ಜೀವನದಲ್ಲಿ ಅದೃಷ್ಟ ಎದುರಾಗುತ್ತಿದೆ ಎನ್ನುವುದನ್ನು ತೋರಿಸುತ್ತದೆ ಈ ಶುಭ ಸಂಕೇತಗಳು

 ಜ್ಯೋತಿಷ್ಯ ಮತ್ತು ಶಕುನದ ಪ್ರಕಾರ, ಒಳ್ಳೆಯ ಸಮಯ ಬಂದಾಗ, ಅದರ ಚಿಹ್ನೆಗಳು ಮುಂಚಿತವಾಗಿ ಸಿಗುವುದಕ್ಕೆ ಪ್ರಾರಂಭಿಸುತ್ತವೆ.  

Written by - Zee Kannada News Desk | Last Updated : Feb 14, 2022, 12:54 PM IST
  • ಈ ಸಂಕೇತಗಳು ತುಂಬಾ ಒಳ್ಳೆಯದು
  • ಸುವರ್ಣ ದಿನಗಳು ಪ್ರಾರಂಭವಾಗುತ್ತವೆ ಎನ್ನುವುದನ್ನು ಸೂಚಿಸುತ್ತವೆ
  • ಮನೆ ಮುಂದೆ ಕಾಣಿಸಿಕೊಂಡರೆ ಈ ಪ್ರಾ ಣಿ, ಪಕ್ಷಿ ಭಾರೀ ಅದೃಷ್ಟ
ಜೀವನದಲ್ಲಿ ಅದೃಷ್ಟ ಎದುರಾಗುತ್ತಿದೆ ಎನ್ನುವುದನ್ನು ತೋರಿಸುತ್ತದೆ ಈ ಶುಭ ಸಂಕೇತಗಳು  title=
ಈ ಸಂಕೇತಗಳು ತುಂಬಾ ಒಳ್ಳೆಯದು (file photo)

ನವದೆಹಲಿ : ಜೀವನ ಅಂದ ಮೇಲೆ ಒಳ್ಳೆಯದು (Good time) , ಕೆಟ್ಟದು ಎರಡೂ (Bad time) ಇರುತ್ತದೆ. ಹಾಗಾಗಿ ಜೀವನದಲ್ಲಿ ಏನೇ ಎದುರಾದರೂ ಸಮರ್ಥವಾಗಿ ಎದುರಿಸಲು ಸಿದ್ದರಿರಬೇಕು. ಆದರೆ ಪ್ರತಿಯೊಬ್ಬ ವ್ಯಕ್ತಿಯು ಕೆಟ್ಟ ಸಮಯವನ್ನು ತಪ್ಪಿಸಲು ನೋಡುತ್ತಿರುತ್ತಾನೆ. ಆದರೆ ಕೆಟ್ಟ ಸಮಯದ ನಂತರ ಒಳ್ಳೆಯ ಮತ್ತು ಸಂತೋಷದ ಸಮಯವೂ ಬರುತ್ತದೆ ಎನ್ನುವುದು ನೆನಪಿರಬೇಕು. ಜ್ಯೋತಿಷ್ಯ (Astrology) ಮತ್ತು ಶಕುನದ ಪ್ರಕಾರ, ಒಳ್ಳೆಯ ಸಮಯ ಬಂದಾಗ, ಅದರ ಚಿಹ್ನೆಗಳು ಮುಂಚಿತವಾಗಿ ಸಿಗುವುದಕ್ಕೆ ಪ್ರಾರಂಭಿಸುತ್ತವೆ.   

ಇವು ಒಳ್ಳೆಯ ದಿನಗಳ ಸಂಕೇತಗಳು :
ತುಳಸಿ ಗಾಢವಾಗಿ ಬೆಳೆದರೆ : ಮನೆಯಲ್ಲಿ ತುಳಸಿ ಗಿಡವು (Tulsi plant) ಇದ್ದಕ್ಕಿದ್ದಂತೆ ಗಾಢವಾಗಿ ಬೆಳೆದರೆ,  ನಿಮ್ಮ ಒಳ್ಳೆಯ ದಿನಗಳು ಪ್ರಾರಂಭವಾಗಲಿವೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.  

