ನವದೆಹಲಿ : ತುಳಸಿ (Tulsi) ಪ್ರತಿ ಭಾರತೀಯ ಮನೆಯ ಅವಿಭಾಜ್ಯ ಅಂಗವಾಗಿದೆ. ಪ್ರತಿ ಮನೆಯ ಅಂಗಳದಲ್ಲಿ ತುಳಸಿ ಸಸಿ ಇದ್ದೇ ಇರುತ್ತದೆ. ತುಳಸಿಯನ್ನು ಲಕ್ಷ್ಮಿಯ (Godess Laxmi) ರೂಪವೆಂದು ಪರಿಗಣಿಸಲಾಗುತ್ತದೆ.  ಪ್ರತೀ ಮನೆಯಲ್ಲೂ ಮುಂಜಾನೆ ಮತ್ತು ಮುಸ್ಸಂಜೆ ತುಳಸಿಗೆ ಪೂಜೆ (tulsi Pooja) ನೆರವೇರಿಸಲಾಗುತ್ತದೆ. ಪವಿತ್ರ ತುಳಸಿ ಗಿಡವನ್ನು ಮನೆಯಂಗಳದಲ್ಲಿ ನೆಡುವುದರಿಂದ  ಮನೆಯಲ್ಲಿ ಸಕಾರಾತ್ಮಕತೆ (Positive energy) ನೆಲೆಯಾಗುತ್ತದೆ. 


COMMERCIAL BREAK
SCROLL TO CONTINUE READING

ಸ್ನಾನ ಮಾಡಿದ ನಂತರ, ತುಳಸಿ ಗಿಡಕ್ಕೆ (Tulsi) ನೀರು ಹಾಕಿ,  ದೀಪ  ಬೆಳಗಿಸಿ, ತುಳಸೀ ಪೂಜೆ (Tulsi Pooja) ಮಾಡಲಾಗುತ್ತದೆ. ಪ್ರತಿ ನಿತ್ಯ ಬಹಳ ಶೃದ್ದಾ ಭಕ್ತಿಯಿಂದ ತುಳಸಿ ಪೂಜೆ ಮಾಡಲಾಗುತ್ತದೆ. ಆದರೆ ಕೆಲವೊಮ್ಮೆ ದಿನನಿತ್ಯ  ತುಳಸಿ ಸಸ್ಯಕ್ಕೆ ನೀರು (water) ಹಾಕಿದರೂ ಇದ್ದಕ್ಕಿದ್ದಂತೆ ಸಸಿ ಬಾಡಲು ಆರಂಭವಾಗುತ್ತದೆ.   ಈ ರೀತಿ ಆಗುವುದನ್ನು ಅನೇಕರು ಗಮನಿಸಿರಬಹುದು. ಆದರೆ ಇದಕ್ಕೆ ಕಾರಣಗಳೇನಿರಬಹುದು ಎಂದು ಯಾವತ್ತಾದರು ಯೋಚಿಸಿದ್ದೀರಾ? ಉಳಿದ ಎಲ್ಲಾ ಸಸ್ಯಗಳು ಉತ್ತಮ ಸ್ಥಿತಿಯಲ್ಲಿದ್ದು, ಮನೆಯ ತುಳಸಿ ಮಾತ್ರ ಬಾಡಿ ಹೋಗುತ್ತಿದ್ದರೆ  ಅಥವಾ ಸೊರಗುತ್ತಿದೆ ಎಂದಾದರೆ, ಇದು ಭವಿಷ್ಯದ ಸಮಸ್ಯೆಗಳನ್ನು ಸೂಚಿಸುತ್ತದೆ. ಇದನ್ನು ಭವಿಷ್ಯದಲ್ಲಿ ಎದುರಾಗುವ ಸಮಸ್ಯೆಗಳ ಮುನ್ಸೂಚನೆ  ಎಂದೇ ನಂಬಲಾಗಿದೆ. 


