ಮನೆಯಲ್ಲಿಯೇ ಇರುವ ಈ ವಸ್ತುಗಳಿಂದ ಬಟ್ಟೆಯ ಹಠಮಾರಿ ಕಲೆಗಳನ್ನು ಸುಲಭವಾಗಿ ತೆಗೆದುಹಾಕಬಹುದು

How To Remove Stain: ಬಟ್ಟೆಗಳ ಇಂಥಹ ಹಠಮಾರಿ ಕಲೆಗಳನ್ನು ತೆಗೆದುಹಾಕುವ ಕೆಲವು ಅದ್ಭುತ ಟ್ರಿಕ್ ಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಿದ್ದೇವೆ.  ಈ ಟ್ರಿಕ್ ಗಳನ್ನು ಬಳಸಿದರೆ ಬಟ್ಟೆ ಹಾಳಾಗುವುದೂ ಇಲ್ಲ. ಬಟ್ಟೆಯ ಮೇಲಿನ ಕಲೆ ಉಳಿಯುವುದೂ ಇಲ್ಲ.   

Written by - Ranjitha R K | Last Updated : Aug 23, 2022, 09:07 AM IST
  • ಗಾಢ ಕಲೆಗಳನ್ನು ತೆಗೆದುಹಾಕುವುದು ಹೇಗೆ?
  • ಅತ್ಯಂತ ಮೊಂಡುತನದ ಕಲೆ ಕೂಡಾ ನಿಮಿಷಗಳಲ್ಲಿ ಮಾಯವಾಗುತ್ತದೆ
  • ಬಟ್ಟೆ ಹೊಸದರಂತೆಯೇ ಉಳಿಯುತ್ತದೆ
ಮನೆಯಲ್ಲಿಯೇ ಇರುವ ಈ ವಸ್ತುಗಳಿಂದ ಬಟ್ಟೆಯ ಹಠಮಾರಿ ಕಲೆಗಳನ್ನು  ಸುಲಭವಾಗಿ ತೆಗೆದುಹಾಕಬಹುದು  title=
How To Remove Stain (file photo)

How To Remove Stain: ತಿನ್ನುವಾಗ ಮತ್ತು ಕುಡಿಯುವಾಗ ಅಥವಾ ಇನ್ನಾವುದೋ ಕೆಲಸ ಮಾಡುವಾಗ ಕೆಲವೊಮ್ಮೆ ನಮ್ಮ ಬಟ್ಟೆಗಳಲ್ಲಿ ಕಲೆಗಳಾಗಿ ಬಿಡುತ್ತವೆ.  ಈ ಪೈಕಿ ಕೆಲವು ಕಲೆಗಳು ಸುಲಭವಾಗಿ ಹೋದರೆ ಇನ್ನು ಕೆಲವು ಎಷ್ಟು ಪ್ರಯತ್ನ ಪಟ್ಟರೂ ಶುಚಿಯಾಗುವುದೇ ಇಲ್ಲ. ಎಷ್ಟೇ ಒಗೆದರೂ ಪೂರ್ಣ ಪ್ರಮಾಣದಲ್ಲಿ ಕಲೆ ತೆಗೆದು ಹಾಕುವುದು ಸಾಧ್ಯವಾಗುವುದಿಲ್ಲ.  ಹಳೆಯ ಬಟ್ಟೆಯ ಜೊತೆ ಹೀಗಾದಾಗ ಅಷ್ಟೊಂದು ಬೇಸರವಾಗುವುದಿಲ್ಲ. ಆದರೆ ದುಬಾರಿ ವೆಚ್ಚ ಮಾಡಿ ತಂದಿರುವ ಹೊಸ ಬಟ್ಟೆಯ ಜೊತೆ ಹೀಗಾದಾಗ ಸಹಿಸಿಕೊಳ್ಳುವುದು ಸ್ವಲ್ಪ ಕಷ್ಟವಾಗುತ್ತದೆ. ಆದರೆ,  ಬಟ್ಟೆಗಳ ಇಂಥಹ ಹಠಮಾರಿ ಕಲೆಗಳನ್ನು ತೆಗೆದುಹಾಕುವ ಕೆಲವು ಅದ್ಭುತ ಟ್ರಿಕ್ ಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಿದ್ದೇವೆ.  ಈ ಟ್ರಿಕ್ ಗಳನ್ನು ಬಳಸಿದರೆ ಬಟ್ಟೆ ಹಾಳಾಗುವುದೂ ಇಲ್ಲ. ಬಟ್ಟೆಯ ಮೇಲಿನ ಕಲೆ ಉಳಿಯುವುದೂ ಇಲ್ಲ. 

