ರಾಶಿಚಕ್ರದ ಚಿಹ್ನೆಗಳ ಮೇಲೆ ರಾಹು ಕೇತು ಗೋಚಾರ 2022 ಉತ್ತಮ ಪರಿಣಾಮ:  ಏಪ್ರಿಲ್ 2022 ರ ತಿಂಗಳು ಬಹಳ ವಿಶೇಷವಾಗಿದೆ. ಈ ತಿಂಗಳು ಇತರ ಗ್ರಹಗಳ ಜೊತೆಗೆ ಶನಿ ಮತ್ತು ರಾಹು-ಕೇತುಗಳಂತಹ ಗ್ರಹಗಳು ಸಹ ತಮ್ಮ ರಾಶಿಯನ್ನು ಬದಲಾಯಿಸುತ್ತಿವೆ. ಏಪ್ರಿಲ್ 12 ರಂದು, ರಾಹು ರಾಶಿಚಕ್ರವನ್ನು ಬದಲಾಯಿಸುವ ಮೂಲಕ ಮೇಷ ರಾಶಿಯನ್ನು ಪ್ರವೇಶಿಸಿದ್ದಾನೆ. ಅದೇ ಸಮಯದಲ್ಲಿ, ಕೇತು ತುಲಾ ರಾಶಿಯಲ್ಲಿ ಸಾಗುತ್ತಾನೆ. ಈ ಎರಡು ಗ್ರಹಗಳು ಯಾವಾಗಲೂ ಹಿಮ್ಮುಖವಾಗಿ ಚಲಿಸುತ್ತವೆ. ರಾಹು-ಕೇತುಗಳ ಸ್ಥಾನದಲ್ಲಿ, ಈ ಬದಲಾವಣೆಯು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಶುಭ ಮತ್ತು ಅಶುಭ ಪರಿಣಾಮವನ್ನು ಉಂಟು ಮಾಡಲಿವೆ. ಹಾಗಿದ್ದರೆ ಇತ್ತೀಚಿನ ರಾಹು-ಕೇತು ರಾಶಿ ಪರಿವರ್ತನೆಯು ಯಾವ ರಾಶಿಯವರಿಗೆ ಶುಭ ಎಂದು ತಿಳಿಯೋಣ. 


COMMERCIAL BREAK
SCROLL TO CONTINUE READING

ಈ 3 ರಾಶಿಯವರ ಮೇಲೆ ದಯೆ ತೋರಲಿದ್ದಾರೆ ರಾಹು-ಕೇತು :
ಮೇಷ ರಾಶಿ:

ರಾಹು-ಕೇತುಗಳ ಸಂಚಾರವು ಮೇಷ ರಾಶಿಯವರಿಗೆ ತುಂಬಾ ಶುಭಕರವಾಗಿದೆ. ಈ ಸಮಯದಲ್ಲಿ ಮೇಷ ರಾಶಿಯವರ ಆತ್ಮವಿಶ್ವಾಸ ಹೆಚ್ಚುತ್ತದೆ. ವೃತ್ತಿಜೀವನದಲ್ಲಿ ಎದುರಾಗಿದ್ದ ಅಡೆತಡೆಗಳಿಂದ ಮುಕ್ತಿ ದೊರೆಯಲಿದೆ ಮತ್ತು ಯಾವುದೇ ಕೆಲಸದಲ್ಲಿ ಪ್ರಗತಿಯನ್ನು ಪಡೆಯುತ್ತೀರಿ. ಆದರೆ, ಯಾರೊಂದಿಗೂ ಕಹಿಯಾಗಿ ಮಾತನಾಡಬೇಡಿ. 


ಇದನ್ನೂ ಓದಿ- Hanuma Jayanti: ಹನುಮ ಜಯಂತಿಯಂದು ರೂಪುಗೊಳ್ಳುತ್ತಿದೆ ವಿಶೇಷ ಯೋಗ, ಶನಿಯ ವಕ್ರದೃಷ್ಟಿಯಿಂದ ಪಾರಾಗಲು ಸುವರ್ಣಾವಕಾಶ!


ವೃಷಭ ರಾಶಿ:
ರಾಹು-ಕೇತುಗಳ ಸಂಕ್ರಮಣ ಅವಧಿಯು ವೃಷಭ ರಾಶಿಯವರಿಗೆ ವೃತ್ತಿಜೀವನಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ. ಅವರು ಹೊಸ ಉದ್ಯೋಗ ಪ್ರಸ್ತಾಪವನ್ನು ಪಡೆಯಬಹುದು. ಬಡ್ತಿ ಪಡೆಯಬಹುದು. ಆದಾಯ ಹೆಚ್ಚಲಿದೆ. ವಿದೇಶಕ್ಕೆ ಹೋಗುವ ಯೋಗವಿದೆ. ಆದರೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. 


ಇದನ್ನೂ ಓದಿ- Rahu-Ketu Gochar: ಜೀವನದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಲು ಬರುತ್ತಿದ್ದಾರೆ ರಾಹು ಕೇತು, ನಿಮ್ಮ ಜೀವನದಲ್ಲಗಳಿವೆ ಈ ಬದಲಾವಣೆ


ಮಿಥುನ ರಾಶಿ:
ರಾಹು-ಕೇತುಗಳ ಸಂಚಾರವು ಮಿಥುನ ರಾಶಿಯವರಿಗೆ ಬಹಳಷ್ಟು ಹಣವನ್ನು ಗಳಿಸುವ ಅವಕಾಶವನ್ನು ನೀಡುತ್ತದೆ. ಸಮಾಜದಲ್ಲಿ ಗೌರವ ಹೆಚ್ಚುವುದು. ನಿಮ್ಮ ಸಂಗಾತಿಯನ್ನು ನೋಡಿಕೊಳ್ಳಿ. ಸಂಗಾತಿಯ ಭಾವನೆಗಳನ್ನು ನಿರ್ಲಕ್ಷಿಸಿದರೆ ತೊಂದರೆಗಳು ಉಂಟಾಗಬಹುದು. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.