Shukra Gochar April 2022: ಪ್ರೀತಿ-ಹಣ-ರೋಮಾನ್ಸ್ ನಿಂದ ತುಂಬಲಿದೆ ಈ 3 ರಾಶಿಗಳ ಜನರ ಜೀವನ

Venus Transit in Aquarius 2022: ಶುಕ್ರ ರಾಶಿ ಪರಿವರ್ತನೆ ಈ ಮೂರು ರಾಶಿಗಳ ಜನರಿಗೆ ಭಾರಿ ಖುಷಿಯನ್ನು ನೀಡಲಿದೆ. ವೈಯಕ್ತಿಕ ಜೀವನದಿಂದ ಹಿಡಿದು ವೃತ್ತಿಜೀವನದವರೆಗಿನ ಹಲವು ಲಾಭಗಳು ಸಿಗಲಿವೆ.   

Written by - Nitin Tabib | Last Updated : Apr 22, 2022, 06:49 PM IST
  • ಶೀಘ್ರದಲ್ಲಿಯೇ ಪ್ರೀತಿ-ಹಣ ಮತ್ತು ರೋಮಾನ್ಸ್ ನಿಂದ ಈ ಮೂರು ರಾಶಿಗಳ ಜನರ ಜೀವನ
  • ಕುಂಭ ರಾಶಿ ತೊರೆದು ಮೀನ ರಾಶಿ ಪ್ರವೇಶಿಸಲಿರುವ ಶುಕ್ರ
  • ಯಾವ ಯಾವ ರಾಶಿಗಳ ಪಾಲಿಗೆ ಇದು ಶುಭ ಸಂಕೇತವಾಗಿದೆ?
Shukra Gochar April 2022: ಪ್ರೀತಿ-ಹಣ-ರೋಮಾನ್ಸ್ ನಿಂದ ತುಂಬಲಿದೆ ಈ 3 ರಾಶಿಗಳ ಜನರ ಜೀವನ title=
Shukra Gochara 2022

Shukra Rashi parivartan April 2022: ಜೋತಿಷ್ಯ ಶಾಸ್ತ್ರದಲ್ಲಿ ಸಾಮಾನ್ಯವಾಗಿ ಶುಕ್ರನನ್ನು ಪ್ರೀತಿ, ಪ್ರಣಯ, ಸೌಂದರ್ಯದ ಕಾರಕ ಗ್ರಹ ಎಂದು ಹೇಳಲಾಗಿದೆ. ಶುಕ್ರನ ರಾಶಿ ಪರಿವರ್ತನೆ ಎಲ್ಲಾ 12 ರಾಶಿಗಳ ಜನರ ಜೀವನದ ಮೇಲೆ ಶುಭ ಮತ್ತು ಅಶುಭ ಪರಿಣಾಮಗಳನ್ನು ಬೀರುತ್ತದೆ. ಏಪ್ರಿಲ್ 27 ರಂದು ಶುಕ್ರನ ಈ ಸ್ಥಾನಪಲ್ಲಟ ನಡೆಯಲಿದೆ. ಶುಕ್ರನ ಈ ರಾಶಿ ಪರಿವರ್ತನೆ 3 ರಾಶಿಗಳ ಜನರ ಪಾಲಿಗೆ ಬಹಳ ಶುಭ ಫಲಿತಾಂಶಗಳನ್ನು ಒದಗಿಸಲಿದೆ. ಇದರಿಂದ ವಿವಾಹವಾದವರ ಜೀವನ ಪೀತಿ, ಪ್ರಣಯದಿಂದ ಕೂಡಿದ್ದರೆ, ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಇದರ ಜೊತೆಗೆ ಸಾಕಷ್ಟು ಧನಾಗಮನದ ಸಂಕೇತಗಳೂ ಕೂಡ ಗೊಚರಿಸುತ್ತಿವೆ.

ಕುಂಭ ರಾಶಿಗೆ ಶುಕ್ರನ ಪ್ರವೇಶ
ಪ್ರಸ್ತುತ ಶುಕ್ರ, ಶನಿಯ ರಾಶಿಯಾಗಿರುವ ಕುಂಭ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಏಪ್ರಿಲ್ 27ರಾಂಡ್ ಶುಕ್ರ, ಮೀನ ರಾಶಿಯಲ್ಲಿ ಗೋಚರಿಸಲಿದ್ದಾನೆ. ಶುಕ್ರನ ಈ ಗೋಚರ ಸಾಯಂಕಾಲ 06:06 ಕ್ಕೆ ಸಂಭವಿಸಲಿದ್ದು, ಮೂರು ರಾಶಿಗಳ ಜನರ ಪಾಲಿಗೆ ಅತ್ಯಂತ ಮಂಗಳಕರ ಫಲ ನೀಡಲಿದೆ, ಇವರ ಜೀವನದಲ್ಲಿ ಸಾಕಷ್ಟು ಸುಖ-ಸಮೃದ್ಧಿ ಹರಿದು ಬರಲಿದೆ. 

