Money Tips: 5 ರೂಪಾಯಿ ನಾಣ್ಯದಿಂದ ಕೋಟ್ಯಾಧಿಪತಿ ಆಗಲು ಸಿಂಪಲ್ ಟ್ರಿಕ್ಸ್

Money Tips:  ಪ್ರತಿಯೊಬ್ಬರಿಗೂ ತಾವೂ ಸಿರಿವಂತರಾಗಿರಬೇಕು. ಜೀವನದಲ್ಲಿ ಯಾವುದಕ್ಕೂ ಕೊರತೆ ಇಲ್ಲದಂತೆ ಬದುಕಬೇಕು ಎಂಬ ಆಸೆ ಇದ್ದೇ ಇರುತ್ತದೆ. 

Written by - Zee Kannada News Desk | Last Updated : Dec 17, 2021, 11:13 AM IST
  • ಈ ತಂತ್ರಗಳು ನಿಮ್ಮನ್ನು ಶ್ರೀಮಂತರನ್ನಾಗಿಸುತ್ತದೆ

    5 ರೂಪಾಯಿಯ ನಾಣ್ಯದಿಂದ ಈ ತಂತ್ರಗಳನ್ನು ಮಾಡಬಹುದು
  • ಕೆಲವೇ ದಿನಗಳಲ್ಲಿ ವ್ಯತ್ಯಾಸ ಕಾಣಲಿದೆ
Money Tips: 5 ರೂಪಾಯಿ ನಾಣ್ಯದಿಂದ ಕೋಟ್ಯಾಧಿಪತಿ ಆಗಲು ಸಿಂಪಲ್ ಟ್ರಿಕ್ಸ್ title=
Money Tips

Money Tips: ಮಿಲಿಯನೇರ್ ಆಗಬೇಕೆಂಬುದು ಬಹುತೇಕ ಜನರ ಕನಸು. ಇದಕ್ಕಾಗಿ ಜನರು ಹಲವು ವಿಧಾನಗಳನ್ನು ಕೂಡ ಅಳವಡಿಸಿಕೊಳ್ಳುತ್ತಾರೆ. ಹಣ ಸಂಪಾದಿಸಲು ಕೆಲವರು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಅದೇ ಸಮಯದಲ್ಲಿ, ಕೆಲವರಿಗೆ ಅದೃಷ್ಟವೂ ಸಹ ಅವರ ಕೈ ಹಿಡಿಯುತ್ತದೆ. ಅದೇ ರೀತಿ ಕೆಲವರು ದೇವರ ಮೇಲೆ ಭಾರ ಹಾಕಿ ದೇವರು ಕಣ್ಬಿಟ್ಟರೆ ಸಾಕು ಚಿಟಿಕೆಯಲ್ಲಿ ಎಲ್ಲವೂ ಬದಲಾಗುತ್ತದೆ ಎಂದು ಹೇಳುವುದನ್ನು ಕೇಳಿರಬಹುದು. ಇನ್ನೂ ಕೆಲವರು ಕೋಟ್ಯಾಧಿಪತಿ ಆಗಲು ಅಥವಾ ಸಿರಿವಂತರಾಗಲು ಕೆಲವು ತಂತ್ರಗಳನ್ನು ಅನುಸರಿಸುವುದೂ ಉಂಟು. 

ಇಂದು ನಾವು ಮಿಲಿಯನೇರ್ ಆಗಲು ಅನುಸರಿಸುವ ಕೆಲವು ತಂತ್ರಗಳ  ಬಗ್ಗೆ ಮಾಹಿತಿ ನೀಡಲಿದ್ದೇವೆ. ವಿಸ್ಮಯಕಾರಿ ವಿಷಯವೆಂದರೆ ಈ ಟ್ರಿಕ್ಸ್ ತುಂಬಾ ಸುಲಭ ಮತ್ತು ಕೇವಲ 5 ರೂಪಾಯಿಗಳಲ್ಲಿ (5 Rupees) ಕೋಟ್ಯಾಧಿಪತಿ ಆಗಬಹುದು. ಈ ತಂತ್ರಗಳನ್ನು ಅನುಸರಿಸುವ ವ್ಯಕ್ತಿಗೆ ಎಂದಿಗೂ ಹಣದ ಕೊರತೆ ಎದುರಾಗುವುದಿಲ್ಲ. ಬದಲಾಗಿ, ಸದಾ ಅವರ ಬಳಿ ಹಣ ತುಂಬಿರುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ-  Home Vastu Tips : ನಿಮ್ಮ ಮನೆಯಲ್ಲಿಯೂ ಈ ತಪ್ಪುಗಳಾಗುತ್ತಿದ್ದರೆ ತಕ್ಷಣ ಸರಿಪಡಿಸಿಕೊಳ್ಳಿ, ಇಲ್ಲವಾದರೆ ನಿಲ್ಲುವುದೇ ಇಲ್ಲ ಆರ್ಥಿಕ ಸಂಕಷ್ಟ