ಗಾಢ ಕಲೆಗಳನ್ನು ತೆಗೆದುಹಾಕುವುದು ಹೇಗೆ? :
ಬಟ್ಟೆಗಳ ಮೇಲಿನ ಗಾಢ ಕಲೆಗಳನ್ನು ಕೆಲವು ಸುಲಭ ತಂತ್ರಗಳ ಸಹಾಯದಿಂದ ತೆಗೆದುಹಾಕಬಹುದು. ಬಟ್ಟೆಯ ಮೇಲಿನ ಮೊಂಡುತನದ ಕಲೆಗಳನ್ನು ತೆಗೆದುಹಾಕಲು ಅಡುಗೆಮನೆಯಲ್ಲಿ ಇರಿಸಲಾಗಿರುವ ನಿಂಬೆಯನ್ನು ಬಳಸಬಹುದು. ಇದರ ಆಮ್ಲೀಯ ಗುಣವು  ಬಟ್ಟೆಗಳ ಮೇಲಿನ ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ನಿಂಬೆ ಉತ್ತಮ ಕ್ಲೀನಿಂಗ್ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತದೆ. ಬಟ್ಟೆಯ ಮೇಲೆ ಸಾಂಬಾರ್ ಪಲ್ಯದ   ಕಲೆಗಳಾಗಿದ್ದರೆ, ಅದನ್ನು ನಿಂಬೆ ಸಹಾಯದಿಂದ ತೆಗೆದುಹಾಕಬಹುದು. ಇದಕ್ಕಾಗಿ ಕಲೆ ಇರುವ ಬಟ್ಟೆಗಳ ಮೇಲೆ ನಿಂಬೆ ರಸವನ್ನು ಹಚ್ಚಿ. ನಂತರ, ನಿಧಾನವಾಗಿ ಕಲೆ ಇರುವ ಜಾಗದಲ್ಲಿ ಬ್ರಷ್ ಮಾಡಿ. ಬಟ್ಟೆಯ ಮೇಲಿನ ಕಲೆಯನ್ನು ನಿಂಬೆ ಸುಲಭವಾಗಿ ತೆಗೆದು ಹಾಕುತ್ತದೆ. 

ಇದನ್ನೂ ಓದಿ : ಮೊಣಕೈ ಮೇಲಿನ ಕಪ್ಪು ಕಲೆಯನ್ನು ಸುಲಭವಾಗಿ ಹೋಗಲಾಡಿಸುತ್ತೆ ಈ ಮನೆಮದ್ದು

ಅತ್ಯಂತ ಮೊಂಡುತನದ ಕಲೆ ಕೂಡಾ ನಿಮಿಷಗಳಲ್ಲಿ ಮಾಯವಾಗುತ್ತದೆ : 
ನಿಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸುವ ಟೂತ್  ಪೇಸ್ಟ್ ಸಹಾಯದಿಂದ, ಬಟ್ಟೆಗಳ ಮೇಲಿನ ಕಲೆಗಳನ್ನು ಸಹ ತೆಗೆದುಹಾಕಬಹುದು. ಬಟ್ಟೆಯ ಮೇಲೆ ಯಾವುದೇ ರೀತಿಯ ಕಲೆಗಳಿದ್ದರೆ, ಆ ಕಲೆಗೆ ಟೂತ್  ಪೇಸ್ಟ್ ಹಚ್ಚಬಹುದು. ಹೀಗೆ ಕಲೆಗಳ ಮೇಲೆ ಟೂತ್  ಪೇಸ್ಟ್  ಹಾಕಿ 5 ನಿಮಿಷಗಳ ಕಾಲ ಅದನ್ನು ಹಾಗೆಯೇ ಬಿಡಿ. ನಂತರ, ಬ್ರಷ್ ಸಹಾಯದಿಂದ ಸ್ವಚ್ಛಗೊಳಿಸಿ. ಹೀಗೆ ಮಾಡುವುದರಿಂದ ಬಟ್ಟೆಯ ಮೇಲಿನ ಕಲೆಗಳು ಸುಲಭವಾಗಿ ನಿವಾರಣೆಯಾಗುತ್ತವೆ.

ಅಡಿಗೆ ಸೋಡಾದ ಟ್ರಿಕ್ : 
ಬಟ್ಟೆಯ ಮೇಲಿನ ಮೊಂಡುತನದ ಕಲೆಗಳನ್ನು ತೆಗೆದುಹಾಕಲು ಅಡಿಗೆ ಸೋಡಾವನ್ನು ಸಹ ಬಳಸಬಹುದು. ಬಟ್ಟೆಯ ಮೇಲಿನ ಮೊಂಡುತನದ ಕಲೆಗಳನ್ನು ತೆಗೆದುಹಾಕಬೇಕಾದರೆ,  2 ಚಮಚ ಅಡಿಗೆ ಸೋಡಾವನ್ನು 1 ಚಮಚ ನೀರಿನಲ್ಲಿ ಬೆರೆಸಿ ಮತ್ತು ಪೇಸ್ಟ್ ತಯಾರಿಸಿ. ಇದರ ನಂತರ, ಬಟ್ಟೆಯ ಕಲೆ ಇರುವ ಸ್ಥಳದಲ್ಲಿ ಅಡಿಗೆ ಸೋಡಾದ ಈ ಪೇಸ್ಟ್ ಅನ್ನು  ಹಚ್ಚಿ. ನಂತರ ಅದರ ಮೇಲೆ ಬ್ರಷ್ ಮಾಡಿ. ಹೀಗೆ ಮಾಡುವುದರಿಂದ ಕಲೆ ಸುಲಭವಾಗಿ  ಮಾಯವಾಗುತ್ತದೆ. 

ಇದನ್ನೂ ಓದಿ : Health Tips: ಮೊಡವೆಯಿಂದ ಮುಕ್ತಿ ಪಡೆಯಲು ಖಾಲಿ ಹೊಟ್ಟೆಯಲ್ಲಿ ಈ ಒಂದು ಎಲೆ ತಿನ್ನಿ

 

( ಸೂಚನೆ : ಮೇಲೆ ನೀಡಿರುವ ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.  ZEE NEWS ಇದನ್ನು ದೃಢೀಕರಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News