Dream Interpretation: ಕನಸಲ್ಲಿ ಈ ಐದು ಪ್ರಾಣಿಗಳು ಕಂಡರೆ ಶುಭ ಸಂಕೇತ, ಸಿಗಲಿದೆ ಆಕಸ್ಮಿಕ ಧನಲಾಭ

Dream Interpretation: ಸ್ವಪ್ನ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ಕೆಲವು ವಸ್ತುಗಳನ್ನು ನೋಡುವುದು ಶುಭಕರ ಎಂದು ಹೇಳಲಾಗುತ್ತದೆ. ಇದರಂತೆಯೇ ಕನಸಿನಲ್ಲಿ ಕೆಲವು ವಸ್ತುಗಳು ಕಾಣಿಸಿಕೊಂಡರೆ ಅಶುಭ ಚಿಹ್ನೆಗಳನ್ನು ನೀಡುತ್ತವೆ,  ಕನಸಿನಲ್ಲಿ 5 ಪ್ರಾಣಿಗಳನ್ನು ನೋಡುವುದು ಮಂಗಳಕರವಾಗಿದೆ.

Written by - Nitin Tabib | Last Updated : Dec 13, 2021, 03:40 PM IST
  • ಈ 5 ಕನಸುಗಳು ಒಳ್ಳೆಯ ಸಂಕೇತಗಳನ್ನು ನೀಡುತ್ತವೆ.
  • ಕನಸಿನಲ್ಲಿ ಈ ಐದು ಪ್ರಾಣಿಗಳನ್ನು ನೋಡುವುದೇ ಮಂಗಳಕರ
  • ಈ ಕನಸುಗಳು ಹಠಾತ್ ಹಣದ ಲಾಭವನ್ನು ಸೂಚಿಸುತ್ತವೆ
Dream Interpretation: ಕನಸಲ್ಲಿ ಈ ಐದು ಪ್ರಾಣಿಗಳು ಕಂಡರೆ ಶುಭ ಸಂಕೇತ, ಸಿಗಲಿದೆ ಆಕಸ್ಮಿಕ ಧನಲಾಭ title=
Dream Interpretation (File Photo)

ನವದೆಹಲಿ: Dream Interpretation - ಸಪ್ನ ಶಾಸ್ತ್ರದ (Swapna Shastra) ಪ್ರಕಾರ, ಕನಸುಗಳು ಭವಿಷ್ಯದ (Future Incidents) ಘಟನೆಗಳನ್ನು ಸೂಚಿಸುತ್ತವೆ. ಅಲ್ಲದೆ, ಕನಸಿನಲ್ಲಿ ಕಾಣುವ ವಸ್ತುಗಳು ವಿವಿಧ ರೀತಿಯ ಸಂಕೇತಗಳನ್ನು ನೀಡುತ್ತವೆ. ಕನಸಿನಲ್ಲಿ ಕೆಲವು ವಸ್ತುಗಳನ್ನು ನೋಡುವುದು ಮಂಗಳಕರವಾದರೆ, ಕೆಲವು ಅಶುಭ ಸಂಕೇತಗಳನ್ನು ಸೂಚಿಸುತ್ತವೆ. ಕನಸಿನಲ್ಲಿ (Dream) ಪ್ರಾಣಿಗಳು ಕಾಣುವುದು (Animals Seen In Dreams) ಕೂಡ ಶುಭ ಸಂಕೇತಗಳನ್ನು  (Auspicious Sign)ನೀಡುತ್ತವೆ  ಕನಸಿನಲ್ಲಿ 5 ಪ್ರಾಣಿಗಳನ್ನು ನೋಡುವುದರ ಅರ್ಥವೇನೆಂದು ತಿಳಿದುಕೊಳ್ಳೋಣ ಬನ್ನಿ.

ಕನಸಿನಲ್ಲಿ ಕರಡಿ (Bear in Dream)
ಕನಸಿನಲ್ಲಿ ಕರಡಿಯನ್ನು ನೋಡುವುದು ಶುಭ ಸಂಕೇತ. ಆದರೆ, ಕನಸಿನಲ್ಲಿ ಕನಸಿನಲ್ಲಿ ನಿದ್ರಿಸುತ್ತಿರುವ ಕರಡಿ ಕಂಡರೆ, ಭವಿಷ್ಯದಲ್ಲಿ ಸಂಘರ್ಷವು ಹೆಚ್ಚಾಗಲಿದೆ ಮತ್ತು ಮುಂದಿನ ದಿನಗಳಲ್ಲಿ ಶ್ರಮ ಹೆಚ್ಚಾಗಲಿದೆ ಎಂದರ್ಥ.

ಕನಸಿನಲ್ಲಿ ಬೆಕ್ಕು (Cat in Dream)
ಕನಸಿನಲ್ಲಿ ಬೆಕ್ಕನ್ನು ನೋಡುವುದು ಶುಭ ಸಂಕೇತಗಳನ್ನು ನೀಡುತ್ತದೆ. ನಿಮ್ಮ ಕನಸಿನಲ್ಲಿ ಕಪ್ಪು ಬೆಕ್ಕು ಕಂಡರೆ ನೀವು ನಿಮ್ಮ ಪ್ರತಿಭೆಯನ್ನು ಅಭಿವೃದ್ಧಿಪಡಿಸಬೇಕು ಎಂದರ್ಥ. ನಿಮ್ಮ ಕನಸಿನಲ್ಲಿ ಭಯಾನಕ ಬೆಕ್ಕನ್ನು ನೀವು ನೋಡಿದರೆ, ನಿಜ ಜೀವನದಲ್ಲಿ ನೀವು ಜಾಗರೂಕರಾಗಿರಬೇಕು ಎಂದರ್ಥ.

