Jotish Shastra: ಎಷ್ಟೇ ಪ್ರಯತ್ನ ಪಟ್ಟರೂ ಅದೃಷ್ಟದ ಬೆಂಬಲ ಸಿಗುತ್ತಿಲ್ಲವೇ, ಈ ಉಪಾಯ ಅನುಸರಿಸಿ ನೋಡಿ

Betel Leaves And Cloves Tricks - ವೀಳ್ಯದೆಲೆಯನ್ನು ಯಾವಾಗಲು ಪರಿಶುದ್ಧ ಎಂದು ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕೆ ಇದನ್ನು ಪೂಜೆಯಲ್ಲಿ ವಿಶೇಷವಾಗಿ ಬಳಸಲಾಗುತ್ತದೆ. ಪೂಜೆಯ ಹೊರತಾಗಿ ವೀಳ್ಯದೆಲೆ ಮತ್ತು ಲವಂಗದ ಹಲವು ಉಪಾಯಗಳಿವೆ. ವೀಳ್ಯದೆಲೆ ಮತ್ತು ಲವಂಗದ ಸಹಾಯದಿಂದ ಹಣಕಾಸಿನ ಸಮಸ್ಯೆಗೆ ಮುಕ್ತಿ ಹಾಡಬಹುದು ಎನ್ನಲಾಗುತ್ತದೆ.  

Written by - Nitin Tabib | Last Updated : Jan 7, 2023, 10:48 PM IST
  • ಉದ್ಯೋಗ ಸಮಸ್ಯೆಯನ್ನು ನಿವಾರಣೆಯಾಗುತ್ತದೆ
  • ಹಣಕಾಸಿನ ಕೊರತೆ ಮುಕ್ತಾಯವಾಗುತ್ತದೆ
  • ವೀಳ್ಯದೆಲೆ ಮತ್ತು ಲವಂಗ ವಿಶೇಷತೆಗಳು ಇಲ್ಲಿವೆ
Jotish Shastra: ಎಷ್ಟೇ ಪ್ರಯತ್ನ ಪಟ್ಟರೂ ಅದೃಷ್ಟದ ಬೆಂಬಲ ಸಿಗುತ್ತಿಲ್ಲವೇ, ಈ ಉಪಾಯ ಅನುಸರಿಸಿ ನೋಡಿ title=
Clove And Betel Leaf Remedies

ನವದೆಹಲಿ: Betel Leaves Tips And Tricks - ಹಿಂದೂ ಧರ್ಮದಲ್ಲಿ ವೀಳ್ಯದೆಲೆಯನ್ನು ಅತ್ಯಂತ ಪರಿಶುದ್ಧ ಹಾಗೂ ಮಂಗಳಕರ ಎಂದುಪರಿಗಣಿಸಲಾಗುತ್ತದೆ. ಇದೇ  ಕಾರಣಕ್ಕಾಗಿಯೇ ಇದನ್ನು ಸಾಮಾನ್ಯವಾಗಿ ಪ್ರತಿ ಪೂಜೆಯಲ್ಲಿ ಬಳಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ವೀಳ್ಯದೆಲೆ ಮತ್ತು ಲವಂಗಕ್ಕೆ ಸಂಬಂಧಿಸಿದ ವಿಶೇಷ ಉಪಾಯಗಳನ್ನು ಹೇಳಲಾಗಿದೆ. ಈ ಉಪಾಯಗಳನ್ನೂ ಅನುಸರಿಸಿದರೆ ಹಣಕಾಸಿನ ಮುಗ್ಗಟ್ಟು ನಿವಾರಣೆಯಾಗುತ್ತದೆ ಎನ್ನಲಾಗಿದೆ. ಧನ ಲಾಭಕ್ಕಾಗಿ ವಿಳ್ಯದೆಲೆಗೆ ಸಂಬಂಧಿಸಿದ ಯಾವ ಉಪಾಯಗಳನ್ನು ಅನುಸರಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಹಣಕಾಸಿನ ಮುಗ್ಗಟ್ಟು ನಿವಾರಣೆ 
ಜೀವನದಲ್ಲಿ ಯಾವುದೇ ರೀತಿಯ ಆರ್ಥಿಕ ಸಮಸ್ಯೆ ಇದ್ದರೆ ಅದನ್ನು ತಕ್ಷಣವೇ ಹೋಗಲಾಡಿಸಲು ಎರಡು ಲವಂಗವನ್ನು ಮತ್ತು ಒಂದು ಬತ್ತಾಸನ್ನು  ದೇಸಿ ತುಪ್ಪದಲ್ಲಿ ನೆನೆಸಿದ  ವೀಳ್ಯದೆಲೆಯಲ್ಲಿ ಇಟ್ಟುಕೊಳ್ಳಿ. ಇದನ್ನು ಮಾಡಿದ ನಂತರ, ಅದನ್ನು ಬೆಂಕಿಯಲ್ಲಿ ಸುಟ್ಟುಹಾಕಿ. ಹೋಳಿ ಹಬ್ಬದ ಸಂದರ್ಭದಲ್ಲಿ ಈ ಉಪಾಯವನ್ನು ಅನುಸರಿಸುವುದರಿಂದ ಇನ್ನಷ್ಟು ಲಾಭಗಳು ಸಿಗುತ್ತವೆ.