ಇದನ್ನೂ ಓದಿ : ಮಂಗಳವಾರ ಯಾಕೆ ಮಾರುತಿ ಪೂಜೆ ಮಾಡಬೇಕು? ಇಲ್ಲಿದೆ ಮಾಹಿತಿ


ತುಳಸಿ ಒಣಗುವುದು ಅಶುಭ : 
ಹಿಂದೂ ಧರ್ಮದ ಗ್ರಂಥಗಳ ಪ್ರಕಾರ,  ತುಳಸಿ ಸಸ್ಯ ಒಣಗುವುದು (dried tulsi plant) ಅಥವಾ ಸೊರಗುವುದು ಅಶುಭ ಎನ್ನಲಾಗಿದೆ. ತುಳಸಿ ವಾಸಿಸುವ ಮನೆಗೆ ಏನಾದರೂ ಸಮಸ್ಯೆಗಳು ಎದುರಾದರೆ, ಆ ಸಮಸ್ಯೆಯ ತಾಪವನ್ನು ಮೊದಲು ತುಳಸಿ ತನ್ನತ್ತ ಸೆಳೆದುಕೊಳ್ಳುತ್ತಾಳಂತೆ. ಹಾಗಾಗಿ ಇದ್ದಕ್ಕಿದ್ದಂತೆ ತುಳಸಿ ಒಣಗಿ ಹೋಗುತ್ತದೆ ಎನ್ನಲಾಗಿದೆ.  ಇನ್ನೊಂದು ನಂಬಿಕೆಯ ಪ್ರಕಾರ, ಮನೆಗೆ ಸಮಸ್ಯೆಗಳು ಎದುರಾಗುವುದಾದರೆ ಮೊದಲು ಲಕ್ಷ್ಮೀ (Godess Laxmi) ಸಮಾನಳಾಗಿರುವ ತುಳಸಿ ಎದ್ದು ನಡೆಯುತ್ತಾಳೆ ಎನ್ನುವುದು. ಹಾಗಾಗಿ ಇದ್ದಕ್ಕಿದ್ದಂತೆ ತುಳಸಿ ಒಣಗಲು ಆರಂಭಿಸಿದರೆ ಏನೋ ಅಶುಭ ಸಂಭವಿಸಲಿದೆ ಎಂದೇ ಅರ್ಥ. 


ಇದಲ್ಲದೆ, ತುಳಸಿ ಸಸಿ  ಒಣಗುವುದಕ್ಕೂ ಬುಧ ಗ್ರಹಕ್ಕೂ ಸಂಬಂಧವಿದೆ.  ಜ್ಯೋತಿಷ್ಯದ ಪ್ರಕಾರ, (Astrology) ಬುಧದ ಬಣ್ಣವು ಹಸಿರು. , ಮತ್ತು  ಇದನ್ನು ಮರಗಳು ಮತ್ತು ಸಸ್ಯಗಳ ಅಂಶವೆಂದು ಪರಿಗಣಿಸಲಾಗುತ್ತದೆ. ಇದು ಮಾತ್ರವಲ್ಲ, ಬುಧ ಇತರ ಗ್ರಹಗಳ ಒಳ್ಳೆಯ ಮತ್ತು ಕೆಟ್ಟ ಫಲಗಳನ್ನು ವ್ಯಕ್ತಿಗೆ ರವಾನಿಸುತ್ತದೆ. ಒಂದು ಗ್ರಹವು ಅಶುಭ ಫಲಗಳನ್ನು ನೀಡುವುದಾದರೆ, ಇದರ ಪ್ರಭಾವ ಬುಧ ಗ್ರಹಕ್ಕೆ ಸಂಬಂಧಿಸಿದ ವಸ್ತುಗಳ ಮೇಲೆ ಮೊದಲು ಆಗುತ್ತದೆ. ತುಳಸಿ ಕೂಡಾ ಬುಧ ಗ್ರಹಕ್ಕೆ ಸಂಬಂಧಿಸಿದ್ದು  ಎನ್ನುವುದನ್ನು ಇಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕು. 


ಇದನ್ನೂ ಓದಿ : ಚಿಟಿಕೆ ಉಪ್ಪು ವಾಸ್ತು ದೋಷ ನಿವಾರಣೆಗೆ ಸಹಾಯ ಮಾಡುತ್ತದೆ..!


ಒಣಗಿದ ತುಳಸಿ ಗಿಡವನ್ನು ಅಂಗಳದಲ್ಲಿ ಇಡುವುದು ಕೂಡಾ ಅಶುಭ ಫಲವನ್ನು ನೀಡುತ್ತದೆ. ಹಾಗಾಗಿ, ತುಳಸಿ ಗಿಡ ಒಣಗಿದೆ ಎನ್ನುವುದು ಗಮನಕ್ಕೆ ಬಂದ ಕೂಡಲೇ ಅದನ್ನು ತೆಗೆದು ನೀರಿನಲ್ಲಿ ಬಿಡಿ. ಹೊಸ ತುಳಸಿ ಸಸ್ಯವನ್ನು ನೆಡಿ. ಮತ್ತೆ ಎಂದಿನಂತೆ ಪೂಜೆ ಮಾಡುವ ಕಾರ್ಯವನ್ನು ಆರಂಭಿಸಿ..  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.