Vastu Tips: ಅನೇಕ ಬಾರಿ ನಮಗೆ ನಮ್ಮ ಮನೆಯಲ್ಲಿ Negative Vibe ಅನುಭವ ಉಂಟಾಗುತ್ತದೆ. ಎಲ್ಲವೂ ಸರಿಯಾಗಿದ್ದರೂ ಕೂಡ ಕೆಲವು ನಕಾರಾತ್ಮಕ ಶಕ್ತಿಯು (Negative Energy) ಮನೆಯನ್ನು ಸುತ್ತುತ್ತಿವೆ ಎಂಬಂತೆ ಭಾಸವಾಗುತ್ತದೆ. ಇದು ಕೆಲವೊಮ್ಮೆ ನಮ್ಮ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮನೆ ಪ್ರವೇಶಿಸುವಾಗ ತಲೆ ಭಾರವಾದರೆ, ಸಿಟ್ಟು, ಉದ್ವೇಗ ಮನೆಗೆ ಬರಲಾರಂಭಿಸುತ್ತದೆ. ಮನೆಯಲ್ಲಿ ಮನಸ್ತಾಪದ ವಾತಾವರಣ ನಿರ್ಮಾಣಗೊಳ್ಳುತ್ತದೆ. ಅಪ್ಪ-ಮಗ, ಅತ್ತೆ, ಸೋದರ ಮಾವನ ನಡುವೆ ಘರ್ಷಣೆ ಹೆಚ್ಚಾಗುತ್ತದೆ.  ಹೀಗೆಲ್ಲ ನಡೆಯುತ್ತಿದ್ದರೆ ನೀವು ಯೋಚಿಸುತ್ತಿರುವುದು ಸರಿಯಾಗಿಯೇ ಇದೆ ಎಂದರ್ಥ. ನಿಮ್ಮ ಮೇಲೆ ಪರಿಣಾಮ ಬೀರುವ ಕೆಲವು ನಕಾರಾತ್ಮಕ ಅಂಶಗಳಿವೆ ಮತ್ತು ಅವುಗಳಿಗೆ ಪರಿಹಾರವೆಂದರೆ ಗುಲಾಬಿ ಪಟಕ. ಮಾರುಕಟ್ಟೆಯಲ್ಲಿ ಎರಡು ರೀತಿಯ ಪಟಕಗಳು ಸಿಗುತ್ತವೆ. ಒಂದು ಬಿಳಿ ಮತ್ತು ಇನ್ನೊಂದು ಗುಲಾಬಿ ಪಟಕ.  ಆದರೆ ಗುಲಾಬಿ ಪಟಕವನ್ನು (Pink Alum Vastu Tips) ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡಲು ಬಳಸಲಾಗುತ್ತದೆ. ಪಂಡಿತರು ಮತ್ತು ವಾಸ್ತು ತಜ್ಞರ ಪ್ರಕಾರ, ನೀವು ಗುಲಾಬಿ ಪಟಕವನ್ನು ಈ ರೀತಿಯಾಗಿ ಬಳಸಬಹುದು


COMMERCIAL BREAK
SCROLL TO CONTINUE READING

>> ನಿಮ್ಮ ಮಲಗುವ ಕೋಣೆಯಲ್ಲಿ ನಿಮಗೆ ಸರಿಯಾಗಿ ನಿದ್ದೆ ಬರುತ್ತಿಲ್ಲ, ನಿಮ್ಮ ಮನಸ್ಸಿನಲ್ಲಿ ವಿವಿಧ ಆಲೋಚನೆಗಳು ಬರುತ್ತಿವೆ, ಮನೆಯಲ್ಲಿ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ, ನಿಮ್ಮ ಹಾಸಿಗೆಯ ಅಂಚಿನಲ್ಲಿರುವ ಸ್ಟೂಲ್ ಮೇಲೆ ಒಂದು ಅಥವಾ 2 ಕೆಜಿ ಗುಲಾಬಿ ಪಟಕವನ್ನು ಇರಿಸಿ.


>> ನೀವು ಮನೆಗೆ ಪ್ರವೇಶಿಸಿದ ತಕ್ಷಣ, ನೀವು ಕೋಪಗೊಂಡರೆ ಅಥವಾ ನಿಮ್ಮ ಮನಸ್ಸು ಅಸಮಾಧಾನಗೊಂಡರೆ, ಮನೆಯ ಪ್ರವೇಶ ದ್ವಾರದ ಹಿಂದಿನ ಸ್ಟೂಲ್ ಮೇಲೆ ದೊಡ್ಡ ಗುಲಾಬಿ ಬಣ್ಣದ ಪಟಕ ಇರಿಸಿ.


