Vastu Tips: ನಿಮ್ಮ ಮನೆಯಲ್ಲೂ ಈ ವಸ್ತು ಇದ್ದರೆ ಆಗಲಿದೆ ಭಾರೀ ಧನ ಪ್ರಾಪ್ತಿ
ಗುಬ್ಬಚ್ಚಿಗಳು ಮನೆಯಲ್ಲಿ ಗೂಡು ಕಟ್ಟುವುದನ್ನು ಸಾಮಾನ್ಯವಾಗಿ ನೋಡುತ್ತಿರುತ್ತೇವೆ. ಗುಬ್ಬಚ್ಚಿಯನ್ನು ಲಕ್ಷ್ಮಿ ದೇವಿಯ ಭಕ್ತ ಎಂದು ಕರೆಯಲಾಗುತ್ತದೆ. ಯಾರ ಮನೆಯಲ್ಲಿ ಗುಬ್ಬಚ್ಚಿ ಗೂಡು ಇರುತ್ತದೆಯೋ, ಆ ಮನೆಯಲ್ಲಿ ಆಹ್ಲಾದಕರ ಶಾಂತಿಯ ವಾತಾವರಣ ನೆಲೆಸುತ್ತದೆಯಂತೆ.
ಬೆಂಗಳೂರು : Sparrow Birds Nest Vastu Tips: ಗುಬ್ಬಚ್ಚಿಗಳು ಹೆಚ್ಚಾಗಿ ಬೇಸಿಗೆಯಲ್ಲಿ (Summer) ಮನೆಗಳಲ್ಲಿ ಗೂಡು ಕಟ್ಟುತ್ತವೆ. ವಾಸ್ತು ಶಾಸ್ತ್ರದಲ್ಲಿ (Vastu shastra) ಪಕ್ಷಿಗಳು ಮನೆಯಲ್ಲಿ ಗೂಡು ಕಟ್ಟುವುದು ಶುಭವೆಂದು ಪರಿಗಣಿಸಲಾಗಿದೆ. ಇದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ಆದರೆ ಪಕ್ಷಿಗಳ ಗೂಡುಗಳು ಮನೆಯಲ್ಲಿದ್ದರೆ, ಅದನ್ನು ಕಿತ್ತು ಬಿಸಾಡುವ ಜನರು ಕೂಡಾ ಇದ್ದಾರೆ. ವಾಸ್ತು ಶಾಸ್ತ್ರದ ಪ್ರಕಾರ, ಗುಬ್ಬಚ್ಚಿ ಮನೆಯಲ್ಲಿ ಗೂಡುಕಟ್ಟಿದರೆ ಅದು ಶುಭವಂತೆ.
ಗುಬ್ಬಚ್ಚಿಗಳು ಮನೆಯಲ್ಲಿ ಗೂಡು ಕಟ್ಟುವುದನ್ನು ಸಾಮಾನ್ಯವಾಗಿ ನೋಡುತ್ತಿರುತ್ತೇವೆ. ಗುಬ್ಬಚ್ಚಿಯನ್ನು ಲಕ್ಷ್ಮಿ (Godess Lakshmi) ದೇವಿಯ ಭಕ್ತ ಎಂದು ಕರೆಯಲಾಗುತ್ತದೆ. ಯಾರ ಮನೆಯಲ್ಲಿ ಗುಬ್ಬಚ್ಚಿ (Sparrow) ಗೂಡು ಇರುತ್ತದೆಯೋ, ಆ ಮನೆಯಲ್ಲಿ ಆಹ್ಲಾದಕರ ಶಾಂತಿಯ ವಾತಾವರಣ ನೆಲೆಸುತ್ತದೆಯಂತೆ.
ಇದನ್ನೂ ಓದಿ : Lakshmi ಕೃಪೆಗೆ ಪಾತ್ರರಾಗಲು ಪ್ರತಿ ಶುಕ್ರವಾರ ತಪ್ಪದೇ ಮಾಡಿ ಈ ಕೆಲಸ
ನಿಮ್ಮ ಮನೆಯಲ್ಲೂ ಗುಬ್ಬಚ್ಚಿ ಗೂಡಿದೆಯಾ ? ಗೂಡು ಯಾವ ದಿಕ್ಕಿನಲ್ಲಿದ್ದರೆ ಯಾವ ಶಕುನ ತಿಳಿಯಿರಿ :
- ಗುಬ್ಬಚ್ಚಿಗಳ ಗೂಡು (sparrow nest) ಮನೆಯ ಪೂರ್ವ ಭಾಗದಲ್ಲಿದ್ದಾರೆ ಮನೆಯವರ ಗೌರವ ಹೆಚ್ಚಾಗುತ್ತದೆ.
- ಅಗ್ನೆಯ ದಿಕ್ಕಿನಲ್ಲಿದ್ದರೆ ಮನೆಯಲ್ಲಿ ಮಗನ ವಿವಾಹ (Marriage) ನೆರೆವೆರುತ್ತದೆಯಂತೆ
- ದಕ್ಷಿಣ ದಿಕ್ಕಿನಲ್ಲಿ ಗೂಡನ್ನು ನಿರ್ಮಿಸಿದರೆ, ಅಪಾರ ಸಂಪಟ್ಟು ಪ್ರಾಪ್ತಿಯಾಗುತ್ತದೆಯಂತೆ .
- ನೈರುತ್ಯ ದಿಕ್ಕಿನಲ್ಲಿದ್ದರೆ ಕುಟುಂಬ ಸದಸ್ಯರಿಗೆ ದೀರ್ಘಾಯುಷ್ಯವಂತೆ.
- ಉತ್ತರ ಮತ್ತು ಈಶಾನ್ಯ ದಿಕ್ಕಿನಲ್ಲಿ ಗೂಡು ಇದ್ದರೆ, ಎಲ್ಲಾ ರೀತಿಯ ಸುಖ ಸೌಲಭ್ಯಗಳು ದೊರೆಯುತ್ತವೆಯಂತೆ.
ಆದರೆ ನೆನಪಿಡಿ, ಈ ಗೂಡುಗಳು ಮನೆಯ ಓಪನ್ ಸ್ಪೇಸ್ ನಲ್ಲಿದ್ದರೆ ಮಾತ್ರ ಶುಭವಂತೆ. ಮನೆಯ ಛಾವಣಿಯ ಮತ್ತು ಗೋಡೆಯ ಸಂದುಗಳಲ್ಲಿ ಈ ಗೂಡುಗಳಿದ್ದರೆ ಅದನ್ನು ಶುಭವೆಂದು ಪರಿಗಣಿಸಲಾಗುವುದಿಲ್ಲ.
ಇದನ್ನೂ ಓದಿ : Ram Navami 2021: ರಾಮ ನವಮಿಯ ಪೂಜಾ ವಿಧಿ ವಿಧಾನಗಳನ್ನು ತಿಳಿಯಿರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.