Astro Prediction For Annual Appraisal: ಹೊಸ ಆರ್ಥಿಕ  ವರ್ಷ ಆರಂಭಗೊಂಡಿದೆ. ಏಪ್ರಿಲ್ ತಿಂಗಳು ಮುಕ್ತಾಯದ ಹಂತಕ್ಕೆ ಬಂದಿದೆ. ಅಂದರೆ, ವೇತನ ಎಷ್ಟು ಹೆಚ್ಚಾಗಲಿದೆ? ಯಾರಿಗೆ ಅಪ್ರೆಸಲ್ ಸಿಗಲಿದೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗುವ ಕಾಲ ಕೂಡಿ ಬಂದಿದೆ. ಈ ಬಾರಿ ನಿಮ್ಮ ವೇತನ ಎಷ್ಟು ಹೆಚ್ಚಾಗಲಿದೆ ಎಂಬುದು ನಿಮಗೆ ತಿಳಿದಿದೆಯೇ? ಈ ಪ್ರಶ್ನೆಗೆ ಉತ್ತರ ನಿಮ್ಮ ರಾಶಿಯಲ್ಲಿ ಅಡಗಿದೆ. ಆಚಾರ್ಯ ಡಾ. ವಿಕ್ರಮಾದಿತ್ಯ ಅವರು ಈ ಪ್ರಶ್ನೆಗೆ ಉತ್ತರಿಸಿದ್ದಾರೆ. ಅಷ್ಟೇ ಅಲ್ಲ ನಿಮಗೆ ಎಲ್ಲಿ ಎಷ್ಟು ಲಾಭ ಸಿಗಲಿದೆ ಎಂಬುದರ ಉತ್ತರವನ್ನೂ ಕೂಡ ನೀಡಿದ್ದಾರೆ.

COMMERCIAL BREAK
SCROLL TO CONTINUE READING

ಮೇಷ: ಉತ್ತಮ ಅಪ್ರೆಸಲ್ ಸಿಗುವ ಸಂಕೇತಗಳು ಗೋಚರಿಸುತ್ತಿವೆ. ಜನರು ನಿಮ್ಮ ಪ್ರತಿಭೆಯನ್ನು ಗುರುತಿಸಲಿದ್ದಾರೆ. ಲಾಭದ ಯೋಗ ನಿರ್ಮಾಣಗೊಳ್ಳುತ್ತಿದೆ. ಶತ್ರುಗಳಿಂದ ಎಚ್ಚರ! ಅವರು ನಿಮ್ಮ ಮೇಲೆ ಕೆಸರೆರೆಚುವ ಸಾಧ್ಯತೆ ಇದೆ.

ವೃಷಭ: ನಿಮ್ಮ ಮಹತ್ವಾಕಾಂಕ್ಷೆಯನ್ನು ಹಿಡಿತದಲ್ಲಿ ಇಟ್ಟುಕೊಳ್ಳಿ. ಎಷ್ಟೇ ಸಿಕ್ಕರೂ ಸಂತೋಷದಿಂದ ಇರಿ. ದೊಡ್ಡ ಜಿಗಿತಕ್ಕೆ ಹಾತೊರೆಯಬೇಡಿ. ಪ್ರಗತಿಯ ಉತ್ತಮ ಅವಕಾಶಗಳು ಗೋಚರಿಸುತ್ತಿವೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಮರೆಯಬೇಡಿ.

ಮಿಥುನ: ಸಂಘರ್ಷ ಇರಲಿದೆ. ಆದರೆ, ಗೌರವಯುತ ಸ್ಥಾನ ಪ್ರಾಪ್ತಿಯಾಗಲಿದೆ. ಲಾಭ ಹಾಗೂ ಆದಾಯದ ಯೋಗ ನಿರ್ಮಾಣಗೊಳ್ಳುತ್ತಿವೆ. ನಿಧಾನಕ್ಕೆ ಎಲ್ಲವೂ ಸಿಗಲಿದೆ, ಶಾಂತಿ ಕಾಪಾಡಿ.

ಕರ್ಕ: ಅದೃಷ್ಟ ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸಲಿದೆ, ಮೊಂಡುತನದಿಂದಾಗಿ, ಕೆಲಸ ಹಾಳಾಗಬಹುದು. ಚುರುಕುತನದಿಂದ ಅಥವಾ ಜಾಣ್ಮೆಯಿಂದ ಕಾರ್ಯನಿರ್ವಹಿಸಿ. ಇದು ವೇತನ ಹೆಚ್ಚಳದಲ್ಲಿ ವಿಶೇಷ ಪಾತ್ರ ವಹಿಸಲಿದೆ. ಯುಕ್ತಿಯ  ಅನುಪಸ್ಥಿತಿಯಲ್ಲಿ, ಬಾಸ್ ನಿಮ್ಮ ಕೋಪಿಸಿಕೊಳ್ಳುವ ಸಾಧ್ಯತೆ ಇದೆ.

