ಬೆಂಗಳೂರು: ಕೇತು ಸೂರ್ಯ ಗ್ರಹಣ ಎಂಬುದು ಒಂದು ಸಹಜ ನೈಸರ್ಗಿಕ ಪ್ರಕ್ರಿಯೆ. ಇದನ್ನು ವೈಜ್ಞಾನಿಕವಾಗಿ ಸ್ವೀಕರಿಸಬೇಕೇ ಹೊರತು ಧಾರ್ಮಿಕ ಭಾವನೆಯಿಂದ ನೋಡಬಾರದೆಂದು ಜಾಗೃತಿ ಮೂಡಿಸಲು ಪ್ರಗತಿಪರರು ಟೌನ್ ಹಾಲ್ ಮುಂದೆ 'ವಿಜ್ಞಾನದೆಡೆ ನಮ್ಮ ನಡಿಗೆ' ಹೆಸರಿನ ಜಾಗೃತಿ ಕಾರ್ಯಕ್ರಮ ನಡೆಸಿದರು.
ಮಾಜಿ ಸಚಿವೆ ಬಿ.ಟಿ. ಲಲಿತಾನಾಯಕ್, ರೈತ ಮುಖಂಡ ಕೊಡಿಹಳ್ಳಿ ಚಂದ್ರಶೇಖರ್ ಮತ್ತಿತರರು ಈ 'ವಿಜ್ಞಾನದೆಡೆ ನಮ್ಮ ನಡಿಗೆ' ಹೆಸರಿನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮೂಢನಂಬಿಕೆ ಆಚರಣೆಗಳನ್ನು ಧಿಕ್ಕರಿಸಿ ಎಂಬ ವಿವಿಧ ಬರಹಗಳನ್ನೊಳಗೊಂಡ ಫ್ಲಕ್ಸ್ ಕಾರ್ಡ್ ಹಿಡಿದು ಗಮನ ಸೆಳೆದರು. ಗ್ರಹಣ ವೇಳೆ ತಿಂಡಿ ತಿನಿಸುಗಳನ್ನು ತಿನ್ನಬಾರದೆಂಬ ಮೂಢನಂಬಿಕೆ ವಿರುದ್ಧ ಜಾಗೃತಿ ಮೂಡಿಸಲು ಹಣ್ಣು ಹಂಪಲುಗಳನ್ನು ವಿತರಿಸಿದರು.
ಲಾಲ್ ಬಾಗ್ ನಲ್ಲಿ ವಾಕ್ ಮಾಡುತ್ತಿದ್ದವರಿಗೆ 'ಗ್ರಹಣದಿಂದ ಏನು ಆಗಲ್ಲ, ಎಲ್ಲಾ ನಮ್ಮ ಮೂಡನಂಬಿಕೆ ಎಂದು ಜಾಗೃತಿ ಮೂಡಿಸಲು ಲಾಲ್ ಬಾಗ್ ಬಂಡೆ ಮೇಲೆ ಖಾರಬಾತ್ ಸೇವನೆ ಮಾಡಲಾಯಿತು. ಗ್ರಹಣದಿಂದ ಏನು ಆಗಲ್ಲ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. 21ನೇ ಶತಮಾನದಲ್ಲಿರುವ ನಾವು ಇಂಥ ಗೊಡ್ಡು ನಂಬಿಕೆಗಳನ್ನು ಕಿತ್ತು ಬಿಸಾಕಬೇಕು. ಬಾವೆಲ್ಲ ಇದೇ ಕಾರಣಕ್ಕೆ ತಿಂಡಿ ತಿನ್ನುತ್ತಿದ್ದೇವೆ ಎಂದು ಆಯೋಜಕರು ಹೇಳಿದರು.