ಕನಸಿನಲ್ಲಿ ನಾಯಿ  (Dog in Dream)
ಕನಸಿನಲ್ಲಿ ನಾಯಿಯನ್ನು ನೋಡುವುದು ಸಹ ಶುಭ ಸಂಕೇತವಾಗಿದೆ. ಇದಲ್ಲದೇ ಕನಸಿನಲ್ಲಿ ನಾಯಿ ಬೊಗಳುವ ಸದ್ದು ಕೇಳುವುದು ಕೂಡ ಶುಭಕರ. ಮತ್ತೊಂದೆಡೆ, ಕನಸಿನಲ್ಲಿ ನಾಯಿ ಕಚ್ಚುವುದು ಕಂಡುಬಂದರೆ, ನೀವು ಕೆಲವು ದೊಡ್ಡ ತೊಂದರೆಗಳನ್ನು ತೊಡೆದು ಹಾಕಲಿದ್ದೀರಿ ಎಂದರ್ಥ. ನಾಯಿ ಓಡಿದರೆ, ಅದು ಜೀವನದಲ್ಲಿ ಸುಧಾರಣೆ ಮಾಡುವ ಅವಶ್ಯಕತೆ ಇದೆ ಎಂದು ಸೂಚಿಸುತ್ತದೆ.

ಕನಸಿನಲ್ಲಿ ಆನೆ (Elephant in Dream)
ಸ್ವಪ್ತ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ಆನೆಯನ್ನು ನೋಡುವುದು ಶುಭ  ಸಂಕೇತಗಳನ್ನು ನೀಡುತ್ತದೆ. ಕನಸಿನಲ್ಲಿ ಆನೆ ಕಾಣುವುದು ನಿಜ ಜೀವನದಲ್ಲಿ ನೀವು ಸಿದ್ಧರಾಗಿರಬೇಕು ಎಂಬುದನ್ನು ಸೂಚಿಸುತ್ತದೆ. ನಿಮ್ಮ ಕನಸಿನಲ್ಲಿ ಆನೆಯ ಮೇಲೆ ಸವಾರಿ ಮಾಡುವುದನ್ನು ನೀವು ನೋಡಿದರೆ, ನಿಜ ಜೀವನದಲ್ಲಿ ನೀವು ಉತ್ತಮ ನಿರ್ದೇಶಕರಾಗುವ ಸಾಮರ್ಥ್ಯ ಹೊಂದಿದ್ದೀರಿ ಎಂದರ್ಥ.

ಇದನ್ನೂ ಓದಿ-ಧನು ರಾಶಿಗೆ ಸೂರ್ಯನ ಪ್ರವೇಶ, ಈ ರಾಶಿಗಳಿಗೆ ಆಗಲಿದೆ ಭಾರೀ ಲಾಭ, ನಿಮ್ಮ ರಾಶಿ ಯಾವುದು ನೋಡಿಕೊಳ್ಳಿ

ಕನಸಿನಲ್ಲಿ ಕಪ್ಪೆ (Frog in Dream)
ಕನಸಿನಲ್ಲಿ ನಿಮ್ಮ ಕೈಯಲ್ಲಿ ಕಪ್ಪೆಯನ್ನು ಹಿಡಿದಿಟ್ಟುಕೊಳ್ಳುವುದು ಮಂಗಳಕರ ಸಂಕೇತ ನೀಡುತ್ತದೆ. ಇದಲ್ಲದೇ ಕನಸಿನಲ್ಲಿ ಕಪ್ಪೆಯ ಸದ್ದು ಮಾತ್ರ ಕೇಳಿದರೆ ಜೀವನದಲ್ಲಿ ಹೊಸ ತಿರುವು ಬರುತ್ತದೆ ಎಂದರ್ಥ. ಆದರೆ ಕನಸಿನಲ್ಲಿ ಕಪ್ಪೆ ನೀರಿನಲ್ಲಿ ಕಾಣಿಸಿಕೊಂಡರೆ, ನಿಮ್ಮ ಭಾವನೆಗಳನ್ನು ನೀವು ನಿಯಂತ್ರಿಸಬೇಕು ಎಂದರ್ಥ.

ಇದನ್ನೂ ಓದಿ-ನಿಮ್ಮಲ್ಲಿ ಈ ಗುಣಗಳಿದ್ದರೆ ಸಾಡೇ ಸಾತಿ ಸಮಯದಲ್ಲಿಯೂ ಕೃಪೆ ತೋರಲಿದ್ದಾನೆ ಶನಿ

(Disclaimer: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನ್ಸುಸರಿಸುವುದಕ್ಕು ಮುನ್ನ ನುರಿತ ತಜ್ಞರ ಸಲಹೆ ಪಡೆದುಕೊಳ್ಳಿ)

ಇದನ್ನೂ ಓದಿ-Mercury Transit: ಧನು ರಾಶಿಗೆ ಬುಧನ ಪ್ರವೇಶ, ಈ 5 ರಾಶಿಯವರಿಗೆ ಶುಭ ದಿನಗಳು ಆರಂಭ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News