SBI ಗ್ರಾಹಕರೇ ಗಮನಿಸಿ! ATM ಮೂಲಕ ಇಂತಹ ವಹಿವಾಟು ನಡೆಸಿದರೆ ಬೀಳುತ್ತೆ ಭಾರೀ ದಂಡ

                      

SBI ATM Penalty: ನೀವು SBI ಗ್ರಾಹಕರಾಗಿದ್ದರೆ, ಈ ಸುದ್ದಿಯನ್ನು ಎಚ್ಚರಿಕೆಯಿಂದ ಓದಿ. ಎಟಿಎಂನಿಂದ ಹಣವನ್ನು ಹಿಂಪಡೆಯುವ ಮೊದಲು, ನಿಮ್ಮ ಖಾತೆಯಲ್ಲಿ ಎಷ್ಟು ಹಣವಿದೆ ಎಂಬುದನ್ನು ನೀವು ಪರಿಶೀಲಿಸಬೇಕು. ಏಕೆಂದರೆ ನೀವು ತಪ್ಪಾಗಿ ಹೆಚ್ಚು ಹಣವನ್ನು ಹಿಂತೆಗೆದುಕೊಳ್ಳಲು ಪ್ರಯತ್ನಿಸಿದರೆ ನಿಮ್ಮ ವಹಿವಾಟು ವಿಫಲಗೊಳ್ಳುವುದರ ಜೊತೆಗೆ ಬ್ಯಾಂಕ್ ನಿಮಗೆ ದಂಡವನ್ನು ಸಹ ವಿಧಿಸುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಎಸ್‌ಬಿಐ ಮಾತ್ರವಲ್ಲ, ದೇಶದ ಬಹುತೇಕ ಬ್ಯಾಂಕುಗಳು ಖಾತೆಯಲ್ಲಿ ಕಡಿಮೆ ಹಣ ಇದ್ದಾಗ್ಯೂ ಹೆಚ್ಚಿನ ಹಣವನ್ನು ವಿತ್ ಡ್ರಾ ಮಾಡಲು ಯತ್ನಿಸಿದರೆ ಆಗುವ ವಿಫಲವಾದ ಎಟಿಎಂ ವಹಿವಾಟುಗಳ ಮೇಲೆ ದಂಡವನ್ನು ವಿಧಿಸುತ್ತವೆ. ಎಸ್‌ಬಿಐನ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಖಾತೆಯಲ್ಲಿನ ಕಡಿಮೆ ಬ್ಯಾಲೆನ್ಸ್‌ನಿಂದಾಗಿ  ಪ್ರತಿ ವಿಫಲವಾದ ವಹಿವಾಟಿನ ಮೇಲೆ ನೀವು ರೂ. 20 ದಂಡವನ್ನು ಪಾವತಿಸಬೇಕಾಗುತ್ತದೆ, ಅದರ ಮೇಲೆ ಜಿಎಸ್‌ಟಿಯನ್ನು ಪ್ರತ್ಯೇಕವಾಗಿ ವಿಧಿಸಲಾಗುತ್ತದೆ.

2 /5

ಆದಾಗ್ಯೂ ಇದು ಹೊಸ ನಿಯಮವಲ್ಲ. ಆದರೆ ಗ್ರಾಹಕರು ಈ ಬಗ್ಗೆ ಗಮನ ಹರಿಸುವುದರಿಂದ ಅನಗತ್ಯ ದಂಡವನ್ನು ತಪ್ಪಿಸಬಹುದು. ನಿಮ್ಮ ಉಳಿತಾಯ ಖಾತೆ ಬ್ಯಾಲೆನ್ಸ್ ಅನ್ನು ಟ್ರ್ಯಾಕ್ ಮಾಡುವುದು ಸುಲಭ, ಇದಕ್ಕಾಗಿ ನಿಮಗೆ ಹಲವು ಆಯ್ಕೆಗಳಿವೆ. ಉದಾಹರಣೆಗೆ, ಎಸ್ಎಂಎಸ್ ಮೂಲಕ, ಮಿಸ್ಡ್ ಕಾಲ್ ಮೂಲಕ, ನಿಮ್ಮ ಖಾತೆಯಲ್ಲಿ ಎಷ್ಟು ಹಣವಿದೆ ಎಂಬುದನ್ನು ಮೊದಲು ನೀವು ಪರಿಶೀಲಿಸಬಹುದು. ಎಟಿಎಂನಿಂದ ಹಣ ತೆಗೆಯುವ ಮುನ್ನವೇ ಬ್ಯಾಲೆನ್ಸ್ ಚೆಕ್ ಮಾಡಬಹುದು. ನೀವು ಆನ್‌ಲೈನ್ ಎಸ್‌ಬಿಐ ಬಳಸಿದರೆ, ಅಲ್ಲಿಂದಲೂ ಮಾಹಿತಿಯನ್ನು ತೆಗೆದುಕೊಳ್ಳಬಹುದು. ಇದಲ್ಲದೇ, ಗೂಗಲ್ ಪೇ (Google Pay) ಅಥವಾ PhonePe ಆಪ್‌ನಲ್ಲಿಯೂ ಬ್ಯಾಲೆನ್ಸ್ ಚೆಕ್ ಮಾಡಬಹುದು. ಇದರ ನಂತರ ನೀವು ಎಟಿಎಂನಿಂದ ಹಣ ವಿತ್ ಡ್ರಾ ಮಾಡಿದರೆ ದಂಡವನ್ನು ತಪ್ಪಿಸಬಹುದು.  