ಕೆಲಸದಲ್ಲಿ ಯಶಸ್ವಿಯಾಗಲು
ಸತತ ಪ್ರಯತ್ನ ಮಾಡಿದರೂ ಕೆಲಸದಲ್ಲಿ ಯಶಸ್ಸು ಸಿಗುತ್ತಿಲ್ಲ ಎಂದಾದಲ್ಲಿ ಯಾವುದೇ ಬುಧವಾರದಂದು 11 ವೀಳ್ಯದೆಲೆಯಲ್ಲಿ 5 ಲವಂಗಗಳನ್ನು ಗಣೇಶನಿಗೆ ಅರ್ಪಿಸಿ. ಹೀಗೆ ಮಾಡುವುದರಿಂದ ಬೇಗನೇ ಕೆಲಸದಲ್ಲಿ ಯಶಸ್ಸು ಸಿಗುತ್ತದೆ.

ಇದನ್ನೂ ಓದಿ-Sankranti 2023: ಈ ಬಾರಿಯ ಮಕರ ಸಂಕ್ರಾಂತಿಯಂದು ಒಂದಲ್ಲ 3 ಶುಭಯೋಗಗಳ ನಿರ್ಮಾಣ, ಏನಿದರ ವಿಶೇಷತೆ?

ಮನೆಯಲ್ಲಿನ ಅಪಶ್ರುತಿಯನ್ನು ಹೋಗಲಾಡಿಸಲು  ಈ ಉಪಾಯ ಅನುಸರಿಸಿ
ಮನೆಯಲ್ಲಿ ಸದಾ ಜಗಳ, ವ್ಯಾಜ್ಯಗಳು ನಡೆಯುತ್ತಿದ್ದರೆ, ಅವುಗಳನ್ನು ತಪ್ಪಿಸಲು ಒಂದು ವೀಳ್ಯದೆಲೆಗೆ ಎರಡು ಕರ್ಪೂರ ಮತ್ತು 2 ಲವಂಗಗಳನ್ನು ಬೆರೆಸಿ ಶನಿವಾರದಂದು ಶನಿದೇವರ ಅಥವಾ ಅಶ್ವತ್ಥ ಮರದ ಕೆಳಗೆ ಇಡಿ. ಹೀಗೆ ಮಾಡುವುದರಿಂದ ಕೌಟುಂಬಿಕ ಕಲಹಗಳು ಕೊನೆಗೊಳ್ಳುತ್ತವೆ.

ಇದನ್ನೂ ಓದಿ-Samudra Shastra: ಇಂತಹ ಕೂದಲು ಉಳ್ಳವರು ಗೆಳೆತನದಲ್ಲಿ ಚಿನ್ನದಂತಿರುತ್ತಾರೆ

ಸುಖ-ಸಮೃದ್ಧಿಗಾಗಿ ಈ ಉಪಾಯ ಅನುಸರಿಸಿ
ಮನೆಯಲ್ಲಿ ಸುಖ ಮತ್ತು ಸಮೃದ್ಧಿಗಾಗಿ ಮಂಗಳವಾರ ಅಥವಾ ಶನಿವಾರದಂದು ಹನುಮನಿಗೆ ವಿಳ್ಯದೆಲೆಯನ್ನು ಅರ್ಪಿಸಿ. ಈ ವೀಳ್ಯದೆಲೆಗೆ ಸೌಂಫ, ಕ್ಯಾಟೆಚು, ಗುಲ್ಕಂದ್ ಬೆರೆಸಲು ಮರೆಯಬೇಡಿ. ವೀಳ್ಯದೆಲೆಯ ಈ ಉಪಾಯವನ್ನು 7 ವಾರಗಳ ಕಾಲ ನಿರಂತರವಾಗಿ ಮಾಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಇರಲಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News