ಸೆಪ್ಟೆಂಬರ್ ತಿಂಗಳಲ್ಲಿ ತೆರೆಯುವುದು ಈ ರಾಶಿಯವರ ಭಾಗ್ಯದ ಬಾಗಿಲು

Monthly Horoscope September 2022 :  ಸೆಪ್ಟೆಂಬರ್ ತಿಂಗಳಲ್ಲಿ ಅನೇಕ ಪ್ರಮುಖ ಗ್ರಹಗಳ ರಾಶಿ ಪರಿವರ್ತನೆಯಾಗಲಿದೆ.  ಕೆಲವು ರಾಶಿಯವರಿಗೆ ಈ ಬದಲಾವಣೆ ಮಂಗಳಕರ ಫಲಿತಾಂಶಗಳನ್ನು ನೀಡಲಿದೆ. ಹೌದು ಕೆಲವು ರಾಶಿಯವರ ಮೇಲೆ ಮಹಾಲಕ್ಷ್ಮೀಯ ವಿಶೇಷ ಕೃಪೆಯಿಂದ ಧನಲಾಭವ ಆಗಲಿದೆ. ಮಾಡುವ ಕೆಲಸಗಳಲ್ಲಿ ಪ್ರಗತಿಯಾಗಲಿದೆ. 

Written by - Ranjitha R K | Last Updated : Sep 1, 2022, 08:13 AM IST
  • ಸೆಪ್ಟೆಂಬರ್ ತಿಂಗಳು ಕೆಲವರಿಗೆ ತುಂಬಾ ವಿಶೇಷವಾಗಿರುತ್ತದೆ.
  • ಲಕ್ಷ್ಮೀ ದೇವಿಯ ಕೃಪೆಯಿಂದ ಹಣ ಮತ್ತು ಬಡ್ತಿಯನ್ನು ಪಡೆಯಲಿದ್ದಾರೆ.
  • ವೃತ್ತಿಜೀವನದಲ್ಲಿ ಹೊಸ ಅವಕಾಶಗಳು ತೆರೆದುಕೊಳ್ಳಲಿದೆ.
ಸೆಪ್ಟೆಂಬರ್ ತಿಂಗಳಲ್ಲಿ ತೆರೆಯುವುದು ಈ ರಾಶಿಯವರ ಭಾಗ್ಯದ ಬಾಗಿಲು  title=
Monthly horoscope (file photo)

Monthly Horoscope September 2022 :  ಸೆಪ್ಟೆಂಬರ್ ತಿಂಗಳು ಕೆಲವರಿಗೆ ತುಂಬಾ ವಿಶೇಷವಾಗಿರುತ್ತದೆ. ಮಾಸಿಕ ಜಾತಕದ ಪ್ರಕಾರ, ಈ  ರಾಶಿಯವರು ಸೆಪ್ಟೆಂಬರ್‌ನಲ್ಲಿ  ಲಕ್ಷ್ಮೀ ದೇವಿಯ ಕೃಪೆಯಿಂದ ಸಾಕಷ್ಟು ಹಣ ಮತ್ತು ಬಡ್ತಿಯನ್ನು ಪಡೆಯಲಿದ್ದಾರೆ. ವೃತ್ತಿಜೀವನದಲ್ಲಿ ಹೊಸ ಅವಕಾಶಗಳು ತೆರೆದುಕೊಳ್ಳಲಿದೆ. ಕೌಟುಂಬಿಕ ಜೀವನದಲ್ಲೂ ಸಂತೋಷ ಇರುತ್ತದೆ. ಜ್ಯೋತಿಷ್ಯದ ಪ್ರಕಾರ  ಸೆಪ್ಟೆಂಬರ್ 2022 ರ ಅದೃಷ್ಟದ ರಾಶಿಗಳು ಯಾವುವು  ನೋಡೋಣ. 

ಮೇಷ ರಾಶಿ : ಮೇಷ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳು ಬಹಳ ಸಂತೋಷವನ್ನು ತರುತ್ತದೆ. ವೃತ್ತಿಜೀವನದಲ್ಲಿ ಪ್ರಚಂಡ  ಪ್ರಗತಿ ಇರಲಿದೆ. ಗಳಿಕೆ ಹೆಚ್ಚಲಿದೆ. ಉದ್ಯಮಿಗಳು ತಮ್ಮ ಆತ್ಮವಿಶ್ವಾಸದ ಬಲದ ಮೇಲೆ ದೊಡ್ಡ ಸವಾಲನ್ನು ಎದುರಿಸಿ ಜಯಿಸುತ್ತಾರೆ. ಕೆಲವರು ತಮ್ಮ ಕೆಲಸವನ್ನು ಬದಲಾಯಿಸಬಹುದು. ಆರೋಗ್ಯ ಚೆನ್ನಾಗಿರುತ್ತದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ. 

