ನವದೆಹಲಿ: ವಾಸ್ತು ಶಾಸ್ತ್ರವು ಮಾನವ ಜೀವನದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಮನೆ, ಅಂಗಡಿ ಅಥವಾ ಕೆಲಸದ ಸ್ಥಳದಲ್ಲಿ ವಾಸ್ತು ಶಾಸ್ತ್ರದ ಬಗ್ಗೆ ಕಾಳಜಿ ವಹಿಸಿದರೆ ಹಲವಾರು ಸಮಸ್ಯೆಗಳನ್ನು ತಪ್ಪಿಸಬಹುದು. ವಾಸ್ತು ಶಾಸ್ತ್ರದಲ್ಲಿ ಮಲಗುವ ಸರಿಯಾದ ದಿಕ್ಕಿಹ ಬಗ್ಗೆ ಸಹ ಉಲ್ಲೇಖಿಸಲಾಗಿದೆ.


COMMERCIAL BREAK
SCROLL TO CONTINUE READING

ತಪ್ಪು ದಿಕ್ಕಿನಲ್ಲಿ ತಲೆ ಇಟ್ಟು ಮಲಗುವುದರಿಂದ ದಾಂಪತ್ಯ ಜೀವನದಲ್ಲಿ ಬಿರುಕುಗಳು ಬರಲಾರಂಭಿಸುತ್ತವೆ. ಅದೇ ರೀತಿ ಜಗಳಗಳು, ಆರ್ಥಿಕ ಬಿಕ್ಕಟ್ಟು, ಮಾನಸಿಕ ಒತ್ತಡದಂತಹ ಸಮಸ್ಯೆಗಳು ಉದ್ಭವಿಸಲು ಪ್ರಾರಂಭಿಸುತ್ತವೆ. ಸರಿಯಾದ ದಿಕ್ಕಿನಲ್ಲಿ ಮುಖ ಮಾಡುವ ಮೂಲಕ ನೀವು ಅನೇಕ ರೀತಿಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ.


ಇದನ್ನೂ ಓದಿ: Shukra Gochar 2023: ಈ 5 ರಾಶಿಯ ಜನರಿಗೆ ಶನಿ-ಶುಕ್ರರು ಪ್ರತಿ ಹಂತದಲ್ಲೂ ಯಶಸ್ಸು ನೀಡುತ್ತಾರೆ!


ದಕ್ಷಿಣ ದಿಕ್ಕು


ವಾಸ್ತು ಶಾಸ್ತ್ರದ ಪ್ರಕಾರ ಗಂಡ-ಹೆಂಡತಿ ಸದಾ ದಕ್ಷಿಣ ದಿಕ್ಕಿಗೆ ತಲೆಯಿಟ್ಟು ಮಲಗಬೇಕು. ಕಾಂತೀಯ ಶಕ್ತಿಯು ದಕ್ಷಿಣ ದಿಕ್ಕಿನಿಂದ ಹರಿಯುತ್ತದೆ. ಇದು ಮಾನವ ದೇಹದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ದಕ್ಷಿಣ ದಿಕ್ಕಿಗೆ ತಲೆಯಿಟ್ಟು ಮಲಗುವುದರಿಂದ ಜೀವನದಲ್ಲಿ ಸುಖ, ಸಮೃದ್ಧಿ ಮತ್ತು ಸಂಪತ್ತು ದೊರೆಯುತ್ತದೆ. ವಿತ್ತೀಯ ಲಾಭದ ಸಾಧ್ಯತೆಗಳಿವೆ ಮತ್ತು ಆರೋಗ್ಯವೂ ಉತ್ತಮವಾಗಿರುತ್ತದೆ.


ಪಶ್ಚಿಮ ದಿಕ್ಕು


ವಾಸ್ತು ಶಾಸ್ತ್ರದ ಪ್ರಕಾರ ಪಶ್ಚಿಮ ದಿಕ್ಕಿಗೆ ತಲೆ ಇಟ್ಟು ಮಲಗುವುದು ಸರಿಯಲ್ಲ. ಈ ದಿಕ್ಕನ್ನು ಮಲಗಲು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಈ ದಿಕ್ಕು ಜೀವನದಲ್ಲಿ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರಿಂದಾಗಿ ಜೀವನದಲ್ಲಿ ಹಲವಾರು ರೀತಿಯ ಸಮಸ್ಯೆಗಳು ಬರಲು ಪ್ರಾರಂಭಿಸುತ್ತವೆ. ಪಶ್ಚಿಮ ದಿಕ್ಕು ವೈವಾಹಿಕ ಜೀವನದಲ್ಲಿ ಕೆಟ್ಟ ಪರಿಣಾಮವನ್ನು ಬೀರುತ್ತದೆ, ಇದರಿಂದಾಗಿ ಕುಟುಂಬದಲ್ಲಿ ಅಪಶ್ರುತಿಯ ಪರಿಸ್ಥಿತಿ ಉಂಟಾಗುತ್ತದೆ. ಹೀಗಾಗಿ ನೀವು ಮಲಗುವ ಸರಿಯಾದ ದಿಕ್ಕಿನ ಬಗ್ಗೆ ತಿಳಿಯುವುದು ಮುಖ್ಯ.


ಇದನ್ನೂ ಓದಿ: Garuda Purana: ಸಾವಿನ ನಂತರ 13 ದಿನಗಳವರೆಗೆ ಮನೆ ಬಿಟ್ಟು ಹೋಗುವುದಿಲ್ಲ ಮಾನವನ ಆತ್ಮ: ಇದರ ಹಿಂದಿದೆ ಬಲವಾದ ಕಾರಣ!


(ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.