15 ದಿನಗಳ ಅಂತರದಲ್ಲಿ ಎರಡು ಗ್ರಹಣಗಳ ಗೋಚರ; ಈ ರಾಶಿಯವರ ಕೆಲಸ ಕಾರ್ಯಗಳಲ್ಲಿ ಸಿಗಲಿದೆ ಯಶಸ್ಸು

ಈ ವರ್ಷ ಒಟ್ಟು 4 ಗ್ರಹಣಗಳು ಸಂಭವಿಸಲಿವೆ. ಅದರಲ್ಲಿ 2 ಸೂರ್ಯಗ್ರಹಣ ಮತ್ತು ಎರಡು ಚಂದ್ರಗ್ರಹಣ . ಹಿಂದೂ ಧರ್ಮದಲ್ಲಿ, ಸೂರ್ಯ ಮತ್ತು ಚಂದ್ರ ಗ್ರಹಣಗಳೆರಡಕ್ಕೂ ಸಮಾನ ಪ್ರಾಮುಖ್ಯತೆ ಇದೆ.

Written by - Zee Kannada News Desk | Last Updated : Mar 22, 2022, 09:34 AM IST
  • ಈ ವರ್ಷ ಒಟ್ಟು 4 ಗ್ರಹಣಗಳು ಸಂಭವಿಸಲಿವೆ.
  • 15 ದಿನಗಳ ಅಂತರದಲ್ಲಿ ಗ್ರಹಣ ಗೋಚರ
  • ಯಾರಿಗೆ ಶುಭ ? ಯಾರಿಗೆ ಅಶುಭ ?
15 ದಿನಗಳ ಅಂತರದಲ್ಲಿ ಎರಡು ಗ್ರಹಣಗಳ ಗೋಚರ; ಈ ರಾಶಿಯವರ ಕೆಲಸ ಕಾರ್ಯಗಳಲ್ಲಿ  ಸಿಗಲಿದೆ  ಯಶಸ್ಸು   title=
15 ದಿನಗಳ ಅಂತರದಲ್ಲಿ ಗ್ರಹಣ ಗೋಚರ (file photo)

ಬೆಂಗಳೂರು : ಗ್ರಹಣಕ್ಕೆ ಜ್ಯೋತಿಷ್ಯ (Astrology) ಮತ್ತು ವಿಜ್ಞಾನ ಎರಡರಲ್ಲೂ ಮಹತ್ವವಿದೆ. ಧಾರ್ಮಿಕ ದೃಷ್ಟಿಕೋನದಿಂದ, ನೋಡಿದರೆ ಗ್ರಹಣವನ್ನು ಮಂಗಳಕರವೆಂದು ಪರಿಗಣಿಸುವುದಿಲ್ಲ. ಈ ವರ್ಷ ಒಟ್ಟು 4 ಗ್ರಹಣಗಳು ಸಂಭವಿಸಲಿವೆ. ಅದರಲ್ಲಿ 2 ಸೂರ್ಯಗ್ರಹಣ (Solar Eclipse)ಮತ್ತು ಎರಡು ಚಂದ್ರಗ್ರಹಣ (Lunar Eclipse). ಹಿಂದೂ ಧರ್ಮದಲ್ಲಿ, ಸೂರ್ಯ ಮತ್ತು ಚಂದ್ರ ಗ್ರಹಣಗಳೆರಡಕ್ಕೂ ಸಮಾನ ಪ್ರಾಮುಖ್ಯತೆ ಇದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ವರ್ಷದ ಮೊದಲ ಸೂರ್ಯಗ್ರಹಣವು (Surya Grahana)30 ಏಪ್ರಿಲ್ 2022 ರಂದು ಸಂಭವಿಸುತ್ತದೆ. ಇನ್ನು ವರ್ಷದ ಮೊದಲ ಚಂದ್ರಗ್ರಹಣವು ಸೂರ್ಯಗ್ರಹಣದ 15 ದಿನಗಳ ನಂತರ ಸಂಭವಿಸುತ್ತದೆ. ಈ ಎರಡೂ ಗ್ರಹಣಗಳು ಜನರ ಜೀವನದ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಬೀರುತ್ತವೆ. 