ಇದನ್ನೂ ಓದಿ : Planet Transit: ಮುಂದಿನ 4 ತಿಂಗಳು ಈ ರಾಶಿಗಳ ಜಾತಕದವರಿಗೆ ಬಂಬಾಟಾಗಿರಲಿವೆ

ವೃಷಭ : ಸೆಪ್ಟೆಂಬರ್ ತಿಂಗಳು ವೃಷಭ ರಾಶಿಯವರಿಗೆ ವೃತ್ತಿ ಜೀವನದಲ್ಲಿ ಬಡ್ತಿಯನ್ನು ನೀಡುತ್ತದೆ. ಹೊಸ ಉದ್ಯೋಗಾವಕಾಶ ದೊರೆಯಲಿದೆ. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಸ್ಥಿರಾಸ್ತಿಯಿಂದ ಲಾಭವಾಗಲಿದೆ.  ಪ್ರೇಮ ಜೀವನ ಚೆನ್ನಾಗಿರುತ್ತದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. 

ಸಿಂಹ : ಸಿಂಹ ರಾಶಿಯವರಿಗೆ ಸೆಪ್ಟೆಂಬರ್‌ನಲ್ಲಿ ವೃತ್ತಿಗೆ ಸಂಬಂಧಿಸಿದ ಒಳ್ಳೆಯ ಸುದ್ದಿಗಳು ಸಿಗಲಿವೆ. ಉದ್ಯಮಿಗಳಿಗೂ ಯಶಸ್ಸು ಸಿಗಲಿದೆ. ಮಕ್ಕಳಿಗೆ ಸಂಬಂಧಿಸಿದ ಒಳ್ಳೆಯ ಸುದ್ದಿಯನ್ನು ಪಡೆಯುತ್ತೀರಿ. ಹಣಕಾಸಿನ  ಪ್ರಯೋಜನವಾಗಲಿದೆ. ಹೂಡಿಕೆಯಿಂದ ಲಾಭವಾಗಲಿದೆ. ಪ್ರೇಮ ಜೀವನ ಚೆನ್ನಾಗಿರುತ್ತದೆ. 

ಇದನ್ನೂ ಓದಿ : Name Astrology: ಅತ್ಯಂತ ಕಿರಿ ವಯಸ್ಸಿನಲ್ಲಿಯೇ ಸಿರಿವಂತರಾಗುತ್ತಾರೆ ಈ ಅಕ್ಷರದ ಹೆಸರಿನವರು

ಕನ್ಯಾ : ಕನ್ಯಾ ರಾಶಿಯವರಿಗೆ ಸೆಪ್ಟೆಂಬರ್‌ನಲ್ಲಿ ಗಳಿಕೆ ಹೆಚ್ಚಾಗುತ್ತದೆ. ಹಣಕಾಸಿನ ಪರಿಸ್ಥಿತಿಗಳು ಉತ್ತಮವಾಗಿರುತ್ತದೆ. ಆತ್ಮವಿಶ್ವಾಸ ಹೆಚ್ಚಲಿದೆ. ಮನೆಯಲ್ಲಿ ಶುಭ ಕಾರ್ಯನೆವೇರಬಹುದು. ಉದ್ವೇಗ ಕಡಿಮೆ ಇರುತ್ತದೆ. ಕೆಲಸಗಳಲ್ಲಿ ಸಮಾಧಾನ  ಇರುತ್ತದೆ. 

ತುಲಾ : ತುಲಾ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳು ತುಂಬಾ ಶುಭಕರವಾಗಿರಲಿದೆ. ವೃತ್ತಿ ಜೀವನದಲ್ಲಿ ಹೊಸ ಅವಕಾಶಗಳು ಬರಲಿವೆ. ಕೆಲಸದ ಒತ್ತಡ ಹೆಚ್ಚಾದರೂ ನೀವು ಸಂತೋಷವಾಗಿರುತ್ತೀರಿ. ರಾಜಕಾರಣಿಗಳು ದೊಡ್ಡ ಹುದ್ದೆಗಳನ್ನು ಪಡೆಯಬಹುದು. ಗೌರವ ಹೆಚ್ಚಾಗಲಿದೆ. ಪ್ರೇಮ ಜೀವನದಲ್ಲಿ ರೋಮ್ಯಾನ್ಸ್ ಹೆಚ್ಚಾಗುತ್ತದೆ. ಬಲವಾದ ವಿತ್ತೀಯ ಲಾಭವಾಗಲಿದೆ.  ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. 

ಇದನ್ನೂ ಓದಿ : ಜಾತಕದಲ್ಲಿ ರಾಹು ದುರ್ಬಲನಾಗಿದ್ದರೆ ತಪ್ಪದೇ ಈ ಪರಿಹಾರ ಮಾಡಿ

ಮಕರ : ಸೆಪ್ಟೆಂಬರ್ ತಿಂಗಳು ಮಕರ ರಾಶಿಯವರಿಗೆ ಅನೇಕ ಯಶಸ್ಸನ್ನು ನೀಡುತ್ತದೆ. ಉದ್ಯೋಗದಲ್ಲಿ ಉನ್ನತ ಸ್ಥಾನ ಪಡೆಯಬಹುದು. ವ್ಯಾಪಾರಿಗಳು ತಮ್ಮ ನಿಖರವಾದ ಮೌಲ್ಯಮಾಪನದಿಂದ ಲಾಭವನ್ನು ಗಳಿಸುತ್ತಾರೆ. ಹೂಡಿಕೆಯಿಂದ ಲಾಭವಾಗಲಿದೆ. ಗೊಂದಲದಿಂದ ದೂರವಿರಿ. 

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News