ಈ ವಿಷಯದಲ್ಲಿ ನೀವು ಮಾಡುವ ಒಂದು ಸಣ್ಣ ತಪ್ಪು ಜೀವನಪೂರ್ತಿ ನೋವು ನೀಡಬಹುದು
ಆಚಾರ್ಯ ಚಾಣಕ್ಯ ಅವರು ಸಂತೋಷದ ಮತ್ತು ಯಶಸ್ವಿ ಜೀವನವನ್ನು ನಡೆಸುವ ತಂತ್ರಗಳನ್ನು ಹೇಳುವುದರೊಂದಿಗೆ, ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಏನು ಮಾಡಬಾರದು ಎನ್ನುವುದನ್ನು ಕೂಡಾ ಹೇಳಿದ್ದಾರೆ.
ನವದೆಹಲಿ : ಸ್ನೇಹ ಪ್ರತಿಯೊಬ್ಬನ ಜೀವನದ ಒಂದು ಪ್ರಮುಖ ಸಂಬಂಧವಾಗಿದೆ. ಅನೇಕ ಬಾರಿ, ರಕ್ತಸಂಬಂಧವು ದೂರವಾದಾಗಲೂ ಸಹ, ಸ್ನೇಹಿತರು ನೆರಳಿನಂತೆ ಜೊತೆಗೆ ನಿಲ್ಲುತ್ತಾರೆ. ಪ್ರತಿ ಕಷ್ಟದ ಸಮಯದಲ್ಲಿಯೂ ಸಹಾಯ ಮಾಡುತ್ತಾರೆ. ಆದರೆ ಕೆಲವೊಮ್ಮೆ ಸ್ನೇಹ ಸಂಬಂಧವು ಜೀವನದುದ್ದಕ್ಕೂ ದುಃಖವನ್ನು ನೀಡುತ್ತದೆ. ಆಚಾರ್ಯ ಚಾಣಕ್ಯ (Chanakya) , ಮಹಾನ್ ರಾಜತಾಂತ್ರಿಕ, ರಾಜಕಾರಣಿ ಮತ್ತು ಅರ್ಥಶಾಸ್ತ್ರದ ವಿದ್ವಾಂಸರು. ಆದರೂ ಅವರು ಜೀವನಕ್ಕೆ ಸಂಬಂಧಿಸಿದ ಅನೇಕ ಪ್ರಮುಖ ವಿಚಾರಗಳ ಬಗ್ಗೆಯೂ ಬೋಧಿಸಿದ್ದಾರೆ. ಅವರು ಬರೆದ ನೀತಿ ಶಾಸ್ತ್ರದಲ್ಲಿ (Chanakya Niti) ಸ್ನೇಹ, ಸಂಬಂಧಗಳ ಬಗ್ಗೆ ಏಣು ಹೇಳಿದ್ದಾರೆಯೋ ಅದು ಇಂದಿಗೂ ಪ್ರಸ್ತುತವಾಗಿದೆ. ಚಾಣಕ್ಯ ನೀತಿ ಪ್ರಕಾರ, 2 ರೀತಿಯ ಸ್ನೇಹಿತರು ತುಂಬಾ ಅಪಾಯಕಾರಿ.
