ಬೆಂಗಳೂರು : ಜ್ಯೋತಿಷ್ಯದಂತೆಯೇ, ವ್ಯಕ್ತಿಯ ಭವಿಷ್ಯವನ್ನು ಲೆಕ್ಕಾಚಾರ ಮಾಡಲು ಸಂಖ್ಯಾಶಾಸ್ತ್ರವನ್ನು ಸಹ ಬಳಸಲಾಗುತ್ತದೆ (Numerology) . ಸಂಖ್ಯಾಶಾಸ್ತ್ರದಲ್ಲಿ, ವ್ಯಕ್ತಿಯ ಹುಟ್ಟಿದ ದಿನಾಂಕದಿಂದ ರಾಡಿಕ್ಸ್ ಅಥವಾ ಮೂಲಾಂಕವನ್ನು ಲೆಕ್ಕ  ಹಾಕಲಾಗುತ್ತದೆ.  ಈ ಮೂಲಕ ವ್ಯಕ್ತಿಯ ಸ್ವಭಾವ, ವೃತ್ತಿ ಮತ್ತು ವೈವಾಹಿಕ ಜೀವನದ ಬಗ್ಗೆ ತಿಳಿಯಲಾಗುತ್ತದೆ. 3, 12, 21 ಅಥವಾ 30ನೇ ತಾರೀಕಿನಂದು ಜನಿಸಿದವರ  ರಾಡಿಕ್ಸ್ ಸಂಖ್ಯೆ 3 ಆಗಿರುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ, ಈ ಮೂಲಾಂಕದ ಅಧಿಪತಿ ಗುರುದೇವ ಬೃಹಸ್ಪತಿ (Guru). 


COMMERCIAL BREAK
SCROLL TO CONTINUE READING

ರಾಡಿಕ್ಸ್ 3 ಜನರ ಸ್ವಭಾವ- :
ಮೂಲಾಂಕ ಮೂರು  ಹೊಂದಿರುವ ಜನರು ಧೈರ್ಯಶಾಲಿಗಳು, ಸ್ವಾತಂತ್ರ್ಯವನ್ನು ಪ್ರೀತಿಸುವವರು,  ಬುದ್ಧಿವಂತರು ಮತ್ತು ಮಹತ್ವಾಕಾಂಕ್ಷೆಯುಳ್ಳವರು (Nature of radix 3). ಅವರು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸದಾ ಸಿದ್ಧರಾಗಿರುತ್ತಾರೆ. ಇವರು ಸ್ವಭಾವತಃ ಸ್ವಲ್ಪ ಹಠಮಾರಿಗಳು. ಇವರು ಅಂದುಕೊಂಡ ಕೆಲಸವನ್ನು ಮುಗಿಸಿಯೇ ತೀರುತ್ತಾರೆ. ಈ ಜನರು ತಮ್ಮ ಪ್ರತಿಭೆಯಿಂದ ಇತರರನ್ನು ಆಕರ್ಷಿಸುತ್ತಾರೆ. ಇವರು ತಮ್ಮ ಜೀವನದಲ್ಲಿ ಯಾರ ಹಸ್ತಕ್ಷೇಪವನ್ನು ಕೂಡಾ ಇಷ್ಟಪಡುವುದಿಲ್ಲ. ಅವರು ಎಲ್ಲವನ್ನೂ ತಮ್ಮದೇ ಆದ ರೀತಿಯಲ್ಲಿ ಮಾಡಲು ಇಷ್ಟಪಡುತ್ತಾರೆ. 


ಇದನ್ನೂ ಓದಿ :  ಮೊಟ್ಟೆಗಳನ್ನು ತಿನ್ನುವುದರಿಂದ ಹೆಚ್ಚಾಗಲಿದೆಯೇ ಡಯಾಬಿಟೀಸ್ ? ಬಯಲಾಗಿದೆ ಆಘಾತಕಾರಿ ಸತ್ಯ


ಯಾವುದು ಒಳ್ಳೆಯ ದಿನ ?: 
ಯಾವುದೇ ತಿಂಗಳ 3, 12, 21 ಅಥವಾ 30 ರಂದು ಜನಿಸಿದವರ  ಮೂಲಾಂಕ 3 ಆಗಿರುತ್ತದೆ.  ರಾಡಿಕ್ಸ್ 3 ರ ಜನರಿಗೆ ಗುರುವಾರ ಮತ್ತು ಭಾನುವಾರ ಅತ್ಯಂತ ಮಂಗಳಕರವಾಗಿರುತ್ತದೆ ಎನ್ನಲಾಗಿದೆ.   ಯಾವುದೇ ಕೆಲಸದಲ್ಲಿ ಯಶಸ್ಸನ್ನು ಪಡೆಯಲು, ಈ ರಾಡಿಕ್ಸ್ ಹೊಂದಿರುವ ಜನರು ನಿರ್ದಿಷ್ಟ ದಿನಾಂಕ ಮತ್ತು ದಿನವನ್ನು ಬಳಸಬೇಕು ಎಂದು ಹೇಳಲಾಗುತ್ತದೆ (Numerology 2022).


ವೈವಾಹಿಕ ಜೀವನ  :
ಸಂಖ್ಯಾಶಾಸ್ತ್ರದ ಪ್ರಕಾರ, ರಾಡಿಕ್ಸ್ ಸಂಖ್ಯೆ 3 ಹೊಂದಿರುವವರ ಕೌಟುಂಬಿಕ ಜೀವನವು ಸಂತೋಷವಾಗಿರುತ್ತದೆ. ರಾಡಿಕ್ಸ್ ಸಂಖ್ಯೆ 3 ಹೊಂದಿರುವವರು ರಾಡಿಕ್ಸ್ 6 ಮತ್ತು 9 ರಿಗಿಂತ ಹೆಚ್ಚು ಉತ್ತಮರು. ವೈವಾಹಿಕ ಜೀವನದಲ್ಲಿ ಹೆಚ್ಚಿನ ಯಶಸ್ಸು ಹೊಂದಿರುತ್ತಾರೆ (Nature of radix 3). 


ಇದನ್ನೂ ಓದಿ : 30 ವರ್ಷಗಳ ಬಳಿಕ ಶನಿ ಮತ್ತು ಸೂರ್ಯನ ಸ್ಥಾನದಲ್ಲಿ ಅಪರೂಪದ ಯೋಗ : ಈ ಎರಡು ರಾಶಿಯವರಿಗೆ ಭಾರೀ ಅದೃಷ್ಟ


ರಾಡಿಕ್ಸ್ 3 ರ ಅದೃಷ್ಟದ ಬಣ್ಣ :
ರಾಡಿಕ್ಸ್ 3 ರ  ಅದೃಷ್ಟದ ಬಣ್ಣ  ಹಳದಿ, ಕೆಂಪು ಮತ್ತು ಕಿತ್ತಳೆ ಬಣ್ಣ. ಇವರು ಮನೆ ಮತ್ತು ಕಚೇರಿಯಲ್ಲಿ ಈ ಬಣ್ಣಗಳನ್ನು ಬಳಸಬೇಕು ಎಂದು ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ ಅದೃಷ್ಟ ಒಲಿದು ಬರುತ್ತದೆ ಎನ್ನಲಾಗುತ್ತದೆ. ಗುರುವಾರ ಹಳದಿ ಬಣ್ಣವನ್ನು ಧರಿಸುವುದು ಇವರಿಗೆ ಮಂಗಳಕರವಾಗಿರುತ್ತದೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.