Shukra Gochar 2023: ಈ 5 ರಾಶಿಯ ಜನರಿಗೆ ಶನಿ-ಶುಕ್ರರು ಪ್ರತಿ ಹಂತದಲ್ಲೂ ಯಶಸ್ಸು ನೀಡುತ್ತಾರೆ!

Venus Shani Gochar 2023: ಈ 4 ರಾಶಿಯವರಿಗೆ ಮುಂಬರುವ 10 ದಿನಗಳು ಅದ್ಭುತವಾಗಿರಲಿವೆ. ಮಕರ ರಾಶಿಯಲ್ಲಿ ಶನಿ ಮತ್ತು ಶುಕ್ರರ ಸಂಯೋಗವು ಈ ಜನರ ಅದೃಷ್ಟವನ್ನು ಉನ್ನತ ಮಟ್ಟದಲ್ಲಿರಿಸುತ್ತದೆ.

Written by - Puttaraj K Alur | Last Updated : Jan 8, 2023, 01:06 PM IST
  • ಮಿಥುನ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಿಸಲಿದ್ದು, ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ
  • ಕನ್ಯಾ ರಾಶಿಯವರಿಗೆ ಧನಲಾಭವಾಗಲಿದ್ದು, ಜೀವನದ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು
  • ಮಕರ ರಾಶಿಯವರಿಗೆ ಹಣದ ಪ್ರಯೋಜನ ಜೊತೆಗೆ ಆದಾಯದ ಮೂಲಗಳು ಹೆಚ್ಚಾಗುತ್ತವೆ
Shukra Gochar 2023: ಈ 5 ರಾಶಿಯ ಜನರಿಗೆ ಶನಿ-ಶುಕ್ರರು ಪ್ರತಿ ಹಂತದಲ್ಲೂ ಯಶಸ್ಸು ನೀಡುತ್ತಾರೆ! title=
ಶುಕ್ರ ಶನಿ ಗೋಚರ 2023

ನವದೆಹಲಿ: ಈ ಸಮಯದಲ್ಲಿ ಜ್ಯೋತಿಷ್ಯ ಪರಿಸ್ಥಿತಿಗಳು ಅತ್ಯುತ್ತಮವಾಗಿರುತ್ತವೆ. ಶನಿಯ ರಾಶಿಯಾದ ಮಕರ ರಾಶಿಯಲ್ಲಿ ಶನಿ ಮತ್ತು ಶುಕ್ರನ ಸಂಯೋಗವಿದೆ. ಕೆಲವು ರಾಶಿಗಳಿಗೆ ಇದು ತುಂಬಾ ಮಂಗಳಕರವಾಗಿದೆ. ಈ ಸಂಗಮವು ಜನವರಿ 17ರವರೆಗೆ ಇರುತ್ತದೆ, ನಂತರ ಶನಿ ಮಕರ ರಾಶಿಯಲ್ಲಿ ಸಾಗಲಿದೆ.

ಶನಿಯು ತನ್ನ ರಾಶಿಚಿಹ್ನೆ ಮಕರರಾಶಿ ಪ್ರವೇಶಿಸಿದಾಗ ಇದು 30 ವರ್ಷಗಳ ನಂತರ ಸಂಭವಿಸುತ್ತದೆ. 2023ರ ಜನವರಿ 17ರವರೆಗೆ ಮಕರ ರಾಶಿಯಲ್ಲಿ ಶನಿ ಮತ್ತು ಶುಕ್ರನ ಸಂಯೋಜನೆಯು ಯಾವ ರಾಶಿಯವರಿಗೆ ಸಂಪತ್ತು ಮತ್ತು ವೃತ್ತಿಯಲ್ಲಿ ಯಶಸ್ಸನ್ನು ನೀಡುತ್ತದೆ ಎಂದು ತಿಳಿಯಿರಿ.

ಶನಿ-ಶುಕ್ರರು ಈ ಜನರನ್ನು ಶ್ರೀಮಂತರನ್ನಾಗಿಸುತ್ತದೆ

ಮಿಥುನ ರಾಶಿ: ಮಕರ ರಾಶಿಯಲ್ಲಿ ಶುಕ್ರ ಮತ್ತು ಶನಿಯ ಸಂಯೋಜನೆಯು ಜನವರಿ 17, 2023ರವರೆಗೆ ಮಿಥುನ ರಾಶಿಯವರಿಗೆ ತುಂಬಾ ಶುಭ ಶುಭ ಫಲಿತಾಂಶಗಳನ್ನು ನೀಡುತ್ತದೆ. ಈ ರಾಶಿಯವರ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಆರ್ಥಿಕ ಪರಿಹಾರ ಸಿಗಲಿದ್ದು, ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಹಳೆಯ ಹೂಡಿಕೆಯಿಂದ ಲಾಭವಾಗಲಿದೆ. ಆದಾಯದ ಮೂಲಗಳು ಹೆಚ್ಚಾಗುತ್ತವೆ. ಹಣ ಪಡೆಯಲು ಹೊಸ ಮಾರ್ಗಗಳು ಕಂಡುಬರುತ್ತವೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ.