ಸ್ನೇಹದ ವಿಚಾರದಲ್ಲಿ ಈ ತಪ್ಪನ್ನು ಮಾಡಬೇಡಿ :
ಆಚಾರ್ಯ ಚಾಣಕ್ಯ (Chanakya Niti) ಅವರು ಸಂತೋಷದ ಮತ್ತು ಯಶಸ್ವಿ ಜೀವನವನ್ನು ನಡೆಸುವ ತಂತ್ರಗಳನ್ನು ಹೇಳುವುದರೊಂದಿಗೆ, ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಏನು ಮಾಡಬಾರದು ಎನ್ನುವುದನ್ನು ಕೂಡಾ ಹೇಳಿದ್ದಾರೆ. ಇವುಗಳಲ್ಲಿ ಒಂದು ಸ್ನೇಹಕ್ಕೆ ಸಂಬಂಧಿಸಿದ ಕೆಲವು ತಪ್ಪುಗಳು. ಆಚಾರ್ಯ ಚಾಣಕ್ಯ ಹೇಳುವ ಪ್ರಕಾರ ಸ್ನೇಹಿತರನ್ನು ಮಾಡುವುದು ಮಾತ್ರವಲ್ಲ ಸ್ನೇಹವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ (Chanakya niti about friendship). ಈ ವಿಷಯದಲ್ಲಿ ಎಂದಿಗೂ ತಪ್ಪು ಮಾಡಬಾರದು. ಇಲ್ಲದಿದ್ದರೆ ನೀವು ನಿಮ್ಮ ಜೀವನದುದ್ದಕ್ಕೂ ಪಶ್ಚಾತ್ತಾಪ ಪಡಬೇಕಾಗುತ್ತದೆ. ಆಚಾರ್ಯ ಚಾಣಕ್ಯ ಹೇಳುವಂತೆ ಸ್ನೇಹಿತರಲ್ಲಿ ಎರಡು ವಿಧ. ಮೊದಲನೆಯದ್ದು ಒಳ್ಳೆಯ ಮತ್ತು ನಿಜವಾದ ಸ್ನೇಹಿತರು. ಎರಡನೆಯದ್ದು, ಸ್ನೇಹದ ಸೋಗಿನಲ್ಲಿ ಬರುವ ಶತ್ರುಗಳು.
ಇದನ್ನೂ ಓದಿ : Vastu Tips: ನಿಮ್ಮ ಮನೆ-ಕಚೇರಿ ಟೇಬಲ್‌ನಲ್ಲಿ ಈ ವಸ್ತುಗಳನ್ನು ಎಂದಿಗೂ ಇಡಬೇಡಿ
-ಗೆಳೆತನದ ನೆಪದಲ್ಲಿ ಸ್ನೇಹಿತ ನಿಮಗೆ ಹಾನಿ ಮಾಡುತ್ತಿದ್ದರೆ, ಆದಷ್ಟು ಬೇಗ ಅವನಿಂದ ದೂರವಿರಿ. ಅವನು ನಿಮಗೆ ಯಾವುದೇ ದಿನ ದೊಡ್ಡ ಹೊಡೆತ ಅಥವಾ ಹಾನಿಯನ್ನು ನೀಡಬಹುದು.
- ನಿಮ್ಮ ಜೀವನದಲ್ಲಿ ನೀವು ಒಳ್ಳೆಯ ಮತ್ತು ನಿಜವಾದ ಸ್ನೇಹಿತನನ್ನು ಹೊಂದಿದ್ದರೂ ಸಹ, ಅವನನ್ನು ಎಚ್ಚರಿಕೆಯಿಂದ ಪರೀಕ್ಷಿಸಿದ ನಂತರವೇ ನಿಮ್ಮ ರಹಸ್ಯಗಳನ್ನು ಅವನಿಗೆ ತಿಳಿಸಿ (Sharing secret with friend). ರಹಸ್ಯದ ಬಗ್ಗೆ ಎಲ್ಲವನ್ನೂ ಅವನಿಗೆ ಹೇಳದಿರುವುದು ಉತ್ತಮ. ಏಕೆಂದರೆ ನೀವು ಎಂದಾದರೂ ಅವನೊಂದಿಗಿನ ನಿಮ್ಮ ಸ್ನೇಹವನ್ನು ಮುರಿದರೆ, ನಿಮ್ಮ ರಹಸ್ಯಗಳನ್ನು ಇತರರಿಗೆ ಹೇಳುವ ಮೂಲಕ ಅವನು ನಿಮಗೆ ದೊಡ್ಡ ಹಾನಿ ಮಾಡಬಹುದು. ಆದ್ದರಿಂದ, ಯಾವುದೇ ಸ್ನೇಹಿತನನ್ನು ನಂಬಿ, ಮುಂಬರುವ ಸಮಯದಲ್ಲಿ ಅವನು ಅದರ ಲಾಭವನ್ನು ಪಡೆದುಕೊಳ್ಳುವ ರಹಸ್ಯಗಳನ್ನು ಸ್ನೇಹಿತನೊಂದಿಗೆ ಹಂಚಿಕೊಳ್ಳಬೇಡಿ.
ಇದನ್ನೂ ಓದಿ : ಸದಾ ಬಂಗಾರ ಧರಿಸುವುದು ಈ ನಾಲ್ಕು ರಾಶಿಯವರಿಗೆ ಅದೃಷ್ಟವಂತೆ ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.