮಣ ನಡೆಯಲಿದೆ (Shani transit). 28ನೇ ಏಪ್ರಿಲ್‌ನಿಂದ ಜೂನ್ 4ನೇ ತಾರೀಕಿನವರೆಗೆ, ಕುಂಭ (Aquarius) ರಾಶಿಯಲ್ಲಿಯೇ ಇರಲಿದ್ದಾನೆ. ಇದರ ಪರಿಣಾಮ ಕೂಡಾ ರಾಶಿಗಳ ಮೇಲೇ ಆಗಲಿದೆ. 4ನೇ ಜೂನ್‌ನಿಂದ 12ನೇ ಜುಲೈವರೆಗೆ ಮತ್ತೆ ಶನಿಯ ಹಿಮ್ಮುಖ ಚಲನೆ ಇರುತ್ತದೆ.  ಜುಲೈ 13 ರಿಂದ  ಶನಿಯ ಪ್ರವೇಶ ಮಕರ ರಾಶಿಗೆ ಆಗಲಿದೆ. ಅಂದರೆ ಒಟ್ಟು  76 ದಿನಗಳ ಕಾಲ ಶನಿ ಕುಂಭ ರಾಶಿಯಲ್ಲಿ ಸಂಕ್ರಮಿಸಲಿದ್ದಾನೆ (shani rashi parivarthane). 


ಇದನ್ನೂ ಓದಿ : Astrology: ಈ 4 ರಾಶಿಯ ವ್ಯಕ್ತಿಗಳು ಪ್ರತಿಯೊಂದು ಕೆಲಸದಲ್ಲಿಯೂ ತಮ್ಮಿಷ್ಟದಂತೆ ನಡೆದುಕೊಳ್ಳುತ್ತಾರೆ!


ಮಕರ : ಮಕರ ರಾಶಿಯವರಿಗೆ ಶನಿ ದೇವನು (Shani deva) ಅತ್ಯಂತ ಮಂಗಳಕರ ಗ್ರಹವೆಂದು ಪರಿಗಣಿಸಲಾಗಿದೆ. ಏಕೆಂದರೆ ಲಗ್ನ ಮತ್ತು ಧನೇಶನ ಉಪಸ್ಥಿತಿಯಿಂದಾಗಿ, ಈ ರಾಶಿಯವರು ಎಲ್ಲಾ ಸೌಲಭ್ಯಗಳನ್ನು ಪಡೆಯುತ್ತಾರೆ. ಇಲ್ಲಿ ಎರಡನೇಯ ಮನೆಯಲ್ಲಿ ಗೋಚರಿಸಲಿದ್ದಾನೆ. ಈ ಪರಿಸ್ಥಿತಿಯಲ್ಲಿ, ಶನಿದೇವನು ತನ್ನ ಸಂಪೂರ್ಣಫಲವನ್ನು ನೀಡುತ್ತಾನೆ. ಎರಡನೇ ಮನೆಯು ಕುಟುಂಬದ ಮನೆಯಾಗಿರುತ್ತದೆ.  ಶನಿದೇವನು ತನ್ನ ಪ್ರಭಾವದಿಂದ ಕುಟುಂಬದಲ್ಲಿ ಶುಭ ಕಾರ್ಯಗಳನ್ನು ಹೆಚ್ಚಿಸಲಿದ್ದಾನೆ. ಕುಟುಂಬದಲ್ಲಿ ಧನಾತ್ಮಕ ಪರಿಣಾಮಗಳನ್ನು ಬೀರಲಿದ್ದಾನೆ. ಹಣಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಪ್ರಗತಿಯಾಗಲಿದೆ (Saturn transit effects). 


ನಾಲ್ಕನೇ ಮನೆಯ ಮೇಲೆ ಶನಿಯ ದೃಷ್ಟಿ ಕ್ಷೀಣಿಸಲಿದೆ. ಇಂತಹ ಪರಿಸ್ಥಿತಿಯಲ್ಲಿ ತಾಯಿಯ ಆರೋಗ್ಯದಲ್ಲಿ ಏರುಪೇರಾಗಬಹುದು. ಗೃಹ ಸಮಸ್ಯೆಗಳು ಹೆಚ್ಚಾಗಬಹುದು. ಮನೆಯಿಂದ ದೂರವಿರುವ ಸಂದರ್ಭ ಎದುರಾಗಬಹುದು. ಭೂಮಿ, ಆಸ್ತಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಅಡಚಣೆಯಾಗಬಹುದು. ಶನಿಯ ಮುಂದಿನ ದೃಷ್ಟಿ ಎಂಟನೇ ಮನೆಯ ಮೇಲೆ ಇರುತ್ತದೆ. ಇದರ ಪರಿಣಾಮವಾಗಿ ಹೊಟ್ಟೆ ಮತ್ತು ಕಾಲಿನ ತೊಂದರೆಗಳು ತಲೆದೋರಬಹುದು. ಆಂತರಿಕ ಸಮಸ್ಯೆಗಳು ಮತ್ತು ಆರೋಗ್ಯ ಸಮಸ್ಯೆಗಳು ಕಾಲಕಾಲಕ್ಕೆ ಕಾಣಿಸಿಕೊಳ್ಳಬಹುದು. 


ಶನಿಯ ದೃಷ್ಟಿಯು ಲಾಭದ ಮನೆಯ ಮೇಲೂ ಇರುತ್ತದೆ.  ಅಂತಹ ಪರಿಸ್ಥಿತಿಯಲ್ಲಿ, ಇದ್ದಕ್ಕಿದ್ದಂತೆ ಸಂಪತ್ತು ಹೆಚ್ಚಾಗಬಹುದು. ಋಣಾತ್ಮಕ ಪರಿಣಾಮವು ಕಡಿಮೆಯಾಗಿದ್ದರೂ, ನಕಾರಾತ್ಮಕ ದೃಷ್ಟಿಯಿಂದಾಗಿ ಕೆಲವು ಸಮಸ್ಯೆಗಳು ಖಂಡಿತವಾಗಿಯೂ ಉದ್ಭವಿಸಬಹುದು.  


 


ಇದನ್ನೂ ಓದಿ : 15 ದಿನಗಳ ಅಂತರದಲ್ಲಿ ಎರಡು ಗ್ರಹಣಗಳ ಗೋಚರ; ಈ ರಾಶಿಯವರ ಕೆಲಸ ಕಾರ್ಯಗಳಲ್ಲಿ ಸಿಗಲಿದೆ ಯಶಸ್ಸು


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.


ಪರಿಹಾರ:  ಮೂಲ ಜಾತಕದ ಪ್ರಕಾರ, ಶನಿಯನ್ನು ಬಲಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಿ. ಆಂಜನೇಯ ಆರಾಧನೆಯಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು.