Astrology: ಈ 4 ರಾಶಿಯ ವ್ಯಕ್ತಿಗಳು ಪ್ರತಿಯೊಂದು ಕೆಲಸದಲ್ಲಿಯೂ ತಮ್ಮಿಷ್ಟದಂತೆ ನಡೆದುಕೊಳ್ಳುತ್ತಾರೆ!

Astrology: ತಮ್ಮ ಗುರಿ, ಕನಸುಗಳನ್ನು ಈಡೇರಿಸಿಕೊಳ್ಳಲು  ಹೊಂದಿರುವುದು ಸಹಜ ಸ್ವಭಾವ. ಆದರೆ ಪ್ರತಿಯೊಂದು ಕೆಲಸದಲ್ಲಿಯೂ ಬೇರೆಯವರ ಇಷ್ಟ-ಕಷ್ಟದ ಬಗ್ಗೆ ಗಮನ ಹರಿಸದೆ ಸದಾ ತಮ್ಮ ಇಚ್ಛೆಯ ಭಾರವನ್ನು ಇತರರ ಮೇಲೆ ಹೊರೆಸುವ ಹಠಮಾರಿ ಸ್ವಾಭಾವದವರನ್ನು ನಮ್ಮ ಸುತ್ತಲೂ ಕಾಣುತ್ತೇವೆ. ಜ್ಯೋತಿಷ್ಯದಲ್ಲಿ, ಅಂತಹ 4 ರಾಶಿಚಕ್ರ ಚಿಹ್ನೆಗಳ ಬಗ್ಗೆ ಹೇಳಲಾಗಿದೆ. 

Written by - Zee Kannada News Desk | Last Updated : Mar 22, 2022, 11:30 AM IST
  • ಈ 4 ರಾಶಿಯ ಜನರು ತುಂಬಾ ಹಠಮಾರಿಗಳಾಗಿರುತ್ತಾರೆ
  • ಪ್ರತಿ ಕೆಲಸದಲ್ಲೂ ತಮ್ಮದೇ ನಡೆಯಬೇಕು ಎಂಬ ಮನೋಭಾವ ಹೊಂದಿರುತ್ತಾರೆ
  • ಈ ಜನರಿಗೆ ತಮ್ಮ ಬಗ್ಗೆ ತುಂಬಾ ಹೆಮ್ಮೆ
Astrology: ಈ 4 ರಾಶಿಯ ವ್ಯಕ್ತಿಗಳು ಪ್ರತಿಯೊಂದು ಕೆಲಸದಲ್ಲಿಯೂ ತಮ್ಮಿಷ್ಟದಂತೆ ನಡೆದುಕೊಳ್ಳುತ್ತಾರೆ! title=
Nature By Zodiac Sign

Astrology: ಪ್ರತಿಯೊಬ್ಬ ವ್ಯಕ್ತಿಯ ಸ್ವಭಾವ ಮತ್ತು ನಡವಳಿಕೆಯು ಅವನ ಸುತ್ತಲಿನ ಪರಿಸರ, ಅವನ ನಡವಳಿಕೆ, ಅವನ ಅಭ್ಯಾಸಗಳನ್ನು ಅವಲಂಭಿಸಿರುತ್ತವೆ. ಅಷ್ಟೇ ಅಲ್ಲ ಅವನ ಜಾತಕದ ಗ್ರಹಗಳು ಮತ್ತು ರಾಶಿಚಕ್ರ ಚಿಹ್ನೆಗಳು ಕೂಡ ಅವನ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ವ್ಯಕ್ತಿಯ ರಾಶಿಚಕ್ರದ ಮೂಲಕವೂ ಆತನ ವ್ಯಕ್ತಿತ್ವವನ್ನು ತಿಳಿಯಬಹುದು. 

ತಮ್ಮ ಗುರಿ, ಕನಸುಗಳನ್ನು ಈಡೇರಿಸಿಕೊಳ್ಳಲು  ಹೊಂದಿರುವುದು ಸಹಜ ಸ್ವಭಾವ (Nature). ಆದರೆ ಪ್ರತಿಯೊಂದು ಕೆಲಸದಲ್ಲಿಯೂ ಬೇರೆಯವರ ಇಷ್ಟ-ಕಷ್ಟದ ಬಗ್ಗೆ ಗಮನ ಹರಿಸದೆ ಸದಾ ತಮ್ಮ ಇಚ್ಛೆಯ ಭಾರವನ್ನು ಇತರರ ಮೇಲೆ ಹೊರೆಸುವ ಹಠಮಾರಿ ಸ್ವಾಭಾವದವರನ್ನು ನಮ್ಮ ಸುತ್ತಲೂ ಕಾಣುತ್ತೇವೆ. ಜ್ಯೋತಿಷ್ಯದಲ್ಲಿಯೂ ಸಹ ಹಠಮಾರಿ ತನ ಹೊಂದಿರುವ ಜನರ ಬಗ್ಗೆ ತಿಳಿಸಲಾಗಿದೆ. ಜ್ಯೋತಿಷ್ಯದಲ್ಲಿ, ಅಂತಹ 4 ರಾಶಿಚಕ್ರ ಚಿಹ್ನೆಗಳ ಬಗ್ಗೆ ಹೇಳಲಾಗಿದೆ. ಹಾಗಿದ್ದರೆ ಹಠಮಾರಿ ಸ್ವಭಾವ ಹೊಂದಿರುವ ರಾಶಿಚಕ್ರಗಳು ಯಾವುವು ಎಂದು ತಿಳಿಯೋಣ.