ಸಿಂಹ: ನಿಮ್ಮ ಭಾಗ್ಯ ಚಕ್ರ ಹಾಗೂ ಕುಚಕ್ರಗಲೆರಡು ಕೂಡ ಉತ್ತಮ ವ್ಯವಸ್ಥೆಯನ್ನು ರೂಪಿಸಲು ಸಿದ್ಧಗೊಂಡಿವೆ. ಶಾಂತ ಚಿತ್ತದಿಂದ ನಿಮ್ಮ ಧೈರ್ಯವನ್ನು ಬೆಂಬಲ ನೀಡಿ, ನೀವು ನಿಮ್ಮ ಕೆಲಸವನ್ನು ಪೂರ್ಣಗೊಳಿಸಬಹುದು. ಈ ವರ್ಷ ನಿಮಗೆ ಉತ್ತಮ ನಗದು ಪ್ರಾಪ್ತಿಯಾಗಲಿದೆ ಎಂದು ನಿಮ್ಮ ರಾಶಿ ಹೇಳುತ್ತಿದೆ. ಏಪ್ರಿಲ್ ಹಾಗೂ ಮೇ ಈ ಎರಡೂ ತಿಂಗಳುಗಳನ್ನು ಶಾಂತಿಯಿಂದ ಕಳೆಯಿರಿ. ಶತ್ರುಗಳ ಜೊತೆಗೆ ವಿನಾ ಕಾರಣ ತಕರಾರು ಮಾಡಿಕೊಳ್ಳಬೇಡಿ. ಆರೋಗ್ಯದ  ಬಗ್ಗೆ ವಿಶೇಷ ಕಾಳಜಿವಹಿಸಿ.

ಕನ್ಯಾ: ಮುಂದೆ ಸಾಗಲು ಸಾಕಷ್ಟು ಅವಕಾಶವಿದೆ. ಗ್ರಹಗಳು ಲಾಭದಾಯಕವಾಗಿವೆ. ನಿಮ್ಮ ವ್ಯಕ್ತಿತ್ವದ ಪ್ರಯೋಜನ ನಿಮಗೆ ಸಿಗಲಿದೆ. ಪ್ರಮೋಶನ್ ಸಿಗುವ ಸಾಧ್ಯತೆ ಇದೆ. ಆದರೆ ಗುಪ್ತ ಶತ್ರುಗಳಿಂದ ಅಂತರ ಕಾಯ್ದುಕೊಳ್ಳಿ.

ತುಲಾ: ಭಾಗ್ಯದ ಜೊತೆಗೆ ಈ ವರ್ಷ ನಿಮ್ಮ ದ್ವಂದ್ವ ಇರಲಿದೆ. ಸರಿಯಾದ ಅಪ್ರೆಸಲ್ ಸಿಗುವಲ್ಲಿ ಅಡಚಣೆಗಳು ಎದುರಾಗುವ ಸಾಧ್ಯತೆ ಇದೆ. ಯಾವ ವಸ್ತು ಎಷ್ಟು ಸಿಗಲಿದೆಯೋ, ಅಷ್ಟೇ ಅದರ ಕೊರತೆ ಕಾಡಲಿದೆ. ಕೋಪದ ಮೇಲೆ ನಿಯಂತ್ರಣ ಸಾಧಿಸಿ. ಭಾಗ್ಯದ ಸಾಥ್ ಸಿಗಲಿದೆ.

ವೃಶ್ಚಿಕ: ಭಾಗ್ಯದ ಸಾಥ್ ನಿಮ್ಮೊಂದಿಗೆ ಇದ್ದೆ ಇರಲಿದೆ. ಅದರ ಜೊತೆಗೆ ನಿಮಗೆ ನಿಮ್ಮ ವ್ಯಕ್ತಿತ್ವದ ಬೆಂಬಲ ಕೂಡ ಸಿಗಲಿದೆ. ಲಾಭದ ಉತ್ತಮ ಅವಕಾಶ ಕೂಡಿಬರಲಿದೆ. ಆದರೆ, ಯಾರೂ ನಿಮ್ಮ ದಾರಿಯಲ್ಲಿ ಅಡೆತಡೆಗಳನ್ನು ಹುಟ್ಟುಹಾಕುತ್ತಿದ್ದಾರೆ. ಧೈರ್ಯದಿಂದ ನಿಮ್ಮ ಕಾರ್ಯವನ್ನು ಮುಂದುವರೆಸಿ. ಹನುಮನನ್ನು ಆರಾಧಿಸಿ.

