Surya Grahan 2022: ಈ ರಾಶಿ ಮತ್ತು ನಕ್ಷತ್ರದಲ್ಲಿ ಗೋಚರಿಸಲಿದೆ ವರ್ಷದ ಮೊದಲ ಸೂರ್ಯಗ್ರಹಣ, ಯಾರ ಮೇಲೆ ಏನು ಪರಿಣಾಮ ?
ಪಂಚಾಂಗದ ಪ್ರಕಾರ, ಈ ವರ್ಷದ ಮೊದಲ ಸೂರ್ಯಗ್ರಹಣ ಯಾವಾಗ ಮತ್ತು ಯಾವ ನಕ್ಷತ್ರದಲ್ಲಿ ಗೋಚರಿಸಲಿದೆ ನೋಡೋಣ.
ನವದೆಹಲಿ : Surya Grahan 2022 : ಧಾರ್ಮಿಕ ಮತ್ತು ವೈಜ್ಞಾನಿಕ ದೃಷ್ಟಿಕೋನದಿಂದ ಸೂರ್ಯಗ್ರಹಣವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ (Surya Grahan 2022). 2022 ರಲ್ಲಿ ಒಟ್ಟು 4 ಗ್ರಹಣಗಳು ಸಂಭವಿಸಲಿವೆ. ಅದರಲ್ಲಿ 2 ಸೂರ್ಯಗ್ರಹಣ, 2 ಚಂದ್ರಗ್ರಹಣ. ಪಂಚಾಂಗದ ಪ್ರಕಾರ, ಈ ವರ್ಷದ ಮೊದಲ ಸೂರ್ಯಗ್ರಹಣ ಯಾವಾಗ ಮತ್ತು ಯಾವ ನಕ್ಷತ್ರದಲ್ಲಿ ಗೋಚರಿಸಲಿದೆ ನೋಡೋಣ (Surya grahana date).
2022 ರ ಮೊದಲ ಸೂರ್ಯಗ್ರಹಣ :
ಪಂಚಾಂಗದ ಪ್ರಕಾರ, ವರ್ಷದ ಮೊದಲ ಸೂರ್ಯಗ್ರಹಣವು ಏಪ್ರಿಲ್ 30 ರ ಶನಿವಾರ ಸಂಭವಿಸುತ್ತದೆ (Surya Grahan 2022). ಗ್ರಹಣವು ಮಧ್ಯಾಹ್ನ 12:15 ರಿಂದ ಸಂಜೆ 4:7 ರವರೆಗೆ ಇರಲಿದೆ. ವರ್ಷದ ಮೊದಲ ಸೂರ್ಯಗ್ರಹಣವು ಭಾಗಶಃ ಗ್ರಹಣವಾಗಿರುತ್ತದೆ (Solar eclipse). ಇದನ್ನು ದಕ್ಷಿಣ ಅಮೆರಿಕಾ, ಪಶ್ಚಿಮ ಅಮೆರಿಕಾ, ಅಟ್ಲಾಂಟಿಕ್ ಪೆಸಿಫಿಕ್ ಮತ್ತು ಅಂಟಾರ್ಟಿಕಾದಲ್ಲಿ ಕಾಣಬಹುದು. ಈ ಸೂರ್ಯಗ್ರಹಣದ ಸೂತಕ ಅವಧಿಯು ಮಾನ್ಯವಾಗಿರುವುದಿಲ್ಲ.
ಇದನ್ನೂ ಓದಿ : ಶನಿಯ ರಾಶಿಯಲ್ಲಿ ಶುಕ್ರನ ಪ್ರವೇಶ, ನಾಳೆಯಿಂದ ಈ ಅದು ರಾಶಿಗಳಿಗೆ ಜಬರ್ ದಸ್ತ್ ಲಾಭ
ಯಾವ ರಾಶಿಚಕ್ರ ಮತ್ತು ನಕ್ಷತ್ರಪುಂಜದಲ್ಲಿ ಮೊದಲ ಸೂರ್ಯಗ್ರಹಣ ಸಂಭವಿಸುತ್ತದೆ?
ವರ್ಷದ ಮೊದಲ ಸೂರ್ಯಗ್ರಹಣ ಭರಣಿ ನಕ್ಷತ್ರ, ವೃಷಭ ರಾಶಿಯಲ್ಲಿ ಸಂಭವಿಸಲಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ (Astrology), ಈ ಗ್ರಹಣವು ಭಾಗಶಃ ಗ್ರಹಣವಾಗಿರುತ್ತದೆ. ಇದಲ್ಲದೆ, ವರ್ಷದ ಎರಡನೇ ಸೂರ್ಯಗ್ರಹಣವು ಅಕ್ಟೋಬರ್ 25, 2022 ರಂದು ಸಂಭವಿಸುತ್ತದೆ.
ಗ್ರಹಣದ ಸಮಯದಲ್ಲಿ ಏನು ಮಾಡಬಾರದು?
ಶಾಸ್ತ್ರಗಳ ಪ್ರಕಾರ ಗ್ರಹಣದ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡು ವಂತಿಲ್ಲ. ಗ್ರಹಣದಂದು ದೇವರ ಪೂಜೆ ಮಾಡಬಾರದು. ಹಾಗೆಯೇ ತುಳಸಿ ಎಲೆಗಳನ್ನು (Tulsi leaves)ಕೀಳಬಾರದು. ಸೂರ್ಯಗ್ರಹಣ ಪ್ರಾರಂಭವಾದಾಗ ಮನೆಯಿಂದ ಹೊರಗೆ ಹೋಗಬಾರದು. ಗ್ರಹಣದ ಸಮಯದಲ್ಲಿ ಗರ್ಭಿಣಿ ಮಹಿಳೆ ವಿಶೇಷ ಕಾಳಜಿ ವಹಿಸಬೇಕು. ಸೂಜಿಗಳು ಮತ್ತು ಚಾಕುಗಳು ಅಥವಾ ಇತರ ಚೂಪಾದ ವಸ್ತುಗಳನ್ನು ಬಳಸಬಾರದು.
ಇದನ್ನೂ ಓದಿ : ಮಾರ್ಚ್ 4 ರಂದು ರೂಪುಗೊಳ್ಳುತ್ತಿದೆ ದುರ್ಲಬ ಯೋಗ, ಪ್ರೇಮ ವಿವಾಹಕ್ಕೆ ಅಡೆತಡೆಯಾಗುತ್ತಿದ್ದರೆ ಅಂದು ಈ ಕೆಲಸ ಮಾಡಿ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