PPF : ಈ ದಿನಾಂಕದೊಳಗೆ ಹಣ ಹೂಡಿಕೆ ಮಾಡಿ, ಈ ಎಲ್ಲಾ ಪ್ರಯೋಜನ ನಿಮ್ಮದಾಗಿಸಿ

Sun, 17 Jan 2021-5:48 pm,

ನೀವು ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಖಾತೆಯನ್ನು ತೆರೆದಿದ್ದರೆ ಪ್ರತಿ ತಿಂಗಳು ಅದರಲ್ಲಿ ಹಣವನ್ನು ಜಮಾ ಮಾಡುವ ಬಗ್ಗೆ ನೀವು ಸ್ವಲ್ಪ ಅಸಡ್ಡೆ ಹೊಂದಿದ್ದರೆ ನೀವು ಅದರ ಹಲವು ಲಾಭಗಳಿಂದ ವಂಚಿತರಾಗಬಹುದು. ಹೌದು ಇದರ ಹಿಂದೆ ವಿಶೇಷ ಕಾರಣವಿದೆ. ಪ್ರತಿ ತಿಂಗಳು ನಿಗದಿತ ದಿನಾಂಕದಂದು ಪಿಪಿಎಫ್ ಖಾತೆಯಲ್ಲಿ ಹಣವನ್ನು ಠೇವಣಿ ಇರಿಸುವುದು ಉತ್ತಮ. ನೀವು ಅದರಲ್ಲಿ ಹಣವನ್ನು ಹಲವು ವಿಧಗಳಲ್ಲಿ ಜಮಾ ಮಾಡಬಹುದು. ನೀವು ಪ್ರತಿ ತಿಂಗಳು ಬ್ಯಾಂಕ್, ಪೋಸ್ಟ್ ಆಫೀಸ್ (Post Office) ಅಥವಾ ಆ ಹಣಕಾಸು ಕಂಪನಿಗೆ ಹೋಗಿ ಹಣವನ್ನು ಠೇವಣಿ ಮಾಡಲು ಸಾಧ್ಯವಾಗದಿದ್ದರೆ, ನೀವು ಆನ್‌ಲೈನ್ ಆಯ್ಕೆಯ ಸಹಾಯವನ್ನು ತೆಗೆದುಕೊಳ್ಳಬಹುದು. ಇದು ನಿಮ್ಮ ಸಮಯವನ್ನು ಉಳಿಸುತ್ತದೆ.

ಪ್ರತಿ ತಿಂಗಳು 5ನೇ ತಾರೀಖಿಗು ಮೊದಲು ಹಣವನ್ನು ಪಿಪಿಎಫ್ ಖಾತೆಗೆ ಜಮಾ ಮಾಡುವುದರಿಂದ ಹೆಚ್ಚಿನ ಲಾಭಗಳು ಸಿಗುತ್ತವೆ ಎಂದು ಆರ್ಥಿಕ ತಜ್ಞರು ಹೇಳುತ್ತಾರೆ. ಪಿಪಿಎಫ್ (PPF) ಠೇವಣಿಗಳ ಮೇಲಿನ ಬಡ್ಡಿಯನ್ನು ಪ್ರತಿ ತಿಂಗಳು ಲೆಕ್ಕಹಾಕಲಾಗುತ್ತದೆ. ಐದನೇ ತಾರೀಖು ಮತ್ತು ತಿಂಗಳ ಕೊನೆಯ ದಿನಾಂಕದ ನಡುವೆ ಠೇವಣಿ ಇರಿಸಿದ ಮೊತ್ತದ ಮೇಲೆ ಬಡ್ಡಿಯನ್ನು ನಿಗದಿಪಡಿಸಲಾಗುತ್ತದೆ. ಹಾಗಾಗಿ ನೀವು 5ನೇ ತಾರೀಕಿಗೂ ಮೊದಲು ಹಣವನ್ನು ಠೇವಣಿ ಮಾಡಿದರೆ, ನಿಮಗೆ ಹೆಚ್ಚಿನ ಬಡ್ಡಿ ಸಿಗುತ್ತದೆ.

ಇದನ್ನೂ ಓದಿ -  ಪಿಪಿಎಫ್ ಖಾತೆ ಮೆಚ್ಯೂರ್ ಆದ ಬಳಿಕ ಏನು ಮಾಡಬೇಕು? ತಜ್ಞರು ಏನ್ ಹೇಳ್ತಾರೆ?

