Vastu Tips : ಪೊರಕೆ ವಿಚಾರದಲ್ಲಿ ಈ 7 ತಪ್ಪು ಖಂಡಿತಾ ಮಾಡಬೇಡಿ..!
ಪೊರಕೆ ಖರೀದಿಗೂ ದಿನ ಇದೆ. ಮಂಗಳವಾರ ಅಥವಾ ಶನಿವಾರ ಪೊರಕೆ ಖರೀದಿಗೆ ಶುಭ ದಿನ ಎನ್ನಲಾಗುತ್ತದೆ. ಈ ದಿನ ಪೊರಕೆ ಖರೀದಿ ಮಾಡಿದರೆ ಮನೆಯ ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆಯಂತೆ. ಸಂಪತ್ತು ಸಮೃದ್ಧಿಯಾಗಿರುತ್ತದೆಯಂತೆ.
ಬೆಂಗಳೂರು : ಹಿಂದೂ ನಂಬಿಕೆಗಳ ಪ್ರಕಾರ ಪೊರಕೆಯಲ್ಲಿ (Broom) ಸ್ವಯಂ ಲಕ್ಷ್ಮಿ ನೆಲೆಸಿದ್ದಾಳೆ ಎನ್ನಲಾಗುತ್ತದೆ. ಲಕ್ಷ್ಮಿ ಸ್ವಯಂ ಸಂಪತ್ತಿನ ಸ್ವರೂಪ. ಹಾಗಾಗಿ, ಮನೆಯಲ್ಲಿ ಹಿರಿಯರಿದ್ದರೆ ಪೊರಕೆಯನ್ನು ಕಾಲಿಂದ ತುಳಿಯಲು ಅಥವಾ ಪೊರಕೆ ದಾಟಲು ಬಿಡುವುದಿಲ್ಲ. ಇದು ವಾಸ್ತು ವಿಚಾರ ಆಯಿತು. ಇನ್ನು ಮನೆಯನ್ನು ಸ್ವಚ್ಛಗೊಳಿಸಲು ಪೊರಕೆ ಬೇಕೇ ಬೇಕು. ಹುಲ್ಲು, ಫೈಬರ್, ಪ್ಲಾಸ್ಟಿಕ್ ಪೊರಕೆಗಳೂ ಈಗ ಮಾರುಕಟ್ಟೆಯಲ್ಲಿವೆ. ವಾಸ್ತು ವಿಚಾರದಲ್ಲಿ ಪೊರಕೆಗೆ ಹಲವು ಮಹತ್ವ ಇದೆ. ನೀವು ವಾಸ್ತು ವಿಚಾರ (Vastu) ನಂಬುವಿರಾದರೆ, ಪೊರಕೆ ವಿಚಾರದಲ್ಲಿ ಈ ತಪ್ಪುಗಳನ್ನು ಖಂಡಿತಾ ಮಾಡಬೇಡಿ. ಅದು ತಪ್ಪು ಯಾವುದು ? ಇಲ್ಲಿದೆ ನೋಡಿ.
1. ಪೊರಕೆ (Broom) ಹಳೆಯದಾದರೆ ಗುರುವಾರ ಮತ್ತು ಶುಕ್ರವಾರ (Friday) ಮನೆಯಿಂದ ಹೊರಕ್ಕೆ ಹಾಕಬೇಡಿ. ಗುರುವಾರ ಶ್ರೀಮನ್ನಾರಾಯಣ ಮತ್ತು ಶುಕ್ರವಾರ ಲಕ್ಷ್ಮಿ ದೇವಿಯ ದಿನವಾಗಿದೆ. ಈ ದಿನ ಮನೆಯಿಂದ ಪೊರಕೆ ಹೊರಗಿಟ್ಟರೆ ಲಕ್ಷ್ಮಿ (Godess Laxmi) ಮನೆಯಿಂದ ಹೊರಗೆ ಹೋಗುತ್ತಾಳೆ ಎನ್ನಲಾಗುತ್ತದೆ.
ಇದನ್ನೂ ಓದಿ : Amarnath Yatra 2021: ಜೂನ್ 28 ರಿಂದ ಅಮರನಾಥ್ ಯಾತ್ರೆ ಆರಂಭ, ಏಪ್ರಿಲ್ 1 ರಿಂದ ನೋಂದಣಿ
2. ಪೊರಕೆ ಖರೀದಿಗೂ ದಿನ ಇದೆ. ಮಂಗಳವಾರ ಅಥವಾ ಶನಿವಾರ (Saturday)ಪೊರಕೆ ಖರೀದಿಗೆ ಶುಭ ದಿನ ಎನ್ನಲಾಗುತ್ತದೆ. ಈ ದಿನ ಪೊರಕೆ ಖರೀದಿ ಮಾಡಿದರೆ ಮನೆಯ ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆಯಂತೆ. ಸಂಪತ್ತು ಸಮೃದ್ಧಿಯಾಗಿರುತ್ತದೆಯಂತೆ.
3. ವಾಸ್ತು (Vastu) ಪಂಡಿತರ ಪ್ರಕಾರ ಕೃಷ್ಣಪಕ್ಷದಲ್ಲೇ ಹೊಸ ಪೊರಕೆ ಖರೀದಿಸಬೇಕಂತೆ. ಶುಕ್ಲ ಪಕ್ಷದಲ್ಲಿ ಪೊರಕೆ ಖರೀದಿ ಸರಿಯಲ್ಲವಂತೆ.
4. ಪೊರಕೆ ಮನೆಯಲ್ಲಿ ಎಲ್ಲೆಂದರಲ್ಲಿ ಇಡಬಾರದು. ಮನೆಯಲ್ಲಿ ಯಾರ ದೃಷ್ಟಿಯೂ ಬೀಳದ ಜಾಗದಲ್ಲಿ ಪೊರಕೆ ಇಡಬೇಕು.
ಇದನ್ನೂ ಓದಿ : Rudraksha- ರುದ್ರಾಕ್ಷಿ ಉತ್ಪತ್ತಿಯಾದದ್ದು ಹೇಗೆ, ಅದನ್ನು ಧರಿಸುವುದರಿಂದ ಏನೆಲ್ಲಾ ಪ್ರಯೋಜನ ಗೊತ್ತಾ
5. ಯಾವತ್ತಿಗೂ ಕೂಡಾ ಹಾಸಿಗೆ ಕೆಳಗಡೆ ಪೊರಕೆ ಇಡುವ ಪರಿಪಾಠ ಇಟ್ಟುಕೊಳ್ಳಬೇಡಿ.
6. ಸೂರ್ಯಾಸ್ತದ (Sun set) ಬಳಿಕ ಯಾವತ್ತಿಗೂ ಪೊರಕೆ ಬಳಸಬಾರದು ಎಂದು ಹೇಳುತ್ತಾರೆ.
7. ಪೊರಕೆಯನ್ನು ಕಾಲಿಂದ ತುಳಿಯಬಾರದು, ಪೊರಕೆಯನ್ನು ದಾಟಬಾರದು. ಇವೆಲ್ಲಾ ನಿಷಿದ್ಧ.
ಇದನ್ನೂ ಓದಿ : Bad Luck Solution: ನಿಮ್ಮ ಅದೃಷ್ಟ ಕೈ ಕೊಟ್ಟಿದೆಯೇ ಅದಕ್ಕೆ ಇಲ್ಲಿದೆ 'ಜ್ಯೋತಿಷ್ಯ ಪರಿಹಾರ'..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.