ವೃಷಭ ರಾಶಿ 
ಶುಕ್ರನ ಈ ರಾಶಿ ಪರಿವರ್ತನೆ ವೃಷಭ ರಾಶಿಯ ಜಾತಕ ಇರುವವರ ಪಾಲಿಗೆ ತುಂಬಾ ಒಳ್ಳೆಯ ದಿನಗಳನ್ನು ತರಲಿದೆ. ಇವರ ಆದಾಯ ಹೆಚ್ಚಾಗಲಿದೆ. ಧನಲಾಭದ ಲಕ್ಷಣಗಳು ಗೋಚರಿಸುತ್ತಿವೆ. ನಿಮಗೆ ಬರಬೇಕಾಗಿರುವ ಹಣ ನಿಮ್ಮ ಕೈಸೇರಲಿದೆ. ನೌಕರಿ, ವ್ಯಾಪಾರಕ್ಕೂ ಕೂಡ ಈ ಸಮಯ ತುಂಬಾ ಉತ್ತಮವಾಗಿರಲಿದೆ. ನಿಮ್ಮ ಇಚ್ಛೆಗೆ ಅನುಗುಣವಾಗಿ ನೌಕರಿ ಸಿಗಲಿದೆ. ಬಡ್ತಿ ಸಿಗುವ ಸಾಧ್ಯತೆ ಇದೆ. ವ್ಯಾಪಾರಿಗಳಿಗೆ ಉತ್ತಮ ಲಾಭ ಸಿಗಲಿದೆ. ಲವ್ ಪಾರ್ಟ್ನರ್ ಸಿಗುವ ಪ್ರಬಲ ಯೋಗವಿದೆ. ವಿವಾಹಿತರ ವೈವಾಹಿಕ ಜೀವನ ಖುಷಿಯಿಂದ ತುಂಬಿರಲಿದೆ.

ಮಿಥುನ ರಾಶಿ
ಮಿಥುನ ರಾಶಿಯ ಜಾತಕದವರ ಪಾಲಿಗೆ ಶುಕ್ರನ ಈ ರಾಶಿ ಪರಿವರ್ತನೆ ಹಲವು ಕೊಡುಗೆಗಳನ್ನು ಹೊತ್ತು ತರಲಿದೆ. ವೃತ್ತಿಜೀವನದ ದೃಷ್ಟಿಯಿಂದ ಈ ಸಮಯ ತುಂಬಾ ಉತ್ತಮವಾಗಿರಲಿದೆ. ಕಾರ್ಯಕ್ಷೇತ್ರದಲ್ಲಿ ಘನತೆ-ಗೌರವ ಹೆಚ್ಚಾಗಲಿದೆ. ಬಡ್ತಿ ಸಿಗುವ ಸಾಧ್ಯತೆ ಇದೆ. ಈ ಮೊದಲು ನೀವು ಪಟ್ಟ ಶ್ರಮಕ್ಕೆ ಪುರಸ್ಕಾರದ ರೂಪದಲ್ಲಿ ಫಲ ಪ್ರಾಪ್ತಿಯಾಗಲಿದೆ. ವ್ಯಾಪಾರಿಗಳಿಗೆ ಲಾಭ ಪ್ರಾಪ್ತಿಯಾಗಲಿದೆ. ವಿದೇಶದಿಂದ ಲಾಭ ಹರಿದುಬರುವ ಯೋಗವಿದೆ. ಈ ಹಿಂದೆ ನೀವು ಮಾಡಿರುವ ಹೂಡಿಕೆಗೆ ಉತ್ತಮ ಆದಾಯ ಸಿಗಲಿದೆ. ಜೀವನದಲ್ಲಿ ಪ್ರಣಯ ಹೆಚ್ಚಾಗಲಿದೆ. ಸಂಗಾತಿಯ ಜೋತೆಗಿನ ಸಂಬಂಧದಲ್ಲಿ ಮಧುರತೆ ಇರಲಿದೆ.

ಇದನ್ನೂ ಓದಿ-ASTROLOGY: ಮನೆ ಈ ಸದಸ್ಯರಿಂದ ಗ್ರಹಗಳ ಅಶುಭ ಪರಿಣಾಮ ಅಂತ್ಯವಾಗುತ್ತದೆ, ಹೇಗೆ?

ಕರ್ಕ ರಾಶಿ 
ಕರ್ಕ ರಾಶಿಯ ಜಾತಕದವರಿಗೆ ಶುಕ್ರನ ಈ ಗೋಚರ ಭಾಗ್ಯ ಬೆಳಗಲು ಕಾರಣವಾಗಲಿದೆ. ಪ್ರತಿಯೊಂದು ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ಪ್ರಮೋಶನ್-ಇನ್ಕ್ರಿಮೆಂಟ್ ಹಾಗೂ ಪುರಸ್ಕಾರ ಸಿಗುವ ಎಲ್ಲಾ ಸಾಧ್ಯತೆಗಳಿವೆ. ದೂರದ ಪ್ರಯಾಣ ಕೈಗೊಳ್ಳುವಿರಿ. ವಾಹನ-ಆಸ್ತಿ ಖರೀದಿಯ ಯೋಗವಿದೆ. ಜೀವನದಲ್ಲಿ ಸುಖ ಸಮೃದ್ಧಿ ಹೆಚ್ಚಾಗಲಿದೆ. ವೈಯಕ್ತಿಕ ಜೀವನದಲ್ಲಿ ಸಂತೋಷ ಹೆಚ್ಚಾಗಲಿದೆ.

ಇದನ್ನೂ ಓದಿ-Garuda Purana: ಇಡೀ ಜೀವನವನ್ನೇ ಬದಲಾಯಿಸುವ ಈ 7 ಸಂಗತಿಗಳ ಬಗ್ಗೆ ನಿಮಗೆ ತಿಳಿದಿದೆಯೇ?

(Disclaimer - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News