ಈ ರಾಶಿಚಕ್ರ ಚಿಹ್ನೆಗಳ ಜನರು ಸ್ವಭಾವತಃ ತುಂಬಾ ಹಠಮಾರಿಗಳಾಗಿರುತ್ತಾರೆ :
ಕರ್ಕ ರಾಶಿ -
ಕರ್ಕಾಟಕ ರಾಶಿಯ ಜನರು ಶಕ್ತಿಯುತ, ನಿರ್ಭೀತ ಮತ್ತು ನಿಷ್ಠಾವಂತ ಜನರು. ಅದೇ ಸಮಯದಲ್ಲಿ, ಅವರು ತುಂಬಾ ಮೊಂಡುತನದವರಾಗಿದ್ದಾರೆ. ಇಂಥವರನ್ನು ಬೆದರಿಸಿ ಯಾವ ಕೆಲಸವೂ ಆಗುವುದಿಲ್ಲ. ಆದರೆ ಪ್ರೀತಿಯ ಬಲದಿಂದ ಅವರಿಗೆ ಏನು ಬೇಕಾದರೂ ಮಾಡಬಹುದು. 

ಇದನ್ನೂ ಓದಿ- Venus Transit: ಶನಿಯ ರಾಶಿಯಲ್ಲಿ ಶುಕ್ರ ಸಂಕ್ರಮಣ, ಈ 3 ರಾಶಿಯವರಿಗೆ ಶುಭ

ಸಿಂಹ ರಾಶಿ- ಸಿಂಹ ರಾಶಿಯ ಜನರು ಪ್ರಾಮಾಣಿಕರು (Honest), ಶ್ರಮಜೀವಿಗಳು ಮತ್ತು ನಿಷ್ಠಾವಂತರು. ಈ ಜನರು ಸುಳ್ಳು ಮತ್ತು ಮೋಸ ಮಾಡುವ ಜನರನ್ನು ಇಷ್ಟಪಡುವುದಿಲ್ಲ. ಯಾರಾದರೂ ತಮ್ಮೊಂದಿಗೆ ತಪ್ಪು ಮಾಡಲು ಪ್ರಯತ್ನಿಸಿದರೆ, ಅವರು ಸೇಡು ತೀರಿಸಿಕೊಳ್ಳದೆ ಶಾಂತಿಯಿಂದ ಕುಳಿತುಕೊಳ್ಳುವುದಿಲ್ಲ. ಈ ವಿಷಯದಲ್ಲಿ, ಅವರು ತುಂಬಾ ಹಠಮಾರಿ ಮತ್ತು ತಮ್ಮ ಮನಸ್ಸಿನ ಮಾತನ್ನು ಮಾತ್ರ ನಂಬುತ್ತಾರೆ. 

ಮಕರ ರಾಶಿ - ಮಕರ ರಾಶಿಯವರು ಕೂಡ ತುಂಬಾ ಹಠಮಾರಿಗಳಾಗಿರುತ್ತಾರೆ. ಆದಾಗ್ಯೂ, ಅವರ ಈ ಹಠಮಾರಿತನವು ಅವರಿಗೆ ಜೀವನದಲ್ಲಿ ಉತ್ತಮ ಯಶಸ್ಸನ್ನು ನೀಡುತ್ತದೆ. ಆದರೆ ಕೆಲವೊಮ್ಮೆ ಅವರು ಸ್ವಲ್ಪ ಹೆಚ್ಚು ನಿರಂಕುಶವಾಗಿ ಓಡಲು ಪ್ರಾರಂಭಿಸುತ್ತಾರೆ ಮತ್ತು ಯಾರ ಮಾತನ್ನೂ ಕೇಳುವುದಿಲ್ಲ. 

ಇದನ್ನೂ ಓದಿ- Ugadi Horoscope: ಯುಗಾದಿ ಹಬ್ಬದಿಂದ ಹೊಳೆಯಲಿದೆ ಈ 4 ರಾಶಿಯವರ ಅದೃಷ್ಟ

ಮೀನ ರಾಶಿ - ಮೀನ ರಾಶಿಯವರು ಉದ್ದೇಶದಲ್ಲಿ ದೃಢವಾಗಿರುತ್ತಾರೆ. ಅವರು ಸವಾಲುಗಳಿಗೆ ಹೆದರುವುದಿಲ್ಲ ಅಥವಾ ಸ್ವಾಭಿಮಾನದೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ. ಅವರು ಯಾರಿಗೂ ತಲೆಬಾಗಲು ಇಷ್ಟಪಡುವುದಿಲ್ಲ. ಈ ಹಠಮಾರಿತನದಿಂದ ಕೆಲವೊಮ್ಮೆ ನಷ್ಟ ಅನುಭವಿಸಬೇಕಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News