ಸದಾ ಬಂಗಾರ ಧರಿಸುವುದು ಈ ನಾಲ್ಕು ರಾಶಿಯವರಿಗೆ ಅದೃಷ್ಟವಂತೆ ..!

ಕೆಲವು ರಾಶಿಯವರು ಚಿನ್ನ ಧರಿಸಿದರೆ ಅದೃಷ್ಟ ಸದಾ ಅವರ ಜೊತೆಗಿರುತ್ತದೆಯಂತೆ. ಹಾಗಿದ್ದರೆ ಯಾವ ರಾಶಿಯವರುಗೆ ಚಿನ್ನ ಅದೃಷ್ಟ ನೋಡೋಣ.. 

Written by - Zee Kannada News Desk | Last Updated : Feb 16, 2022, 11:05 AM IST
  • ರಾಶಿಗೆ ಅನುಗುಣವಾಗಿ ಲೋಹ ಧರಿಸಬೇಕು
  • ಚಿನ್ನ ಧರಿಸುವುದು ಈ ರಾಶಿಯವರಿಗೆ ಅದೃಷ್ಟ
  • ಎಲ್ಲಾ ಕೆಲಸ ಕಾರ್ಯಗಳಲ್ಲೂ ಸಿಗುತ್ತದೆ ಯಶಸ್ಸು
ಸದಾ ಬಂಗಾರ ಧರಿಸುವುದು ಈ ನಾಲ್ಕು ರಾಶಿಯವರಿಗೆ ಅದೃಷ್ಟವಂತೆ ..! title=
ರಾಶಿಗೆ ಅನುಗುಣವಾಗಿ ಲೋಹ ಧರಿಸಬೇಕು (file photo)

ನವದೆಹಲಿ : ಜ್ಯೋತಿಷ್ಯದ ಪ್ರಕಾರ (Astrology) ಒಬ್ಬ ವ್ಯಕ್ತಿ ಏನು ಧರಿಸಿದರೆ ಶುಭ ಏನು ಧರಿಸಿದರೆ ಅಶುಭ ಎಂದು ಕೂಡಾ ಹೇಳಲಾಗಿದೆ. ಅದೃಷ್ಟ ಪಡೆಯಬೇಕಾದರೆ ಏನು ಮಾಡಬೇಕು ಎನ್ನುವುದನ್ನು ಸೂಚಿಸಲಾಗಿದೆ. ಅವರವರ ರಾಶಿಗೆ ಅನುಗುಣವಾಗಿ (Zodiac sign) ಯಾರು ಏನು ಧರಿಸಿದರೆ ಅದೃಷ್ಟ ಎನ್ನುವುದನ್ನು ಹೇಳಲಾಗಿದೆ. ಈ ನಿಟ್ಟಿನಲ್ಲಿ ಕೆಲವು ರಾಶಿಯವರು ಚಿನ್ನ ಧರಿಸಿದರೆ ಅದೃಷ್ಟ ಸದಾ ಅವರ ಜೊತೆಗಿರುತ್ತದೆಯಂತೆ. ಹಾಗಿದ್ದರೆ ಯಾವ ರಾಶಿಯವರುಗೆ ಚಿನ್ನ ಅದೃಷ್ಟ ನೋಡೋಣ.. 

ಮೇಷ : ಮೇಷ ರಾಶಿಯವರಿಗೆ (Aries) ಚಿನ್ನವನ್ನು ಧರಿಸುವುದು ಶುಭ. ವಿಶೇಷವಾಗಿ ಚಿನ್ನದ ಉಂಗುರವನ್ನು ಧರಿಸುವುದರಿಂದ ಅವರ ಧೈರ್ಯ ಮತ್ತು ಶೌರ್ಯ ಹೆಚ್ಚಾಗುತ್ತದೆ. ಅದೃಷ್ಟ ಹೆಚ್ಚಾಗುತ್ತದೆ. ಸಂಬಂಧಗಳು ಬಲವಾಗಿರುತ್ತವೆ. ಸಾಲವಿದ್ದರೂ ಕೂಡಾ ಕೆಲವೇ ದಿನಗಳಲ್ಲಿ ಸಾಲದ ಸಮಸ್ಯೆ ಪರಿಹಾರವಾಗುತ್ತದೆಯಂತೆ. 

