ಈ ದಿನಾಂಕದಂದು ಜನಿಸಿದವರ ವೈವಾಹಿಕ ಜೀವನದಲ್ಲಿ ಎದುರಾಗಲಿದೆ ಸಮಸ್ಯೆ ..!
ಸಂಖ್ಯಾಶಾಸ್ತ್ರದಲ್ಲಿ, ಪ್ರತಿ ಮೂಲಾಂಕದ ವ್ಯಕ್ತಿಯ ದೋಷಗಳು ಮತ್ತು ಗುಣ ಲಕ್ಷಣಗಳ ಬಗ್ಗೆ ಹೇಳಲಾಗಿದೆ. ಇಂದು ನಾವು ಮೂಲಾಂಕ 7 ರ ಜನರ ಬಗ್ಗೆ ಹೇಳಲಿದ್ದೇವೆ.
ಬೆಂಗಳೂರು : ಸಂಖ್ಯಾಶಾಸ್ತ್ರವು 1 ರಿಂದ 9 ರವರೆಗಿನ ರಾಡಿಕ್ಸ್ ಮೂಲಕ ಭವಿಷ್ಯ ಮತ್ತು ಅವರ ಸ್ವಭಾವವನ್ನು ಹೇಳುತ್ತದೆ (Numerology). ರಾಡಿಕ್ಸ್ ಎಂಬುದು ವ್ಯಕ್ತಿಯ ಜನ್ಮ ದಿನಾಂಕದ ಮೊತ್ತವಾಗಿದೆ. ಉದಾಹರಣೆಗೆ, ಯಾವುದೇ ತಿಂಗಳ 15 ರಂದು ಜನಿಸಿದ ವ್ಯಕ್ತಿಯು 6 ರ ಮೂಲಾಂಕವನ್ನು ಹೊಂದಿರುತ್ತಾನೆ. ಪ್ರತಿ ರಾಶಿಚಕ್ರದ ಜನರ ಕೆಲವು ಗುಣಲಕ್ಷಣಗಳನ್ನು ಜ್ಯೋತಿಷ್ಯದಲ್ಲಿ ಹೇಳಲಾಗಿದೆ (Astrology). ಅದೇ ರೀತಿ ಸಂಖ್ಯಾಶಾಸ್ತ್ರದಲ್ಲಿ, ಪ್ರತಿ ಮೂಲಾಂಕದ ವ್ಯಕ್ತಿಯ ದೋಷಗಳು ಮತ್ತು ಗುಣ ಲಕ್ಷಣಗಳ ಬಗ್ಗೆ ಹೇಳಲಾಗಿದೆ. ಇಂದು ನಾವು ಮೂಲಾಂಕ 7 ರ ಜನರ ಬಗ್ಗೆ ಹೇಳಲಿದ್ದೇವೆ. ಯಾವುದೇ ತಿಂಗಳ 7, 16 ಅಥವಾ 25 ರಂದು ಜನಿಸಿದ ಎಲ್ಲ ಜನರ ರಾಡಿಕ್ಸ್ ಸಂಖ್ಯೆ 7 ಆಗಿರುತ್ತದೆ.
ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತವೆ :
ಸಂಖ್ಯಾಶಾಸ್ತ್ರದ ಪ್ರಕಾರ, ರಾಡಿಕ್ಸ್ 7 ಇರುವ ಜನರ ವೈವಾಹಿಕ ಜೀವನವು ಸಾಮಾನ್ಯವಾಗಿ ಸುಖಮಯವಾಗಿರುವುದಿಲ್ಲ. ಅವರ ದಾಂಪತ್ಯ ಜೀವನದಲ್ಲಿ ಏರಿಳಿತವಿರುತ್ತದೆ. ಈ ಜನ್ಮ ದಿನಾನಕ್ದಲ್ಲಿ ಜನಿಸಿದವರು ಕೆಲವರು ಪ್ರೀತಿಯ ವಿಚಾರದಲ್ಲಿ ನೋವು ಅನುಭವಿಸಬೇಕಾಗಬಹುದು (future of radix number 7). ಇನ್ನು ಕೆಲವರಿಗೆ ಸಂಗಾತಿಯೊಂದಿಗೆ ಜೀವನ ನಡೆಸುವುದೇ ಕಷ್ಟವಾಗಬಹುದು. ಈ ಮೂಲಾಂಕದ ಜನರು ಏಕಾಂಗಿ ಜೀವನ ನಡೆಸಬೇಕಾಗಿಯೂ ಬರಬಹುದು.
ಇದನ್ನೂ ಓದಿ : ವರ್ಷ ಪೂರ್ತಿ ಈ ಮೂರು ರಾಶಿಯವರ ಮೇಲೆ ತನ್ನ ಕೃಪಾ ದೃಷ್ಟಿ ಹರಿಸಲಿದ್ದಾನೆ ಶನಿ ದೇವ
ರಾಡಿಕ್ಸ್ ಸಂಖ್ಯೆ 7 ರ ಜನ ಶುದ್ದ ಮನಸ್ಸಿನವರು :
ಮೂಲಾಂಕ 7 ಹೊಂದಿರುವ ಜನರ ಮನಸ್ಸು ಶುದ್ದವಾಗಿರುತ್ತದೆ. ಇವರು ತಮ್ಮ ಸಂಗಾತಿಯ ಬಗ್ಗೆ ಮತ್ತು ಅವರ ಜೊತೆಗಿರುವವರ ಬಗ್ಗೆಯೂ ತುಂಬಾ ಕಾಳಜಿ ವಹಿಸುತ್ತಾರೆ (Numerology) ಆದರೆ ತಮ್ಮ ಭಾವನೆಗಳನ್ನು ಸರಿಯಾಗಿ ವ್ಯಕ್ತಪಡಿಸಲು ಇವರಿಗೆ ಸಾಧ್ಯವಾಗುವುದಿಲ್ಲ. ಇದರಿಂದಾಗಿ ಜನರು ಅವರ ಪ್ರೀತಿಯನ್ನು ಅರ್ಥಮಾಡಿಕೊಳ್ಳುವುದಿಲ್ಲ. ಈ ಮೂಲಾಂಕದ ಜನರು ature of radix nember 7) ತಮ್ಮ ಮನಸ್ಸಿನ ಭಾವನೆಗಳನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ.
ಇದನ್ನೂ ಓದಿ : Budh Gochar: 24 ಗಂಟೆಗಳಲ್ಲಿ ಬದಲಾಗಲಿದೆ ಈ 3 ರಾಶಿಯವರ ಭವಿಷ್ಯ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.