1. ಮೇಷ :  ಜ್ಯೋತಿಷ್ಯ ಶಾಸ್ತ್ರದ (Astrology)ಪ್ರಕಾರ  ಈ ರಾಶಿಯಲ್ಲಿ ವರ್ಷದ ಮೊದಲ ಸೂರ್ಯಗ್ರಹಣ ಗೋಚರಿಸುತ್ತದೆ (Surya Grahana). 15 ದಿನಗಳ ಅಂತರದಲ್ಲಿ ಸಂಭವಿಸುವ ಎರಡೂ ಗ್ರಹಣಗಳು ಮೇಷ ರಾಶಿಯವರ (Aries) ಮೇಲೆ ಮಂಗಳಕರ ಪರಿಣಾಮವನ್ನು ಬೀರುತ್ತವೆ. ಕೆಲಸದಲ್ಲಿ ಬಡ್ತಿ ಪಡೆಯುವ ಸಾಧ್ಯತೆಗಳಿವೆ. ವ್ಯಾಪಾರಿಗಳಿಗೆ ಲಾಭವಾಗಲಿದೆ. ಹೊಸ ಕೆಲಸವನ್ನು ಪ್ರಾರಂಭಿಸುವುದರೆ ಉತ್ತಮ ಫಲ ಸಿಗಲಿದೆ. 

ಇದನ್ನೂ ಓದಿ :  Guru Gochar: ಗುರುವಿನ ರಾಶಿಯಲ್ಲಿ ರೂಪುಗೊಳ್ಳುತ್ತಿದೆ ಶ್ರೀಮಂತರಾಗುವ ಯೋಗ; ಯಾವ ರಾಶಿಯವರಿಗೆ ಲಾಭ!

2. ಸಿಂಹ : ಚಂದ್ರ ಮತ್ತು ಸೂರ್ಯಗ್ರಹಣದ ಪ್ರಭಾವವು ಸಿಂಹ ರಾಶಿಯ ಜನರ ಮೇಲೆ ಕಂಡುಬರುತ್ತದೆ (Lunar Eclipse 2022). ಸಿಂಹ ರಾಶಿಯವರ ಆರ್ಥಿಕ ಸ್ಥಿತಿಯು ಈ ಅವಧಿಯಲ್ಲಿ ಸುಧಾರನೇ ಕಾಣಲಿದೆ. ಬಡ್ತಿ ಸಿಗುವ ಸಾಧ್ಯತೆ ಇದೆ. ಆದಾಯದ ಹೆಚ್ಚಳದೊಂದಿಗೆ, ಹೂಡಿಕೆಯತ್ತಲೂ ಗಮನ ಹರಿಸುವುದು ಉತ್ತಮ. ಸಿಂಹ ರಾಶಿಯವರಿಗೆ (Leo)ಪ್ರಯಾಣದ ಅವಕಾಶವಿರುತ್ತದೆ. ಈ ಪ್ರಯಾಣವು ಆರ್ಥಿಕ ಪ್ರಗತಿಯನ್ನು ತರಬಹುದು.

3. ಧನು ರಾಶಿ : ಎರಡೂ ಗ್ರಹಣಗಳು ಧನು ರಾಶಿಯವರ (Sagitarius) ಮೇಲೆ ಶುಭ ಪರಿಣಾಮವನ್ನು ಬೀರುತ್ತವೆ. ಈ ಅವಧಿಯಲ್ಲಿ ನೀವು ಹೊಸ ಉದ್ಯೋಗಾವಕಾಶಗಳನ್ನು ಪಡೆಯಬಹುದು. ಧನು ರಾಶಿಯವರ ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ. ಅರ್ಧದಲ್ಲಿ ನಿಂತಿರುವ ಕೆಲಸವೂ  ಪೂರ್ಣಗೊಳ್ಳಲಿದೆ. 

ಇದನ್ನೂ ಓದಿ : Chaitra Navratri 2022: ನವರಾತ್ರಿ ವೇಳೆ ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ

ವರ್ಷದ ಮೊದಲ ಚಂದ್ರಗ್ರಹಣ ಯಾವಾಗ ಸಂಭವಿಸುತ್ತದೆ ?
2022 ರ ಮೊದಲ ಚಂದ್ರಗ್ರಹಣವು (Chandra Grahana) ಸೋಮವಾರ, ಮೇ 16, 2022 ರಂದು ಬೆಳಿಗ್ಗೆ 08:59 ಕ್ಕೆ ಗೋಚರಿಸಲಿದ್ದು, 10.23 ಕ್ಕೆ ಕೊನೆಗೊಳ್ಳುತ್ತದೆ. ಇದು ಭಾಗಶಃ ಚಂದ್ರಗ್ರಹಣವಾಗಿದ್ದು,  ಸೂತಕ ಅವಧಿಯು ಮಾನ್ಯವಾಗಿರುವುದಿಲ್ಲ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News