ಎಲೆಕ್ಟ್ರಾನಿಕ್ ಕ್ಲಿಯರಿಂಗ್ ಸಿಸ್ಟಮ್ (ಇಸಿಎಸ್) ರೂಪದಲ್ಲಿ ಹಣವನ್ನು ಆನ್‌ಲೈನ್‌ನಲ್ಲಿ ಠೇವಣಿ ಇಡುವುದು ಒಂದು ಆಯ್ಕೆಯಾಗಿದೆ. ಇದರಲ್ಲಿ ನಿಗದಿತ ಮೊತ್ತವನ್ನು ಪ್ರತಿ ತಿಂಗಳು ಒಂದು ಬ್ಯಾಂಕಿನಿಂದ ನಿಯಮಿತವಾಗಿ ಮತ್ತೊಂದು ಖಾತೆಗೆ ವರ್ಗಾಯಿಸಬಹುದು. ಇದಕ್ಕಾಗಿ ನೀವು ಬ್ಯಾಂಕಿನಲ್ಲಿ ಇಸಿಎಸ್‌ಗೆ ಅರ್ಜಿ ಸಲ್ಲಿಸಬೇಕು. ಇಸಿಎಸ್ ಅನ್ನು ಸಕ್ರಿಯಗೊಳಿಸಿದ ನಂತರ ಹಣವನ್ನು ನಿಮ್ಮ ಬ್ಯಾಂಕ್ ಖಾತೆಯಿಂದ ಪಿಪಿಎಫ್ ಖಾತೆಗೆ ನಿಗದಿತ ಸಮಯದೊಳಗೆ ಸ್ವಯಂಚಾಲಿತವಾಗಿ ವರ್ಗಾಯಿಸಲಾಗುತ್ತದೆ.

ಇದನ್ನೂ ಓದಿ -  PPF vs NPS: ನಿವೃತ್ತಿಯ ನಂತರ ನಿಮಗೆ ಯಾವುದು ಹೆಚ್ಚು ಪ್ರಯೋಜನಕಾರಿ !

ರಾಷ್ಟ್ರೀಯ ಎಲೆಕ್ಟ್ರಾನಿಕ್ ನಿಧಿಗಳ ವರ್ಗಾವಣೆ ಅಂದರೆ ಆನ್‌ಲೈನ್‌ನಲ್ಲಿ ಹಣವನ್ನು ಠೇವಣಿ ಇರಿಸಲು NEFT ಆನ್‌ಲೈನ್ ಆಯ್ಕೆಯಾಗಿದೆ. ಇದನ್ನು ನೆಟ್ ಬ್ಯಾಂಕಿಂಗ್ ಸೌಲಭ್ಯದ ಮೂಲಕ ಬಳಸಬಹುದು. ಈ ಮೂಲಕ ಹಣವನ್ನು ಪಿಪಿಎಫ್‌ನಲ್ಲಿ ಠೇವಣಿ ಇರಿಸಲು, ನಿಮ್ಮ ಪಿಪಿಎಫ್ ಖಾತೆ ಸಂಖ್ಯೆ ಮತ್ತು ನಿಮ್ಮ ಪಿಪಿಎಫ್ ಖಾತೆ ಇರುವ ಬ್ಯಾಂಕ್ ಶಾಖೆಯ ಐಎಫ್‌ಎಸ್‌ಸಿ ಕೋಡ್ ಅನ್ನು ನೀವು ಹೊಂದಿರಬೇಕು. NEFT ನೊಂದಿಗೆ ನೀವು ಯಾವುದೇ ಸಮಯದಲ್ಲಿ ಹಣವನ್ನು ವರ್ಗಾಯಿಸಬಹುದು.

ನಿಮ್ಮ ಬ್ಯಾಂಕ್ ಖಾತೆ ಮತ್ತು ಪಿಪಿಎಫ್ ಖಾತೆ ಎರಡೂ ಒಂದೇ ಬ್ಯಾಂಕಿನಲ್ಲಿದ್ದರೆ ಈ ಸೌಲಭ್ಯ ಸುಲಭ. ಇದರಲ್ಲಿ ನಿಮ್ಮ ಉಳಿತಾಯ ಖಾತೆಯಿಂದ ಪಿಪಿಎಫ್ ಖಾತೆಗೆ ನೀವು ಸುಲಭವಾಗಿ ಹಣವನ್ನು ವರ್ಗಾಯಿಸಬಹುದು. ಇದರಲ್ಲಿ ನೀವು ಪ್ರತಿ ತಿಂಗಳು ಅಥವಾ ಪ್ರತಿದಿನ ಹಣವನ್ನು ಠೇವಣಿ ಮಾಡಬಹುದು. ಇಲ್ಲಿ ನೀವು ಪಿಪಿಎಫ್‌ನಲ್ಲಿ ವಾರ್ಷಿಕವಾಗಿ 1.5 ಲಕ್ಷ ರೂಪಾಯಿಗಳವರೆಗೆ ಠೇವಣಿ ಇಡಬಹುದು. ಇದು ತುಂಬಾ ಅನುಕೂಲಕರ ಆಯ್ಕೆಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - https://bit.ly/3hDyh4G Apple Link - https://apple.co/3loQYe  ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link