>> ಮನೆಯ ಎಲ್ಲಾ ಸದಸ್ಯರು ಆರೋಗ್ಯದಿಂದ ಇರಬೇಕು, ಉತ್ತಮ ವಾತವರಣದಲ್ಲಿ ಮಾತುಕತೆ ನಡೆಯಬೇಕು ಎಂದರೆ, ಲಿವಿಂಗ್ ರೂಮ್ ಮತ್ತು ಡ್ರಾಯಿಂಗ್ ರೂಮ್‌ನಲ್ಲಿ ಗುಲಾಬಿ ಪಟಕವನ್ನು ಇರಿಸಿ.


>> ಅಧ್ಯಯನ ಮಾಡುವಾಗ ಮಗುವಿನ ಮನಸ್ಸು ಚಂಚಲ ಅಥವಾ ಅಸ್ಥಿರವಾಗಿದ್ದರೆ, ಸೋಮಾರಿತನದ ಪ್ರವೃತ್ತಿ ಮಗುವಿನಲ್ಲಿ ಹೆಚ್ಚಾಗಿದ್ದರೆ, ಮಗುವಿನ ಮಲಗುವ ಕೋಣೆ ಅಥವಾ ಅಧ್ಯಯನ ಕೊಠಡಿಯಲ್ಲಿ ಗಾಜಿನ ತಟ್ಟೆಯಲ್ಲಿ ಗುಲಾಬಿ ಪಟಕ ಇರಿಸಿ ಇರಿಸಿ.


ಇದನ್ನೂ ಓದಿ-Mars Transit 2022 : ಈ 4 ರಾಶಿಯವರ ಭವಿಷ್ಯ ಬಹುಬೇಗ ಬದಲಾಗಲಿದೆ! ಮಂಗಳನ ಕೃಪೆಯಿಂದ ಭಾರೀ ಧನ ಲಾಭ


>> ಒಂದೊಮ್ಮೆ ನೀವು ಮನೆಯಲ್ಲಿ ಗುಲಾಬಿ ಪಟಕವನ್ನು ಇರಿಸಿದರೆ, ಐದು ಅಥವಾ ಆರು ತಿಂಗಳಿಗೊಮ್ಮೆ ಅದನ್ನು ನೀವು ಬದಲಾಯಿಸುತ್ತಲೇ ಇರಬೇಕು. ಹಳೆ ಪಟಕವನ್ನು ಡಸ್ಟ್ ಬಿನ್ ಗೆ ಹಾಕಿ.


ಇದನ್ನೂ ಓದಿ-ಪ್ರೀತಿಯ ವಿಷಯದಲ್ಲಿ ಮಿತಿ ಮೀರಿ ವರ್ತಿಸುತ್ತಾರೆ ಈ 4 ರಾಶಿಯವರು, ಮದುವೆಯ ವಿಷಯದಲ್ಲಿಯೂ ಇಡುತ್ತಾರೆ ಈ ಹೆಜ್ಜೆ


>> ನಿಮ್ಮ ಮನೆ ಮೇಲೆ ಕೆಟ್ಟ ದೃಷ್ಟಿ ಬಿದ್ದ ಅಥವಾ ಯಾವುದೇ ಒಂದು ನಕಾರಾತ್ಮಕ ಶಕ್ತಿಯ ಪ್ರಭಾವ ಇರುವುದು ಆಕಸ್ಮಿಕವಾಗಿ ನಿಮ್ಮ ಗಮನಕ್ಕೆ ಬಂದರೆ, ನೀವು ನಿಮ್ಮ ಡ್ರಾಯಿಂಗ್ ರೂಮ್ ನ ಗೇಟ್ ಬಳಿ ಹಾಗೂ ಮನೆಯ ಎಲ್ಲಾ ಕೋಣೆಗಳಲ್ಲಿ ಒಂದೊಂದು ತುಣುಕು ಗುಲಾಬಿ ಪಟಕವನ್ನಿಡಿ.


ಇದನ್ನೂ ಓದಿ-ಜೀವನದಲ್ಲಿ ಅದೃಷ್ಟ ಎದುರಾಗುತ್ತಿದೆ ಎನ್ನುವುದನ್ನು ತೋರಿಸುತ್ತದೆ ಈ ಶುಭ ಸಂಕೇತಗಳು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.