3 /5

ಎಸ್‌ಬಿಐನ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಬ್ಯಾಂಕ್ ತನ್ನ ಸಾಮಾನ್ಯ ಉಳಿತಾಯ ಖಾತೆದಾರರಿಗೆ ಒಂದು ತಿಂಗಳಲ್ಲಿ ಮೆಟ್ರೋ ನಗರಗಳಲ್ಲಿ 8 ಉಚಿತ ವಹಿವಾಟುಗಳನ್ನು ಅನುಮತಿಸುತ್ತದೆ. ಇವುಗಳಲ್ಲಿ 5 ಎಸ್‌ಬಿಐ ಎಟಿಎಮ್‌ಗಳು (SBI ATM) ಮತ್ತು ಯಾವುದೇ ಇತರ ಬ್ಯಾಂಕಿನ ಎಟಿಎಂನಿಂದ 3 ಉಚಿತ ವಹಿವಾಟುಗಳು ಸೇರಿವೆ. ಮೆಟ್ರೋ ಅಲ್ಲದ ನಗರಗಳಿಂದ 10 ಉಚಿತ ಎಟಿಎಂ ವಹಿವಾಟುಗಳು ಲಭ್ಯವಿದೆ, ಇದರಲ್ಲಿ ಎಸ್‌ಬಿಐನಿಂದ 5 ಮತ್ತು ಇತರ ಬ್ಯಾಂಕುಗಳ ಎಟಿಎಂಗಳಿಂದ 5 ವಹಿವಾಟುಗಳು ಸೇರಿವೆ. ಇದನ್ನೂ ಓದಿ- SBI ಆನ್‌ಲೈನ್ ಬ್ಯಾಂಕಿಂಗ್ ಈಗ ಇನ್ನೂ ಸುರಕ್ಷಿತ, YONO App ಹೊಸ ಭದ್ರತಾ ವೈಶಿಷ್ಟ್ಯ

4 /5

ಎಸ್‌ಬಿಐ ಪ್ರಕಾರ, ಎಟಿಎಂನಿಂದ ಹಲವು ಬಾರಿ ಹಣ ವಿತ್ ಡ್ರಾ (Cash Withdraw) ಮಾಡುವಾಗ ವಹಿವಾಟು ಪೂರ್ಣ ಎಂದು ಬಂದಿರುತ್ತದೆ. ಆದರೆ ಎಟಿಎಂ ನಿಂದ ಹಣ ಹೊರಬರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಭಯಪಡುವ ಅಗತ್ಯವಿಲ್ಲ. ಈ ವೇಳೆ ಮರೆಯದೇ ಎಟಿಎಂನಿಂದ ಸ್ಲಿಪ್ ಅನ್ನು ಹೊರತೆಗೆಯಿರಿ. ಎಸ್‌ಬಿಐ ವೆಬ್‌ಸೈಟ್‌ಗೆ ಹೋಗಿ ಮತ್ತು ಆನ್‌ಲೈನ್‌ನಲ್ಲಿ ದೂರು ಸಲ್ಲಿಸಿ. ಗ್ರಾಹಕರು ದೂರುಸಲ್ಲಿಸಿದ 7 ಕೆಲಸದ ದಿನಗಳಲ್ಲಿ ಇಂತಹ ಸಮಸ್ಯೆಗಳು ಪರಿಹರಿಸಲ್ಪಡುತ್ತವೆ. ಇದನ್ನೂ ಓದಿ- e-RUPI Launch: ಇಂದು ಲಾಂಚ್ ಆಗಲಿದೆ ಡಿಜಿಟಲ್ ಪೇಮೆಂಟ್ ಸಲ್ಯೂಶನ್ e-RUPI, ಇದರಿಂದ ಏನು ಪ್ರಯೋಜನ ಗೊತ್ತೇ?

5 /5

ಸೆಪ್ಟೆಂಬರ್ -2020 ರಲ್ಲಿ ಎಸ್‌ಬಿಐ ನಿಯಮವನ್ನು ಬದಲಾಯಿಸಿತು. ನೀವು ಎಸ್‌ಬಿಐ ಎಟಿಎಮ್‌ನಿಂದ 10 ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಹಿಂಪಡೆಯಲು ಬಯಸಿದರೆ, ಕೇವಲ ಪಿನ್ ಅನ್ನು ನಮೂದಿಸುವುದು ಸಾಕಾಗುವುದಿಲ್ಲ. ಎಟಿಎಂನಲ್ಲಿ ಬ್ಯಾಂಕಿನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯಲ್ಲಿ ನೀವು ಪಡೆಯುವ ಒನ್ ಟೈಮ್ ಪಾಸ್ವರ್ಡ್ (ಒಟಿಪಿ) ಅನ್ನು ಸಹ ನಮೂದಿಸಬೇಕು, ಆಗ ಮಾತ್ರ ಹಣವನ್ನು ಹಿಂಪಡೆಯಲಾಗುತ್ತದೆ ಎಂದು ಬದಲಾದ ನಿಯಮದಲ್ಲಿ ತಿಳಿಸಲಾಗಿತ್ತು.