ನವದೆಹಲಿ : ಸೌಕರ್ಯ ಮತ್ತು ಸಂಪತ್ತಿನ ಅಂಶವಾಗಿರುವ ಶುಕ್ರ ಗ್ರಹವು ವಿರುದ್ಧ ದಿಕ್ಕಿನಲ್ಲಿ ಚಲಿಸಲಿದೆ . ಶುಕ್ರನ ಈ ಹಿಮ್ಮುಖ ಚಲನೆ (Venus Retrograde) ಮಕರ ರಾಶಿಯಲ್ಲಿ ಸಂಭವಿಸುತ್ತದೆ. ಐಶ್ವರ್ಯದ ಅಂಶವಾದ ಶುಕ್ರ ಗ್ರಹವು ಮುಂಬರುವ ಡಿಸೆಂಬರ್ 19 ರಿಂದ ಶುಕ್ರನ ಹಿಮ್ಮುಖ ಚಲನೆ ಆರಂಭವಾಗಲಿದೆ. ಅಲ್ಲಿಂದ ಡಿಸೆಂಬರ್ 30 ರವರೆಗೆ ಹಿಮ್ಮುಖ ಚಲನೆಯಲ್ಲಿಯೇ ಇರಲಿದ್ದಾನೆ. ಹಿಮ್ಮುಖ ಚಲನೆ ಮೂಲಕವೇ ಡಿಸೆಂಬರ್ 30 ರಂದು ಧನು ರಾಶಿಯನ್ನು (Sagitarius) ಪ್ರವೇಶಿಸಲಿದ್ದಾನೆ ಶುಕ್ರ. ಶುಕ್ರನ ಈ ಹಿಮ್ಮುಖ ಚಲನೆ ಮಕರ ರಾಶಿ ಸೇರಿದಂತೆ ಎಲ್ಲಾ ರಾಶಿಚಕ್ರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. 


COMMERCIAL BREAK
SCROLL TO CONTINUE READING

ಮೇಷ (Aries) : ಶುಕ್ರನ ಹಿಮ್ಮುಖ ಚಲನೆ, ಪಾಲುದಾರಿಕೆ ವ್ಯವಹಾರ ಲಾಭದಾಯಕವಾಗಿರುತ್ತದೆ. ಜೀವನ ಸಂಗಾತಿಯ ಕಡೆಯಿಂದ ಹಣಕಾಸಿನ ಲಾಭವಾಗಲಿದೆ. ಇದಲ್ಲದೇ ಕಾರ್ಯಕ್ಷೇತ್ರದಲ್ಲೂ ಪ್ರಗತಿಗೆ ಅವಕಾಶವಿರುತ್ತದೆ.


 ಇದನ್ನೂ ಓದಿ : Money Tips: 5 ರೂಪಾಯಿ ನಾಣ್ಯದಿಂದ ಕೋಟ್ಯಾಧಿಪತಿ ಆಗಲು ಸಿಂಪಲ್ ಟ್ರಿಕ್ಸ್


ಸಿಂಹ (Leo) : ಶುಕ್ರನ (Venus) ಹಿಮ್ಮುಖ ಚಲನೆಯು ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ನೀವು ಹೊಸ ಕೆಲಸದ ಉಡುಗೊರೆಯನ್ನು ಪಡೆಯಬಹುದು. ಲವ್ ಲೈಫ್ (Love life) ಅಥವಾ ವೈವಾಹಿಕ ಜೀವನವೂ ಸುಖಮಯವಾಗಿರುತ್ತದೆ. ಕ್ಷೇತ್ರದಲ್ಲಿ ಪ್ರಗತಿ ಸಾಧಿಸಬಹುದು.  


ಕನ್ಯಾ (Vigro) : ಶುಕ್ರ ಹಿಮ್ಮುಖ ಚಲನೆಯ ಸಮಯದಲ್ಲಿ ಮನೆ ಅಥವಾ ಕಾರು ಖರೀದಿಸಬಹುದು. ಇದರೊಂದಿಗೆ, ಕೆಲವು ಒಳ್ಳೆಯ ಸುದ್ದಿ ಇರುತ್ತದೆ. ಕೆಲಸದಲ್ಲಿ ಪ್ರಗತಿ ಕಂಡುಬರಲಿದೆ. ಅದೃಷ್ಟ ಸಂಪೂರ್ಣವಾಗಿ ಬೆಂಬಲಿಸಲಿದೆ.    


ತುಲಾ (libra) : ಶುಕ್ರನ ಹಿಮ್ಮುಖ ಚಲನೆ ಲಾಭದಾಯಕವಾಗಿ ಪರಿಣಮಿಸಲಿದೆ. ಸಹೋದರ ಸಹೋದರಿಯರಿಂದ ಪ್ರೀತಿ ಮತ್ತು ಆರ್ಥಿಕ ಲಾಭ ಇರುತ್ತದೆ. ಧಾರ್ಮಿಕ ಕಾರ್ಯಗಳತ್ತ ಒಲವು ಹೆಚ್ಚಾಗುತ್ತದೆ. ಆದರೂ ಆರೋಗ್ಯದ ಬಗ್ಗೆ ಎಚ್ಕರಿಕೆ ಇರಲಿ.


ಇದನ್ನೂ ಓದಿ : ಜೀವನಪೂರ್ತಿ ಧನಿಕರೇ ಆಗಿರುತ್ತಾರೆ ಈ ಮೂರು ರಾಶಿಯವರು, ಸದಾ ಇರಲಿದೆ ಶನಿ ಮಹಾತ್ಮನ ಕೃಪೆ


ಧನು ರಾಶಿ (Sagitarius) : ಶುಕ್ರ ಹಿಮ್ಮುಖ ಚಲನೆ ಆರೋಗ್ಯವನ್ನು (Health problems) ಹದಗೆಡಿಸಬಹುದು. ಆದರೂ ಆರ್ಥಿಕ ಲಾಭ ಹೆಚ್ಚಾಗಲಿದೆ. ವ್ಯವಹಾರದಲ್ಲಿ ಆರ್ಥಿಕ ಲಾಭದ  ಅವಕಾಶಗಲು ಹೆಚ್ಚಿವೆ. ತಂದೆಯ ಆಸ್ತಿಯಿಂದ ಲಾಭವಾಗಲಿದೆ.   


ಕುಂಭ: ಪ್ರೇಮಕ್ಕೆ ಬರುವ ಅಡೆತಡೆಗಳು ನಿವಾರಣೆಯಾಗುತ್ತವೆ. ಸಂಗಾತಿಯೊಂದಿಗೆ ಹೆಚ್ಚು ಮೋಜು ಮಾಡುವಿರಿ.  ಸಮಾಜದಲ್ಲಿ ಗೌರವ ಸಿಗಲಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.