2020 ರ ಕೊನೆಯ ಸೂರ್ಯಗ್ರಹಣ: ದಿನಾಂಕ, ಸಮಯದ ಬಗ್ಗೆ ಇಲ್ಲಿದೆ ಮಾಹಿತಿ
ಸೂರ್ಯಗ್ರಹಣವು ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಸೂರ್ಯಗ್ರಹಣವು ನಮ್ಮ ಜೀವನದ ಮೇಲೂ ಪರಿಣಾಮ ಬೀರುತ್ತದೆ ಎಂದು ಜ್ಯೋತಿಷಿಗಳು ನಂಬುತ್ತಾರೆ.
ಬೆಂಗಳೂರು: 2020ರ ಮೊದಲ ಸೂರ್ಯಗ್ರಹಣ ಜೂನ್ 21 ರಂದು ಸಂಭವಿಸಿದೆ. ಇದೀಗ 2020ರ ಕೊನೆಯ ಸೂರ್ಯಗ್ರಹಣ ಡಿಸೆಂಬರ್ 14 ರಂದು ಸಂಭವಿಸಲಿದೆ. ಸೂರ್ಯಗ್ರಹಣ 2020 ಸುಮಾರು ಐದು ಗಂಟೆಗಳ ಕಾಲ ಇರುತ್ತದೆ. ಆದರೆ ಈ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸದ ಕಾರಣ ಇದು ಭಾರತದ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ.
ಸೂರ್ಯಗ್ರಹಣವು (Solar eclipse) ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಸೂರ್ಯಗ್ರಹಣವು ನಮ್ಮ ಜೀವನದ ಮೇಲೂ ಪರಿಣಾಮ ಬೀರುತ್ತದೆ ಎಂದು ಜ್ಯೋತಿಷಿಗಳು ನಂಬುತ್ತಾರೆ.
ಸೂರ್ಯಗ್ರಹಣದ ಸಮಯದಲ್ಲೂ ತೆರೆದಿರುತ್ತೆ ಈ ದೇವಾಲಯ!
ಸೂರ್ಯಗ್ರಹಣ 2020: ಅದು ಎಲ್ಲಿ ಗೋಚರಿಸುತ್ತದೆ?
ಡಿಸೆಂಬರ್ 14 ರಂದು ಸಂಭವಿಸಲಿರುವ 2020ರ ಕೊನೆಯ ಸೂರ್ಯಗ್ರಹಣ ದಕ್ಷಿಣ ಅಮೆರಿಕಾ (America), ದಕ್ಷಿಣ ಆಫ್ರಿಕಾ ಮತ್ತು ಪೆಸಿಫಿಕ್ ಮಹಾಸಾಗರದ ಕೆಲವು ಭಾಗಗಳಲ್ಲಿ ಕಂಡುಬರುತ್ತದೆ. ಈ ಒಟ್ಟು ಸೂರ್ಯಗ್ರಹಣವು ಚಿಲಿ ಮತ್ತು ಅರ್ಜೆಂಟೀನಾದ ಕೆಲವು ಭಾಗಗಳಲ್ಲಿ ಗೋಚರಿಸುತ್ತದೆ. ದಕ್ಷಿಣ ಅಮೆರಿಕಾ, ನೈಋತ್ಯ ಆಫ್ರಿಕಾ ಮತ್ತು ಅಂಟಾರ್ಕ್ಟಿಕಾದ ಕೆಲವು ಪ್ರದೇಶಗಳಲ್ಲಿ ಭಾಗಶಃ ಸೂರ್ಯಗ್ರಹಣವನ್ನು ಕಾಣಬಹುದಾಗಿದೆ.
ಸೂರ್ಯಗ್ರಹಣ ಹಿನ್ನೆಲೆ ಪ್ರಗತಿಪರರಿಂದ 'ವಿಜ್ಞಾನದೆಡೆ ನಮ್ಮ ನಡಿಗೆ' ಜಾಗೃತಿ ಕಾರ್ಯಕ್ರಮ
ಸೂತಕ ಕಾಲ ಅಂದರೆ ಏನು?
ಮಾನ್ಯತೆಗಳ ಪ್ರಕಾರ, ಗ್ರಹಣದ ಪೂರ್ವ ಆರಂಭವಾಗಲಿರುವ ಸೂತಕ ಕಾಲದಲ್ಲಿ ಯಾವುದೇ ಧಾರ್ಮಿಕ ಕಾರ್ಯಗಳನ್ನು ನಡೆಸಲಾಗುವುದಿಲ್ಲ. ಈ ಅವಧಿಯಲ್ಲಿ ದೇವಾಲಯಗಳ ಕಪಾಟಗಳು ಬಂದ್ ಆಗಿರಲಿವೆ. ಈ ಅವಧಿಯಲ್ಲಿ ಅಗ್ನಿ ಕರ್ಮ ಕೂಡ ನಡೆಸಲಾಗುವುದಿಲ್ಲ. ಇದರಿಂದ ಅಗ್ನಿದೇವ ಕುಪಿತನಾಗುವ ಸಾಧ್ಯತೆ ಇದೆ ಎನ್ನಲಾಗುತ್ತದೆ.