ಇದನ್ನೂ ಓದಿ : Surya Rashi Parivartan: ಸೂರ್ಯ ರಾಶಿ ಪರಿವರ್ತನೆ, ಮುಂದಿನ 1 ತಿಂಗಳು ಈ ರಾಶಿಯವರಿಗೆ ವರದಾನ!

ಗುಬ್ಬಚ್ಚಿಯ ಚಿಲಿಪಿಲಿ : ನಿಮ್ಮ ಮನೆ, ಅಂಗಳ ಅಥವಾ ಬಾಲ್ಕನಿಯಲ್ಲಿ ಗುಬ್ಬಚ್ಚಿಯು ಇದ್ದಕ್ಕಿದ್ದಂತೆ ಬಂದರೆ ಅಥವಾ ಅದರ ಚಿಲಿಪಿಲಿಯನ್ನು ಕೇಳಿದರೆ, ತಕ್ಷಣ ಅದಕ್ಕೆ ನೀರು ಧಾನ್ಯ ನೀಡಿ. ಯಾಕೆಂದರೆ ಈ ಗುಬ್ಬಚ್ಚಿಗಳು (Sparrow) ನಿಮ್ಮ ಮನೆಗೆ ಆಗಮಿಸಲಿರುವ ಸಂತೋಷದ ಸಂಕೇತವಾಗಿರುತ್ತದೆ.  

ಎಕ್ಕದ ಗಿಡ : ಏಕಾಏಕಿ ಮನೆಯ ಮುಂದೆ ಅಥವಾ ಒಳಗೆ ಎಕ್ಕದ ಗಿಡ ಬೆಳೆದರೆ ತುಂಬಾ ಶುಭವಾಗಿರುತ್ತದೆ. ಇದು ನಿಮ್ಮ ಜೀವನದಲ್ಲಿ ಬಹಳಷ್ಟು ಹಣ ಮತ್ತು ಸಮೃದ್ಧಿಯನ್ನು ಪಡೆಯುವ ಪೂರ್ವಸೂಚಕವಾಗಿರುತ್ತದೆ. 

ಹಸು : ಮನೆಯ ಮುಂದೆ ಹಸು (Cow) ಸಗಣಿ ಹಾಕಿದರೆ ಅಥವಾ ನಡೆದಾಡುವಾಗ ಹಠಾತ್ತನೆ ನಿಂತರೆ,  ಖಂಡಿತವಾಗಿಯೂ ಅದಕ್ಕೆ ತಿಂಡಿ ನೀಡಿ.  ಈ ಚಿಹ್ನೆಯು ತುಂಬಾ ಮಂಗಳಕರವಾಗಿರುತ್ತದೆ.  ಇದೂ ಕೂಡ ಹಣ ಪಡೆಯುವ ಸಂಕೇತ. 

ಇದನ್ನೂ ಓದಿ : Weekly Taroit Rashifal: ಈ ವಾರ ಈ ರಾಶಿಯವರ ಪ್ರೇಮ ಜೀವನ ಮಧುರವಾಗಿರಲಿದೆ!

ಮನೆಗೆ ಬಿಳಿ ಪಾರಿವಾಳ : ನಿಮ್ಮ ಮನೆಗೆ ಬಿಳಿ ಪಾರಿವಾಳ ಬಂದು ಕುಳಿತರೆ, ಕೆಟ್ಟ ಸಮಯ ಮುಗಿದಿದೆ ಮತ್ತು ಈಗ ಸುವರ್ಣ ದಿನಗಳು ಪ್ರಾರಂಭವಾಗಲಿವೆ ಎಂದರ್ಥ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News