Gemology In Kannada: ಜ್ಯೋತಿಷ್ಯ ಶಾಸ್ತ್ರದ ಶಾಖೆಯಾಗಿರುವ ರತ್ನ ಶಾಸ್ತ್ರದಲ್ಲಿ ಪ್ರತಿಯೊಂದು ಗ್ರಹಕ್ಕೆ ಸಂಬಂಧಿಸಿದ ವಿವಿಧ ರತ್ನಗಳ ಕುರಿತು ಉಲ್ಲೇಖಿಸಲಾಗಿದೆ. ಈ ರತ್ನಗಳನ್ನು ಧರಿಸುವುದರಿಂದ ಜಾತಕದಲ್ಲಿನ ಗ್ರಹಗಳ ಬಲ ಹೆಚ್ಚಾಗುತ್ತದೆ ಮತ್ತು ಶುಭ ಫಲಿತಾಂಶಗಳು ಪ್ರಾಪ್ತಿಯಾಗುತ್ತವೆ ಎನ್ನಲಾಗುತ್ತದೆ. ಈ ರತ್ನಗಳು ಬಹಳ ಪರಿಣಾಮಕಾರಿಯಾಗಿವೆ. ಆದ್ದರಿಂದ, ಜಾತಕದಲ್ಲಿ ಗ್ರಹಗಳ ಸ್ಥಾನವನ್ನು ನೋಡಿ, ಒಬ್ಬರು ಈ ರತ್ನಗಳನ್ನು ಧರಿಸಬೇಕು, ಇದರಿಂದ ಜೀವನದಲ್ಲಿ ತ್ವರಿತ ಪ್ರಗತಿ, ಹಣ, ಸಂತೋಷ ಪ್ರಾಪ್ತಿಯಾಗುತ್ತದೆ. ಇಂದು ನಾವು ನಿಮಗೆ 2 ರಾಶಿಗಳ ಜನರು ಧರಿಸಬಹುದಾದ ಒಂದೇ ರತ್ನದ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ, ಈ ರಾಶಿಗಳು ಶನಿದೇವನಿಂದ ಪ್ರಭಾವಿತವಾಗಿವೆ ಮತ್ತು ಈ ಜನರು ನೀಲಮಣಿ ರತ್ನವನ್ನು ಧರಿಸುವುದು ತುಂಬಾ ಶ್ರೇಯಸ್ಸುಕರ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಕುಂಭ ಹಾಗೂ ಮಕರ ರಾಶಿಯವರು ನೀಲ ಮಣಿ ಧರಿಸಿದರೆ ಉತ್ತಮ
ಮಕರ ಹಾಗೂ ಕುಂಭ ಈ ಎರಡೂ ರಾಶಿಗಳಿಗೆ ಶನಿ ರಾಷ್ಯಾಧಿಪತಿ. ಹೀಗಾಗಿ ಈ ಎರಡು ರಾಶಿಗಳ ಮೇಲೆ ಶನಿಯ ವಿಶೇಷ ಕೃಪೆ ಇರುತ್ತದೆ. ಈ ಕಾರಣದಿಂದ ಈ ಜಾತಕದ ಜನರು ಕಠಿಣ ಪರಿಶ್ರಮಿಗಳು ಹಾಗೂ ಪ್ರಾಮಾಣಿಕರಾಗಿರುತ್ತಾರೆ. ಹೀಗಾಗಿ ಈ ರಾಶಿಗಳ ಜನರು ಶನಿಯನ್ನು ಪ್ರತಿನಿಧಿಸುವ ನೀಲಮಣಿ ರತ್ನವನ್ನು ಧರಿಸಿದರೆ, ಇವರಿಗೆ ಬಹಳ ಲಾಭ ಸಿಗುತ್ತದೆ. ನೀಲಮಣಿ ಧರಿಸುವುದರಿಂದ ಈ ರಾಶಿಗಳ ಜನರಿಗೆ ಧನ, ಸಂಪತ್ತು, ಯಶಸ್ಸು, ಸನ್ಮಾನ ಪ್ರಾಪ್ತಿಯಾಗುತ್ತದೆ. ಆದರೆ ಈ ರಾಶಿಗಳ ಜನರು ಜೋತಿಷ್ಯ ತಜ್ಞರ ಸಲಹೆ ಪಡೆಯದೇ ನೀಲಮಣಿಯನ್ನು ಧರಿಸಬಾರದು. ನೀಲಮಣಿ ಧರಿಸುವುದು ನಿಮಗೆ ಶ್ರೇಯಸ್ಕರವಾಗಿದೆಯೆ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವ ಒಂದು ಉತ್ತಮ ಮಾರ್ಗ ಎಂದರೆ, ನೀಲಮಣಿಯನ್ನು ನೀಲಿ ಬಣ್ಣದ ವಸ್ತ್ರದಲ್ಲಿ ಸುತ್ತಿ ನಿಮ್ಮ ಕೈಗೆ ಕಟ್ಟಿಕೊಳ್ಳಿ ಅಥವಾ ನೀವು ಮಲಗುವ ದಿಂಬಿನ ಕೆಳಗೆ ಇರಿಸಿ ಮಲಗಿಕೊಳ್ಳಿ. ಇದನ್ನು ಮಾಡುವುದರಿಂದ ಒಂದು ವೇಳೆ ನಿಮಗೆ ನೆಮ್ಮದಿಯಿಂದ ನಿದ್ರೆ ಬಂದರೆ, ಈ ರತ್ನ ನಿಮಗೆ ಸೂಟ್ ಮಾಡುತ್ತಿದೆ ಎಂದರ್ಥ. ಒಂದು ವೇಳೆ ನೀಲಮಣಿ ನಿಮಗೆ ಸೂಟ್ ಮಾಡುತ್ತಿಲ್ಲ ಎಂದಾದರೆ, ನಿದ್ರಾಹೀನತೆ, ಒತ್ತಡ, ಕೆಟ್ಟ ಕನಸುಗಳು ಎದುರಾಗುತ್ತವೆ. 


ಇದನ್ನೂ ಓದಿ-Monthly Horoscope 2022: ಸೆಪ್ಟೆಂಬರ್ 17ರ ಬಳಿಕ ಈ ರಾಶಿಗಳಿಗೆ ಅಪಾರ ಧನಲಾಭ


ಆದರೆ ಈ ತಪ್ಪು ಮಾಡಬೇಡಿ 
ಮಕರ ಮತ್ತು ಕುಂಭರಾಶಿಯ ಜನರು ನೀಲಮಣಿ ರತ್ನ ಧರಿಸಲಿ ಅಥವಾ ಧರಿಸದೆ ಇರಲಿ. ಪುಷ್ಯರಾಗ ರತ್ನವನ್ನು ಎಂದಿಗೂ ಕೂಡ ಧರಿಸಬಾರದು. ಅದೇನೇ ಇದ್ದರೂ ಯಾವುದೇ ರತ್ನ ಧರಿಸಿದರು ಅದನ್ನು ಸಂಪೂರ್ಣ ವಿಧಿ-ವಿಧಾನದಿಂದ ಧರಿಸಬೇಕು. ಆಗಲೇ ಅದರ ಸಂಪೂರ್ಣ ಲಾಭ ನಿಮಗೆ ಸಿಗುತ್ತದೆ.


ಇದನ್ನೂ ಓದಿ-ಸೆಪ್ಟೆಂಬರ್ ತಿಂಗಳಲ್ಲಿ ತೆರೆಯುವುದು ಈ ರಾಶಿಯವರ ಭಾಗ್ಯದ ಬಾಗಿಲು


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ) 


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.