ನೈಸರ್ಗಿಕ ಕಪ್ಪು ಕೂದಲಿಗೆ ಬೆಸ್ಟ್ ಆಯಿಲ್: ಅಸಮರ್ಪಕ ಜೀವನಶೈಲಿ ಮತ್ತು ಕಳಪೆ ಆಹಾರ ಪದ್ಧತಿಯಿಂದಾಗಿ ಜನರ ಕೂದಲು ವಯಸ್ಸಿಗೆ ಮುಂಚೆಯೇ ಬಿಳಿಯಾಗಲು ಪ್ರಾರಂಭಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಕೂದಲು ಬಿಳಿಯಾಗುವ ಸಮಸ್ಯೆಯಿಂದ ತೊಂದರೆಗೀಡಾಗಿದ್ದಾರೆ. ಈ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಕೃತಕ ಬಣ್ಣಗಳನ್ನು ಬಳಸುವ ಬದಲಿಗೆ ಕೆಲವು ಎಣ್ಣೆಗಳನ್ನು ಬಳಸುವುದರಿಂದ ನಿಮ್ಮ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು. 


COMMERCIAL BREAK
SCROLL TO CONTINUE READING

ಹೌದು, ದುಬಾರಿ ಬೆಲೆಯ ಕೃತಕ ಬಣ್ಣಗಳನ್ನು ಬಳಸುವುದಕ್ಕಿಂತ ಕೂದಲಿಗೆ ಎಣ್ಣೆಯನ್ನು ಹಚ್ಚುವುದರಿಂದ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು. ಅಂತಹ ಕೆಲವು ಎಣ್ಣೆಗಳ ಬಗ್ಗೆ ತಿಳಿಯೋಣ.  ಇವುಗಳನ್ನು ಬಳಸಿಕೊಂಡು ನೀವು ಬಿಳಿ ಕೂದಲನ್ನು ಸುಲಭವಾಗಿ ಹೋಗಲಾಡಿಸಬಹುದು.


ಬಿಳಿ ಕೂದಲಿನ ಸಮಸ್ಯೆಯಿಂದ ಮುಕ್ತಿ ಪಡೆಯಲು ಈ ಎಣ್ಣೆಗಳನ್ನು ಬಳಸಿ ನೋಡಿ:
ತೆಂಗಿನೆಣ್ಣೆ:

ಕೂದಲು ಕಪ್ಪಾಗಲು ತೆಂಗಿನೆಣ್ಣೆ ಬಳಸುವುದು ಬಹಳ ಮುಖ್ಯ. ಬಿಳಿ ಕೂದಲನ್ನು ಕಪ್ಪಾಗಿಸಲು, ನೀವು ಮಾಡಬೇಕಾಗಿರುವುದು ತೆಂಗಿನ ಎಣ್ಣೆಯಲ್ಲಿ ಸ್ವಲ್ಪ ಗೋರಂಟಿ ಎಲೆಗಳನ್ನು ಮಿಕ್ಸ್ ಮಾಡಿ ಸ್ವಲ್ಪ ಬಿಸಿ ಮಾಡಿ. ನಂತರ ಎಣ್ಣೆಯನ್ನು ಸ್ವಲ್ಪ ತಣ್ಣಗಾಗಲು ಬಿಡಿ, ಬಳಿಕ ಅದನ್ನು ಕೂದಲಿನ ಬುಡದಿಂದ ಕೂದಲಿನ ಕೆಳಭಾಗಕ್ಕೆ ಅನ್ವಯಿಸಿ. ಕನಿಷ್ಠ 4 ಗಂಟೆಗಳ ಕಾಲ ಅದನ್ನು ಬಿಡಿ. ನ್ನತರ ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ.


ಇದನ್ನೂ ಓದಿ- ಸ್ಟ್ರಾಂಗ್ ಕೂದಲಿಗೆ ಮಾನ್ಸೂನ್ ಹೇರ್ ಕೇರ್ ಟಿಪ್ಸ್


ಆಲಿವ್ ಆಯಿಲ್: 
ಕೂದಲು ಕಪ್ಪಾಗುವಲ್ಲಿ ಆಲಿವ್ ಎಣ್ಣೆ ಕೂಡ ಪ್ರಯೋಜನಕಾರಿಯಾಗಿದೆ. ಕಲೋಂಜಿಯನ್ನು ಆಲಿವ್ ಎಣ್ಣೆಯಲ್ಲಿ ಬೆರೆಸಿ ಕೂದಲಿಗೆ ಹಚ್ಚಿದರೆ ಕೂದಲು ಕಪ್ಪಾಗುತ್ತದೆ. ಇದನ್ನು ಅನ್ವಯಿಸಲು, ಆಲಿವ್ ಎಣ್ಣೆಯಲ್ಲಿ ಒಂದು ಸಣ್ಣ ಚಮಚ ಸೋಂಪು ಹಾಕಿ ಮತ್ತು ಅದನ್ನು ನೆತ್ತಿ ಮತ್ತು ಕೂದಲಿನ ಎಲ್ಲಾ ಭಾಗಗಳಿಗೆ ಹಚ್ಚಿ ಮತ್ತು ಕೆಲವು ನಿಮಿಷಗಳ ಕಾಲ ಮಸಾಜ್ ಮಾಡಿ, ನಂತರ 3 ಗಂಟೆಗಳ ನಂತರ ಕೂದಲನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ನಿಮ್ಮ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತದೆ.


ಇದನ್ನೂ ಓದಿ- ಮನೆಯಲ್ಲಿಯೇ ಇರುವ ಈ ವಸ್ತುಗಳಿಂದ ಬಟ್ಟೆಯ ಹಠಮಾರಿ ಕಲೆಗಳನ್ನು ಸುಲಭವಾಗಿ ತೆಗೆದುಹಾಕಬಹುದು


ಸಾಸಿವೆ ಎಣ್ಣೆ:
ಸಾಸಿವೆ ಎಣ್ಣೆಯನ್ನು ಕೂದಲಿನ ಎಲ್ಲಾ ಸಮಸ್ಯೆಗಳಿಗೆ ರಾಮಬಾಣವೆಂದು ಪರಿಗಣಿಸಲಾಗಿದೆ. ಸಾಸಿವೆ ಎಣ್ಣೆ ಕೂಡ ಬಿಳಿ ಕೂದಲು ಹೋಗಲಾಡಿಸಲು ತುಂಬಾ ಪ್ರಯೋಜನಕಾರಿ. ತೆಂಗಿನ ಎಣ್ಣೆಯಂತೆ, ನೀವು ಸಾಸಿವೆ ಎಣ್ಣೆಯಲ್ಲಿ ಗೋರಂಟಿ ಎಲೆಗಳನ್ನು ಬಿಸಿ ಮಾಡಿ ನಿಮ್ಮ ಕೂದಲಿಗೆ ಹಚ್ಚಬಹುದು. ಇದರಿಂದ ಕೂದಲು ಬೇಗ ಕಪ್ಪಾಗುತ್ತದೆ. ಈ ಎಣ್ಣೆಯನ್ನು ವಾರಕ್ಕೆ 3 ಬಾರಿ ಅನ್ವಯಿಸಿ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.