ಉದ್ಯೋಗ ನಷ್ಟದ ಸಂಕೇತ ನೀಡುತ್ತದೆ ಈ ರೀತಿಯ ಕನಸುಗಳು, ಎದುರಾಗಬಹುದು ಆರ್ಥಿಕ ನಷ್ಟ
ಕೆಲವು ಕನಸುಗಳು ವ್ಯಕ್ತಿಗೆ ಪದೇ ಪದೇ ಬೀಳುತ್ತಿರುತ್ತವೆ. ಆಗಾಗ ಬರುವ ಕೆಲವು ಕನಸುಗಳು ವ್ಯಕ್ತಿಗೆ ಎಚ್ಚರಿಕೆಯ ಗಂಟೆಯಾಗಿ ಕೆಲಸ ಮಾಡುತ್ತದೆ.
ನವದೆಹಲಿ : ಸ್ವಪ್ನ ಶಾಸ್ತ್ರದಲ್ಲಿ (Swapna Shastra) ಬೇರೆ ಬೇರೆ ರೀತಿಯ ಕನಸುಗಳನ್ನು ಹೇಳಲಾಗಿದೆ. ಪ್ರತಿಯೊಂದು ಕನಸಿನ ರಹಸ್ಯ ಮತ್ತು ಅದರ ಫಲಗಳು ವಿಭಿನ್ನವಾಗಿರುತ್ತವೆ. ಕೆಲವು ಕನಸುಗಳು ವ್ಯಕ್ತಿಗೆ ಪದೇ ಪದೇ ಬೀಳುತ್ತಿರುತ್ತವೆ. ಆಗಾಗ ಬರುವ ಕೆಲವು ಕನಸುಗಳು ವ್ಯಕ್ತಿಗೆ ಎಚ್ಚರಿಕೆಯ ಗಂಟೆಯಾಗಿ ಕೆಲಸ ಮಾಡುತ್ತದೆ. ಇದಲ್ಲದೆ, ವೃತ್ತಿಜೀವನದಲ್ಲಿ ನಡೆಯಬಹುದಾದ ಕೆಲವು ಅಹಿತಕರ ಘಟನೆಗಳನ್ನು ಕೂಡಾ ಸೂಚಿಸುತ್ತವೆ.
ಹರಿಯುವ ನದಿ :
ಸ್ವಪ್ನ ಶಾಸ್ತ್ರದ (Swapna Shastra) ಪ್ರಕಾರ, ಕನಸಿನಲ್ಲಿ ನದಿಯಲ್ಲಿ ನೀವು ಈಜುವುದನ್ನು ಕಂಡರೆ, ಅದು ಮಂಗಳಕರವಾಗಿರುತ್ತದೆ. ಈ ಕನಸು ವೃತ್ತಿಯಲ್ಲಿ ಧನಾತ್ಮಕ ಲಾಭಗಳಾಗುವುದನ್ನು ತೋರಿಸುತ್ತವೆ. ವಿಶೇಷವಾಗಿ ಕನಸಿನಲ್ಲಿ ನದಿ ಹರಿವಿನ ದಿಕ್ಕಿಗೆ ನೀವು ಕೂಡಾ ಈಜುತ್ತಿರುವಂತೆ ಕಂಡರೆ ಅದು ಅತ್ಯನ್ತ ಶುಭ ಸಂಕೇತವನ್ನು ನೀಡುತ್ತದೆ. ಆದರೆ, ಕನಸಿನಲ್ಲಿ ನೀವು ನದಿಯ ವಿರುದ್ದ ದಿಕ್ಕಿಗೆ ಈಜುತ್ತಿರುವಂತೆ ಕಂಡರೆ, ಅದು ಅಶುಭಕರ ಚಿಹ್ನೆಗಳನ್ನು ನೀಡುತ್ತದೆ. ಈ ಕನಸು ಎಂದರೆ ವೃತ್ತಿಜೀವನದಲ್ಲಿ ವೈಫಲ್ಯ (Failure in career) ಉಂಟಾಗುತ್ತದೆ ಎನ್ನುವುದನ್ನು ಸೂಚಿಸುತ್ತದೆ.
ಇದನ್ನೂ ಓದಿ : ಶನಿದೇವನ ಕೃಪೆಯಿಂದ 2022 ರಲ್ಲಿ ಬೆಳಗಲಿದೆ ಈ ಮೂರು ರಾಶಿಯವರ ಅದೃಷ್ಟ
ಕನಸಿನಲ್ಲಿ ಅಡಗಿರುವುದನ್ನು ಕಂಡರೆ :
ಕನಸಿನಲ್ಲಿ ವಸ್ತುವಿನ ಹಿಂದೆ ನೀವು ಅಡಗಿ ಕೊಂಡಿರುವುದನ್ನು ಕಂಡರೆ, ಅದು ಅಶುಭ ಸಂಕೇತವನ್ನು ನೀಡುತ್ತದೆ. ವೃತ್ತಿಯ ವಿಷಯದಲ್ಲಿ ಈ ಕನಸನ್ನು ಋಣಾತ್ಮಕವೆಂದು (negetive) ಪರಿಗಣಿಸಲಾಗುತ್ತದೆ. ಭವಿಷ್ಯದಲ್ಲಿ ನೀವು ಭೀಕರ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು ಎಂದು ಈ ಕನಸು ಸೂಚಿಸುತ್ತದೆ. ಈ ಕನಸು ಪುನರಾವರ್ತನೆಯಾದರೆ ಅದು ಅಶುಭ ಸಂಕೇತವಾಗಿರುತ್ತದೆ.
ಕನಸಿನಲ್ಲಿ ಹಾರುವುದು :
ಕನಸಿನಲ್ಲಿ ನೀವು ಆಕಾಶದಲ್ಲಿ ಹಾರುತ್ತಿರುವಂತೆ (flying in dream) ಕಂಡರೆ ಅದು ಶುಭ ಚಿಹ್ನೆಗಳನ್ನು ನೀಡುತ್ತದೆ. ಭವಿಷ್ಯದಲ್ಲಿ ನೀವು ನಿಮ್ಮ ವೃತ್ತಿಜೀವನದ ಎತ್ತರವನ್ನು ಮುಟ್ಟಲಿದ್ದೀರಿ ಎಂದು ಈ ಕನಸು ಸೂಚಿಸುತ್ತದೆ. ಇದಲ್ಲದೆ, ಈ ಕನಸು ನೇರವಾಗಿ ವೃತ್ತಿಜೀವನದಲ್ಲಿ ದೊಡ್ಡ ಯಶಸ್ಸಿನ ಬಗ್ಗೆ ಹೇಳುತ್ತದೆ.
ಇದನ್ನೂ ಓದಿ : Guru Rashi Parivartan: 2022 ರಲ್ಲಿ ಗುರುವಿನ ರಾಶಿ ಬದಲಾವಣೆಯಿಂದ ಈ ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.