ಇದನ್ನೂ ಓದಿ : Magha Purnima: ಮಾಘ ಪೂರ್ಣಿಮೆಯಂದು ಈ ವಸ್ತುಗಳನ್ನು ದಾನ ಮಾಡುವುದರಿಂದ ಜೀವನದ ಎಲ್ಲಾ ಕಷ್ಟ ದೂರವಾಗುತ್ತೆ

ಸಿಂಹ : ಸಿಂಹ ರಾಶಿಯವರಿಗೆ (Leo) ಚಿನ್ನವು ಅದೃಷ್ಟವನ್ನು ತರುತ್ತದೆ. ಈ ರಾಶಿಯವರು ಚಿನ್ನದ ಆಭರಣಗಳನ್ನು ಅದರಲ್ಲೂ ವಿಶೇಷವಾಗಿ ಚಿನ್ನದ ಉಂಗುರಗಳನ್ನು ಧರಿಸಬೇಕು. ಇದು ಅವರಿಗೆ ಉದ್ಯೋಗ-ವ್ಯವಹಾರದಲ್ಲಿ ಪ್ರಗತಿಯನ್ನು ನೀಡುತ್ತದೆ.  ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುತ್ತದೆ. ಹೆಚ್ಚಿನ ಪರಿಶ್ರಮವಿಲ್ಲದೆ ಕೆಲಸ ಕಾರ್ಯಗಳಲ್ಲಿ ಯಶಸ್ಸು  ಸಿಗುತ್ತದೆ.  

ಕನ್ಯಾ ರಾಶಿ : ಚಿನ್ನದ ಉಂಗುರವಲ್ಲದೆ ಕನ್ಯಾ ರಾಶಿಯವರಿಗೆ (Virgo) ಚಿನ್ನದ ಸರ ಅಥವಾ ಬಳೆ ಧರಿಸುವುದು ತುಂಬಾ ಒಳ್ಳೆಯದು. ಇದರೊಂದಿಗೆ, ಜೀವನದ ಸಮಸ್ಯೆಗಳು ಒಂದೊಂದಾಗಿ ಕೊನೆಗೊಳ್ಳುತ್ತವೆ ಮತ್ತು ಪ್ರತಿ ಕೆಲಸದಲ್ಲಿ ಉತ್ತಮ ಫಲಿತಾಂಶಗಳು ದೊರೆಯುತ್ತವೆ. ಜೀವನದಲ್ಲಿ ಸಂಪತ್ತು ಮತ್ತು ಐಶ್ವರ್ಯ ಹೆಚ್ಚಾಗುತ್ತದೆ. 

ಧನು ರಾಶಿ : ಧನು ರಾಶಿಯವರಿಗೆ (Sagitarius) ಚಿನ್ನವನ್ನು ಧರಿಸುವುದು ತುಂಬಾ ಮಂಗಳಕರ. ಇದು ಅವರಿಗೆ ಎಲ್ಲದರಲ್ಲೂ ಯಶಸ್ಸನ್ನು ನೀಡುತ್ತದೆ. ಗುರು ಗ್ರಹವು (Jupiter) ಶುಭ ಫಲಿತಾಂಶಗಳನ್ನು ನೀಡುತ್ತದೆ. ಇದರಿಂದಾಗಿ ಅವರು ಸಾಕಷ್ಟು ಹೆಸರು-ಪ್ರಸಿದ್ಧಿಯನ್ನು ಗಳಿಸುತ್ತಾರೆ. ಅಪಾರ ಸಂಪತ್ತಿನ ಒಡೆಯನಾಗುತ್ತಾರೆ. ಜೀವನದಲ್ಲಿ ಉನ್ನತ ಸ್ಥಾನಮಾನ ಮತ್ತು ಸಂತೋಷದ ಜೀವನವನ್ನು ಪಡೆಯುತ್ತಾರೆ. ಜೀವನದಲ್ಲಿ ಯಾವುದಕ್ಕೂ ಕೊರತೆ ಎದುರಾಗುವುದಿಲ್ಲ.  

ಇದನ್ನೂ ಓದಿ Magh Purnima 2022: ಮಾಘ ಪೂರ್ಣಿಮೆಯಂದು ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News