Shani Sruya Yuti 2023: ಜನವರಿ 15 ರಂದು ಸೂರ್ಯ ಮಕರ ರಾಶಿಗೆ ಪ್ರವೇಶಿಸಲಿದ್ದಾನೆ. ಈ ಪ್ರವೇಶದಿಂದ ಮಕರ ರಾಶಿಯಲ್ಲಿ ಸೂರ್ಯ ಹಾಗೂ ಶನಿಯ ಸಂಯೋಜನೆ ನೆರವೇರಲಿದೆ. ಪ್ರಸ್ತುತ ಅವರ ಈ ಸಂಯೋಜನೆ ಜಾಸ್ತಿ ಸಮಯ ಇರುವುದಿಲ್ಲ. ಏಕೆಂದರೆ ಎರಡೇ ದಿನಗಳ ಬಳಿಕ ಶನಿಯು ತನ್ನ ರಾಶಿಯನ್ನು ಪರಿವರ್ತಿಸಲಿದ್ದಾನೆ. ಹೀಗಿರುವಾಗ ಈ ಸಂಯೋಜನೆ ಕೇವಲ ಎರಡೇ ಎರಡು ದಿನಗಳವರೆಗೆ ಇರಲಿದೆ. ಜನವರಿ 17 ರಂದು ಶನಿ ರಾಶಿಯನ್ನು ಪರಿವರ್ತಿಸಲಿದ್ದಾನೆ. ವರ್ಷ 2023ರ ಪಾಲಿಗೆ ಈ ರಾಶಿ ಪರಿವರ್ತನೆ ಮಹತ್ವದ ರಾಶಿ ಪರಿವರ್ತನೆಗಳಲ್ಲಿ ಒಂದಾಗಿದೆ.

COMMERCIAL BREAK
SCROLL TO CONTINUE READING

ಶನಿ ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದಾದ ಬಳಿಕ ಫೆಬ್ರುವರಿ 13 ರಂದು ಸೂರ್ಯ ಕೂಡ ಇದೇ ರಾಶಿಗೆ ಪ್ರವೇಶಿಸಲಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಮತ್ತೆ ಕುಂಭ ರಾಶಿಯಲ್ಲಿ ಶನಿ-ಸೂರ್ಯರ ಸಂಯೋಜನೆ ನೆರವೇರಲಿದೆ. ಈ ಸಂಯೋಜನೆಯಿಂದ ಮೇಷ ರಾಶಿಯ ಜಾತಕದವರಿಗೆ ಜಬರ್ದಸ್ತ್ ಲಾಭ ಸಿಗಲಿದೆ. ಮಿಥುನ ರಾಶಿಯ ಜಾತಕದವರಿಗೆ ಭಾಗ್ಯದ ಸಾಥ್ ಸಿಗಲಿದೆ. ಕನ್ಯಾ ರಾಶಿಯ ಜಾತಕದವರ ಪಾಲಿಗೆ ಈ ಸಮಯ ಸಾಕಷ್ಟು ಉತ್ತಮವಾಗಿರಲಿದೆ. ಈ ರಾಶಿಯ ಜಾತಕ ಹೊಂದಿರುವವರಿಗೆ ವ್ಯಾಪಾರ ಹಾಗೂ ನೌಕರಿಯಲ್ಲಿ ಧನ ಲಾಭ ಪ್ರಾಪ್ತಿಯಾಗಲಿದೆ. ಹೀಗಾಗಿ ಹೂಡಿಕೆ ಮಾಡುವಾಗ ಸ್ವಲ್ಪ ಎಚ್ಚರಿಕೆಯಿಂದ ಹೂಡಿಕೆ ಮಾಡಿ. 


ಇದನ್ನೂ ಓದಿ-Chanakya Niti: ಜೀವನದಲ್ಲಿ ಯಶಸ್ಸಿಗಾಗಿ ಈ ಕಹಿ ಗಿಡದ ಎರಡು ಹಣ್ಣುಗಳ ರುಚಿಯನ್ನು ನೀವು ಸವಿಯಲೇಬೇಕು

ಮತ್ತೊಂದೆಡೆ ಶನಿಯ ಕಾರಣ ಎರಡೂವರೆ ವರ್ಷಗಳ ಕಾಟ ಮತ್ತು ಸಾಡೇಸಾತಿ ಎದುರಿಸುತ್ತಿರುವ ಜನರಿಗೂ ಕೂಡ ಈ ಕಾಲ ಸಕಾರಾತ್ಮಕ ವಾತಾವರಣ ನಿರ್ಮಿಸಲಿದೆ. ಇದೇ ಕಾರಣದಿಂದ ಈ ಸಂಯೋಜನೆ ಎಲ್ಲಾ ರಾಶಿಗಳ ಜನರ ಪಾಲಿಗೆ ಅತ್ಯಂತ ಶುಭ ಎಂದು ಭಾವಿಸಿದರೆ ತಪ್ಪಾಗಲಾರದು.


ಇದನ್ನೂ ಓದಿ-Astrology: ಅತ್ಯಂತ ಅಶುಭ ನಕ್ಷತ್ರ ಇದು, ಜನವರಿ ತಿಂಗಳಿನಲ್ಲಿ ಯಾವ-ಯಾವ ದಿನ ಈ ನಕ್ಷತ್ರ ಇರಲಿದೆ?


ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.