ಬೆಂಗಳೂರು : ಇಂದಿನ ಕಾಲದಲ್ಲಿ ಜನರನ್ನು ಚರ್ಮದ ಸಮಸ್ಯೆಗಳು  ಬಾಧಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯ ಕೂಡಾ ಇದಕ್ಕೆ ಕಾರಣ. ನಮ್ಮಲ್ಲಿ ಹಲವರು ತ್ವಚೆಯ ಸಮಸ್ಯೆಗಳನ್ನು ಹೋಗಲಾಡಿಸಲು ಅನೇಕ ದುಬಾರಿ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ, ಅದರಿಂದ ಯಾವುದೇ ವಿಶೇಷ ಪ್ರಯೋಜನ ಸಿಗುವುದಿಲ್ಲ. ಯಾವುದೇ ಅಡ್ಡ ಪರಿಣಾಮವಿಲ್ಲದೆ ಹೊಳೆಯುವ ಚರ್ಮವನ್ನು ಹೊಂದಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ ಬದಲಾಗುತ್ತಿರುವ ಲೈಫ್ ಸ್ಟೈಲ್ ನಿಂದಾಗಿ ಮೊಡವೆ, ಕಲೆಗಳಂತಹ ಸಮಸ್ಯೆಗಳು ಕಾಡುತ್ತಿವೆ. 


COMMERCIAL BREAK
SCROLL TO CONTINUE READING

ಈ ಎಲ್ಲಾ ತ್ವಚೆಯ ಸಮಸ್ಯೆಗಳನ್ನು ಹೋಗಲಾಡಿಸಲು ಮನೆಯಲ್ಲಿ ತಯಾರಿಸಿದ ಫೇಸ್ ಪ್ಯಾಕ್‌ಗಳನ್ನು ಬಳಸಬಹುದು. ಇದು ನಿಮ್ಮ ಚರ್ಮವನ್ನು ಸುಂದರವಾಗಿ ಕಾಣುವಂತೆ ಮಾಡುತ್ತದೆ. ನಾವಿಲ್ಲಿ ಕೋಕೋ ಪೌಡರ್ ಬಗ್ಗೆ ಮಾತನಾಡುತ್ತಿದ್ದೇವೆ. ಇದನ್ನು ಹೆಚ್ಚಾಗಿ ಕಾಫಿ ಮತ್ತು ಸಿಹಿತಿಂಡಿಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದು ಚರ್ಮಕ್ಕೆ ಬಹಳ  ಪ್ರಯೋಜನಕಾರಿಯಾಗಿದೆ. ಕೋಕೋ ಪೌಡರ್ ತ್ವಚೆಗೆ ಹೊಳಪು ನೀಡುವಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ. ಕೋಕೋ ಪೌಡರ್ ನಿಂದ ಮಾಡಿದ ಫೇಸ್ ಪ್ಯಾಕ್ ಅನ್ನು ಹಚ್ಚಿಕೊಳ್ಳುವುದರಿಂದ ಡೆಡ್ ಸೆಲ್ಸ್, ಮೊಡವೆಗಳಂತಹ ಅನೇಕ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. 


ಇದನ್ನೂ ಓದಿ : ವೇಗವಾಗಿ ಕೂದಲು ಉದುರುತ್ತಿವೆಯೇ? ಈ ನೀರಿನಿಂದ ಕೂದಲು ತೊಳೆದರೆ ತಕ್ಷಣಕ್ಕೆ ನಿಂತುಹೋಗುತ್ತವೆ!