ಧನು: ಭಾಗ್ಯ ನಿಮ್ಮೊಂದಿಗಿರಲಿದೆ. ಸಮಯದ ಸಾಥ್ ಕೂಡ ಸಿಗಲಿದೆ. ಇದೆ ಯೋಗದಲ್ಲಿ ನಿಮಗೆ ಧನ ಹಾಗೂ ಉನ್ನತ ಹುದ್ದೆ ಕೂಡ ಪ್ರಾಪ್ತಿಯಾಗಲಿದೆ. ಆಲಸ್ಯ ತೊರೆಯಿರಿ. ನೀವು ಆಲೋಚಿಸುತ್ತಿರುವ ಸಂಗತಿಯ ಮೇಲೆ ತಕ್ಷಣ ಕಾರ್ಯ ಆರಂಭಿಸಿ. ಉತ್ತಮ ಫಲ ಪ್ರಾಪ್ತಿಯಾಗಲಿದೆ.

ಮಕರ: ನಿಮ್ಮ ಭಾಗ್ಯ ನಿಮ್ಮನ್ನು ಬೆಂಬಲಿಸುವ ಪಾತ್ರದಲ್ಲಿದೆ. ಹಲವು ಹೊಸ ಯೋಜನೆಗಳ ಆಲೋಚನೆಗಳು ಬರಲಿವೆ. ನೀವು ನಿರ್ಧರಿಸುವ ಯಾವುದೇ ಒಂದು ಯೋಜನೆಯ ಮೇಲೆ ಕಾರ್ಯಾರಂಭ ಮಾಡಿ. ಯೋಜನೆ ಸಂಪೂರ್ಣ ಯಶಸ್ವಿಯಾಗುವ ಸಾಧ್ಯತೆ ಇದೆ. ಧನಲಾಭದ ಯೋಗ ಕೂಡ ಗೋಚರಿಸುತ್ತಿದೆ.


ಇದನ್ನೂ ಓದಿ-Budh Rashi Parivartan: ಬುಧನ ರಾಶಿ ಬದಲಾವಣೆ ಈ 6 ರಾಶಿಗಳ ಭಾಗ್ಯ ಬದಲಾಯಿಸಲಿದೆ

ಕುಂಭ: ಎಲ್ಲಾ ಗ್ರಹಗಳು ಅನುಕೂಲಕರವಾಗಿರಲಿವೆ. ಲಾಭ ನಿಮ್ಮದಾಗಲಿದೆ. ಹಣ ಕೂಡ ಪ್ರಾಪ್ತಿಯಾಗಲಿದೆ. ಹೊಸ ಮಿತ್ರರಿಂದ ಲಾಭ ಸಿಗಲಿದೆ. ಅತಿಯಾದ  ಸಜ್ಜನಿಕೆ ಬೇಡ, ಹಾನಿ ಸಾಧ್ಯತೆ ಇದೆ.


ಇದನ್ನೂ ಓದಿ- Shukra Gochar April 2022: ಪ್ರೀತಿ-ಹಣ-ರೋಮಾನ್ಸ್ ನಿಂದ ತುಂಬಲಿದೆ ಈ 3 ರಾಶಿಗಳ ಜನರ ಜೀವನ

ಮೀನ: ಗ್ರಹಗಳು ಮಿತ್ರರಾಗಲು ಸಿದ್ಧಗೊಂಡಿವೆ. ನಿಮಗೆ ನಿಮ್ಮ ವ್ಯಕ್ತಿತ್ವದ ಲಾಭ ಸಿಗಲಿದೆ. 45 ಡಿಗ್ರಿ ಅಭಿವೃದ್ಧಿ, ಅಂದರೆ ಸರಳ ರೇಖೆಯಲ್ಲಿ ಭಾಗ್ಯದ ಲಕ್ಷಣಗಳು ಉತ್ತಮಗೊಳ್ಳುವ ಎಲ್ಲಾ ಸಾಧ್ಯತೆಗಳಿವೆ. ನಿಮ್ಮ ರಾಶಿಯಲ್ಲಿ ಇಚ್ಚಾಧಾರಿ ಯೋಗ ನಿರ್ಮಾಣಗೊಳ್ಳುತ್ತಿದೆ. ಉತ್ತಮ ಆಲೋಚನೆಗಳಿರಲಿ ಎಂಬುದನ್ನು ನೆನಪಿಡಿ. ಕೆಟ್ಟ ಆಲೋಚನೆಗಳು ಹಾನಿಯುಂಟು ಮಾಡಲಿವೆ. 


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.