ಇದನ್ನೂ ಓದಿ: February 13 ರಂದು ಮತ್ತೆ ನಿರ್ಮಾಣಗೊಳ್ಳಲಿದೆ ಶನಿ ಸೂರ್ಯರ ಸಂಯೋಜನೆ, ಈ ರಾಶಿಗಳ ಜನರಿಗೆ ಪ್ರಬಲ ಲಾಭ

ಕನ್ಯಾ ರಾಶಿ: ಶನಿ ಸಂಕ್ರಮಣದ ಹಿಂದಿನ ಸಮಯವು ಕನ್ಯಾ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ಜನರು ಅನೇಕ ಸಂತೋಷವನ್ನು ಪಡೆಯಬಹುದು. ಶುಕ್ರ ಮತ್ತು ಶನಿ ನಿಮಗೆ ಅಪಾರ ಹಣವನ್ನು ತಂದುಕೊಡಬಹುದು. ನೀವು ಜೀವನದ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಇದರಿಂದ ನಿಮ್ಮ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಕೆಲವು ಕೆಲಸಗಳು ಯಶಸ್ವಿಯಾದರೆ ನೀವು ಉತ್ತಮ ಪರಿಹಾರ ಪಡೆಯುತ್ತೀರಿ.

ಮಕರ ರಾಶಿ: ಶನಿ ಮತ್ತು ಶುಕ್ರರ ಸಂಯೋಗವು ಮಕರ ರಾಶಿಯಲ್ಲಿ ಮಾತ್ರ ಆಗುವುದರಿಂದ ಈ ರಾಶಿಯವರಿಗೆ ಲಾಭವಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಅದರ ಗರಿಷ್ಠ ಪರಿಣಾಮವು ಮಕರ ರಾಶಿಯ ಜನರ ಮೇಲೆ ಇರುತ್ತದೆ ಮತ್ತು ಇದು ತುಂಬಾ ಧನಾತ್ಮಕವಾಗಿರುತ್ತದೆ. ಈ ರಾಶಿಯವರು ಬಲವಾದ ಹಣದ ಪ್ರಯೋಜನ ಪಡೆಯಬಹುದು. ನಿಮ್ಮ ಆದಾಯದ ಮೂಲಗಳು ಹೆಚ್ಚಾಗುತ್ತವೆ. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಬೇರೆಡೆ ಸಾಲವಾಗಿ ನೀಡಿದ ಹಣ ವಾಪಸ್ ಸಿಗಬಹುದು. ನಿಮ್ಮ ವೃತ್ತಿಜೀವನದಲ್ಲಿ ಒಳ್ಳೆಯ ದಿನಗಳು ಪ್ರಾರಂಭವಾಗುತ್ತವೆ, ಇದು ಭವಿಷ್ಯದಲ್ಲಿ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ.

ಇದನ್ನೂ ಓದಿ: April ತಿಂಗಳಿನಲ್ಲಿ ಮಂಗಳನ ರಾಶಿಯಲ್ಲಿ ದೇವಗುರು ಬೃಹಸ್ಪತಿಯ ಪ್ರವೇಶ, ಈ ರಾಶಿಗಳ ಜನರಿಗೆ ವಿಪರೀತ ರಾಜಯೋಗದ ಲಾಭ 

ಕುಂಭ ರಾಶಿ: ಶನಿ ಮತ್ತು ಶುಕ್ರ ಈ ರಾಶಿಯ ಸ್ಥಳೀಯರಿಗೆ ಕುಂಭದಲ್ಲಿ ಶನಿ ಸಂಕ್ರಮಣಕ್ಕೂ ಮುಂಚೆಯೇ ಅನೇಕ ಲಾಭಗಳನ್ನು ನೀಡಬಹುದು. ಈ ಜನರು ತಮ್ಮ ವೃತ್ತಿಜೀವನದಲ್ಲಿ ಪ್ರಗತಿ ಪಡೆಯಬಹುದು. ಆರ್ಥಿಕ ರಂಗದಲ್ಲಿಯೂ ಈ ಸಮಯ ಲಾಭದಾಯಕವಾಗಿರುತ್ತದೆ. ಈ ಸಮಯವನ್ನು ಪೂರ್ಣವಾಗಿ ಆನಂದಿಸಿ, ಏಕೆಂದರೆ ಜನವರಿ 17ರ ನಂತರ ಶನಿಯು ನಿಮಗೆ ತೊಂದರೆಗಳನ್ನು ನೀಡಬಹುದು.

(ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News