1. ಕೋಕೋ ಪೌಡರ್ ಮತ್ತು ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್ :
ಹೊಳೆಯುವ ತ್ವಚೆಗಾಗಿ ಮನೆಯಲ್ಲಿಯೇ ಫೇಸ್ ಪ್ಯಾಕ್ ತಯಾರಿಸಿಕೊಳ್ಳಬಹುದು. ಇದಕ್ಕಾಗಿ, ಒಂದು ಚಮಚ ಕೋಕೋ ಪೌಡರ್ ಮತ್ತು ಮುಲ್ತಾನಿ ಮಿಟ್ಟಿಯನ್ನು ತೆಗೆದುಕೊಂಡು ಮಿಶ್ರಣ ಮಾಡಿ. ನಂತರ ಅದಕ್ಕೆ 4 ರಿಂದ 5 ಹನಿ ರೋಸ್ ವಾಟರ್ ಸೇರಿಸಿ. ಈ ಪ್ಯಾಕ್ ಅನ್ನು ವಾರಕ್ಕೆ ಎರಡು ಬಾರಿ ಮುಖಕ್ಕೆ ಹಚ್ಚಿಕೊಳ್ಳಿ. ಇದು ನಿಮ್ಮ ಮುಖದ ಮೇಲಿನ  ಮೊಡವೆಗಳ ಸಮಸ್ಯೆಯನ್ನು ನಿವಾರಿಸುತ್ತದೆ. 


2. ಕೋಕೋ ಪೌಡರ್ ಮತ್ತು  ಚಕ್ಕೆ ಫೇಸ್ ಪ್ಯಾಕ್ : 
ಮೃದುವಾದ ಚರ್ಮ ಬೇಕಾದರೆ ಕೋಕೋ ಪೌಡರ್ ಮತ್ತು ಚಕ್ಕೆ ಬೆರೆಸಿ ಫೇಸ್ ಪ್ಯಾಕ್ ಅನ್ನು  ತಯಾರಿಸಿಕೊಳ್ಳಬಹುದು. ಈ ಪ್ಯಾಕ್‌ಗೆ ಸ್ವಲ್ಪ ಜೇನುತುಪ್ಪವನ್ನೂ ಸೇರಿಸಬಹುದು. ಇದು ನಿಮ್ಮ ಚರ್ಮಕ್ಕೆ ಮೃದುತ್ವವನ್ನು  ನೀಡುತ್ತದೆ. 


ಇದನ್ನೂ ಓದಿ : ಈ ಒಂದು ಸಣ್ಣ ಕಾಯಿ ಸಾಕು ಕೂದಲು ದಷ್ಟ ಪುಷ್ಟವಾಗಿ ಬೆಳೆಯುವಂತೆ ಮಾಡಲು


3. ಕೋಕೋ ಪೌಡರ್ ಮತ್ತು ಅಲೋವೆರಾ ಜೆಲ್ ನ ಫೇಸ್ ಪ್ಯಾಕ್ : 
ಸುಂದರ ತ್ವಚೆಗಾಗಿ ಮನೆಯಲ್ಲಿ ಒಂದು ಚಮಚ ಕೋಕೋ ಪೌಡರ್ ಮತ್ತು ಒಂದು ಚಮಚ ಅಲೋವೆರಾ ಜೆಲ್ ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ನಂತರ ನೀರಿನಿಂದ ಮುಖ ತೊಳೆಯಿರಿ. 


4. ಕೋಕೋ ಪೌಡರ್ ಮತ್ತು ಓಟ್ ಮೀಲ್ ನ ಫೇಸ್ ಪ್ಯಾಕ್ :
ಒಂದು ಟೀಚಮಚ ಕೋಕೋ ಪೌಡರ್ ನಲ್ಲಿ ಅರ್ಧ ಚಮಚ ಓಟ್ ಮೀಲ್ ನ್ನು ಮಿಶ್ರಣ ಮಾಡಿ. ನಂತರ ಸ್ವಲ್ಪ ಹಾಲಿನ ಕೆನೆ  ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ಮುಖದ ಮೇಲೆ 30 ನಿಮಿಷಗಳ ಕಾಲ ಬಿಟ್ಟು ನಂತರ ಮುಖವನ್ನು ತೊಳೆಯಿರಿ. ಕೆಲವೇ ದಿನಗಳಲ್ಲಿ ಮುಖದಲ್ಲಿ ಅದ್ಭುತವಾದ ಹೊಳಪು ಕಂಡುಬರುವುದು. 


ಇದನ್ನೂ ಓದಿ : ಮೂತ್ರ ಪಿಂಡಗಳನ್ನು ಸ್ವಚ್ಛಗೊಳಿಸಿ ಆರೋಗ್ಯಕರವಾಗಿರುತ್ತೆ ಈ ಸೂಪರ್ ಡ್ರಿಂಕ್!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