ATM: ಮಿಷನ್ ಒಂದು ಲಾಭ ಹಲವು, ಕ್ಯಾಶ್ ವಿತ್ ಡ್ರಾ ಹೊರತಾಗಿ ಸಿಗಲಿದೆ ಈ 5 ಪ್ರಯೋಜನ

Mon, 02 Aug 2021-1:20 pm,

ಎಸ್‌ಬಿಐ ಸೇರಿದಂತೆ ಹಲವು ಬ್ಯಾಂಕುಗಳ ಎಟಿಎಂಗಳಲ್ಲಿ ನಗದು ಠೇವಣಿ (Cash Deposit) ಸೌಲಭ್ಯ ಲಭ್ಯವಿದೆ. ನೀವು ಎಟಿಎಂಗಳಲ್ಲಿ ಹಣ ವಿತ್ ಡ್ರಾ ಮಾಡುವುದರ ಜೊತೆಗೆ ಕ್ಯಾಶ್ ಡೆಪಾಸಿಟ್ ಕೂಡ ಮಾಡಬಹುದು. ನೀವು ಎಟಿಎಂ ಯಂತ್ರದಲ್ಲಿ ಹಣ ಅಥವಾ ಚೆಕ್ ಮೂಲಕ ಹಣ ಜಮಾ ಮಾಡಬಹುದು.

ನೀವು ಎಟಿಎಂ ಮೂಲಕ ಹಣವನ್ನು ವರ್ಗಾಯಿಸಬಹುದು. ಎಸ್‌ಬಿಐ ಎಟಿಎಮ್‌ಗಳಲ್ಲಿ ಒಂದು ಎಸ್‌ಬಿಐ ಡೆಬಿಟ್ ಕಾರ್ಡ್‌ನಿಂದ (Debit Card) ಇನ್ನೊಂದು ಎಸ್‌ಬಿಐ ಡೆಬಿಟ್ ಕಾರ್ಡ್‌ಗೆ ದಿನಕ್ಕೆ ರೂ 40,000 ವರೆಗೆ ಹಣ ವರ್ಗಾವಣೆಯನ್ನು ಮಾಡಬಹುದು.  

ಎಟಿಎಂಗೆ ಭೇಟಿ ನೀಡುವ ಮೂಲಕ ನೀವು ವಿದ್ಯುತ್ ಬಿಲ್, ನೀರಿನ ಬಿಲ್ ನಂತಹ ಯುಟಿಲಿಟಿ ಬಿಲ್ ಗಳನ್ನು ಪಾವತಿಸಬಹುದು. ಎಸ್‌ಬಿಐ (SBI) ಸೇರಿದಂತೆ ಹಲವು ಬ್ಯಾಂಕುಗಳ ಎಟಿಎಂಗಳಲ್ಲಿ ಈ ಸೌಲಭ್ಯ ಲಭ್ಯವಿದೆ. ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಎಟಿಎಂನಿಂದಲೂ ಪಾವತಿಸಬಹುದು. ಇದಕ್ಕಾಗಿ ನೀವು ನಿಮ್ಮ ಕ್ರೆಡಿಟ್ ಕಾರ್ಡ್ ಸಂಖ್ಯೆಯನ್ನು ತಿಳಿದುಕೊಳ್ಳಬೇಕು.

ಇದನ್ನೂ ಓದಿ- LPG Cylinder Booking: ಎಲ್‌ಪಿಜಿ ಸಿಲಿಂಡರ್ ಬುಕ್ ಮಾಡಲು ಈ ಸುಲಭ ಮಾರ್ಗಗಳನ್ನು ಅನುಸರಿಸಿ

ನೀವು ಅಂತರ್ಜಾಲದ ಸಮಸ್ಯೆ ಇರುವ ಸ್ಥಳದಲ್ಲಿದ್ದರೆ, ಎಟಿಎಂಗೆ ಹೋಗುವ ಮೂಲಕ ನೀವು ಮೊಬೈಲ್ ರೀಚಾರ್ಜ್ (Mobile Recharge) ಮಾಡಬಹುದು. ಎಸ್‌ಬಿಐ ಸೇರಿದಂತೆ ಇತರ ಹಲವು ಬ್ಯಾಂಕುಗಳ ಎಟಿಎಂಗಳಲ್ಲಿ ಈ ಸೌಲಭ್ಯ ಲಭ್ಯವಿದೆ.

ಇದನ್ನೂ ಓದಿ- Aadhaar Card Update: ಈಗ ನಿಮ್ಮ ಆಧಾರ್ ಕಾರ್ಡ್ ಕಳೆದುಹೋದರೂ ಚಿಂತಿಸಬೇಕಿಲ್ಲ

ಎಟಿಎಂನಿಂದ ಸಾಲಕ್ಕಾಗಿ ಕೂಡ ಅರ್ಜಿ ಸಲ್ಲಿಸಬಹುದು. ಐಸಿಐಸಿಐ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಎಟಿಎಂಗಳಲ್ಲಿ ಈ ಸೌಲಭ್ಯ ಲಭ್ಯವಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link