ಜೀವನದ ದಿಕ್ಕನ್ನೇ ಬದಲಾಯಿಸುವ ತಂತ್ರಗಳಿವು:
ಶ್ರೀಮಂತರಾಗಲು, 5 ರೂಪಾಯಿ ನಾಣ್ಯದ (5 Rupees Coin) ಮೇಲೆ ನಿಮ್ಮ ಹೆಸರಿನ ಮೊದಲ ಅಕ್ಷರವನ್ನು ಸಿಂಧೂರದೊಂದಿಗೆ ಬರೆಯಿರಿ. ಇದರ ನಂತರ, ಹೆಸರನ್ನು ಬರೆದ ಭಾಗವನ್ನು ಮೇಲಕ್ಕೆ ಇರಿಸಿ, ರಾತ್ರಿಯಿಡೀ ಛಾವಣಿಯ ಮೇಲೆ ನೀರಿನ ತೊಟ್ಟಿಯ ಮೇಲೆ ಇರಿಸಿ. ನೀರಿನ ತೊಟ್ಟಿ ಇಲ್ಲದಿದ್ದರೆ ಅದನ್ನು ಛಾವಣಿಯ ಮೇಲೂ ಇಡಬಹುದು. ಇದನ್ನು ಮಾಡಿದ ನಂತರ, ನಾಣ್ಯವನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಮತ್ತು ಮರುದಿನ ಲಕ್ಷ್ಮಿ ದೇವಿಯನ್ನು ಆವಾಹಿಸುವಾಗ ಅದನ್ನು ನಿಮ್ಮ ಪರ್ಸ್‌ನಲ್ಲಿ ಇರಿಸಿ. ಈ ನಾಣ್ಯವು ಎಂದಿಗೂ ಹಣದ ಕೊರತೆಯಾಗಲು ಬಿಡುವುದಿಲ್ಲ ಎಂಬ ನಂಬಿಕೆ ಇದೆ.

ಬಡತನದಿಂದ ಬೆಸೆತ್ತಿದ್ದರೆ ಅಥವಾ ಸಾಲದ ಹೊರೆಯಲ್ಲಿದ್ದರೆ ಅಂತಹ ಪರಿಸ್ಥಿತಿಯಲ್ಲಿ, 5 ರೂಪಾಯಿ ನಾಣ್ಯದ ಮತ್ತೊಂದು ಟ್ರಿಕ್ ತುಂಬಾ ಪರಿಣಾಮಕಾರಿ ಫಲಿತಾಂಶಗಳನ್ನು ನೀಡುತ್ತದೆ. ಇದಕ್ಕಾಗಿ ಪೂಜಾ ಸ್ಥಳದಲ್ಲಿ ಅಕ್ಕಿ ಅಥವಾ ಜೋಳ ತುಂಬಿದ ಕಲಶವನ್ನು ಸ್ಥಾಪಿಸಿ. ಹಾಗೆಯೇ ಕಲಶದಲ್ಲಿ 5 ರೂಪಾಯಿಯ ನಾಣ್ಯವನ್ನು ಹಾಕಿ. ಪ್ರತಿದಿನವೂ ಈ ಕಲಶವನ್ನು ಪೂಜಿಸಿ. ಕೆಲವೇ ದಿನಗಳಲ್ಲಿ, ಹಣಕಾಸಿನ ಪರಿಸ್ಥಿತಿಯಲ್ಲಿನ ವ್ಯತ್ಯಾಸವು ಸ್ಪಷ್ಟವಾಗಿ ಗೋಚರಿಸುತ್ತದೆ. 

ಇದನ್ನೂ ಓದಿ- Gemology : ಈ ರತ್ನ ಧರಿಸಿದರೆ 30 ದಿನದಲ್ಲಿ ಹಣದ ಸುರಿಮಳೆ! ಇದರಿಂದ ಈ ರಾಶಿಯವರಿಗೆ ಅದೃಷ್ಟ

ನೀವು ಎಷ್ಟೇ ಕಷ್ಟ ಪಟ್ಟು ದುಡಿದು ಹಣ ಸಂಪಾದಿಸಿದರೂ ಹಣ ಕೈಯಲ್ಲಿ ನಿಲ್ಲದಿದ್ದರೆ, ಈ ಪರಿಹಾರವು ನಿಮಗೆ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ. ಇದಕ್ಕಾಗಿ ಶುಕ್ರವಾರ ರಾತ್ರಿ ಪೂಜಾ ಸ್ಥಳದಲ್ಲಿ ಕಲಶ ಸ್ಥಾಪಿಸಿ. ಕಲಶದಲ್ಲಿ 5 ರೂಪಾಯಿಯ ನಾಣ್ಯವನ್ನು ಅದರ ಮೇಲೆ ಕುಂಕುಮದಿಂದ ಸ್ವಸ್ತಿಕ ಚಿಹ್ನೆಯನ್ನು ಮಾಡಿ  ಇರಿಸಿ. ಆ ನಂತರ ಆ ಕಲಶಕ್ಕೆ ನಿತ್ಯ ಪೂಜೆ ಮಾಡಿ. ಈ ರೀತಿ ಮಾಡುವುದರಿಂದ ನಿಮ್ಮ ಕೈಯಲ್ಲಿ ಹಣ ಉಳಿಯುತ್ತದೆ ಎಂದು ಹೇಳಲಾಗುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News