ಭಾರತದ ಈ ರಾಜ್ಯಗಳೂ ಸೇರಿದಂತೆ ಹಲವು ದೇಶಗಳಲ್ಲಿ ಜನವರಿ 1ರಂದು New Year ಆಚರಿಸುವುದಿಲ್ಲ!

Thu, 31 Dec 2020-2:45 pm,

ವಿಶ್ವದಾದ್ಯಂತ ಜನವರಿ 1ರಂದು ಹೊಸ ವರ್ಷ ಆಚರಿಸಲಾಗುತ್ತದೆ. ಆದರೆ ಹಲವು ಪ್ರದೇಶಗಳಲ್ಲಿ ಜನವರಿ 1ರಂದು ಹೊಸ ವರ್ಷ ಆಚರಿಸುವುದಿಲ್ಲ. ಅಂತಹ ಕೆಲವು ಪ್ರದೇಶಗಳಲ್ಲಿ ಒಂದು ತಮಿಳುನಾಡು (Tamil Nadu). ತಮಿಳುನಾಡಿನ ಜನರು ಪೊಂಗಲ್‌ನಲ್ಲಿ ಹೊಸ ವರ್ಷವನ್ನು ಆಚರಿಸುತ್ತಾರೆ. ಇಲ್ಲಿ ಜನವರಿ 1 ರ ಬದಲು ಪೊಂಗಲ್ ದಿನದಂದು ಹೊಸ ವರ್ಷವನ್ನು ಆಚರಿಸುತ್ತಾರೆ. ಅಂತೆಯೇ ಕರ್ನಾಟಕದಲ್ಲಿ ಯುಗಾದಿ ಹಬ್ಬವನ್ನು ಹೊಸ ವರ್ಷ ಎಂದು ಪರಿಗಣಿಸಲಾಗುತ್ತದೆ.

ಮ್ಯಾನ್ಮಾರ್‌ನಲ್ಲಿ ಜನವರಿ 1 ರಂದು ಹೊಸ ವರ್ಷವನ್ನು ಆಚರಿಸಲಾಗುವುದಿಲ್ಲ. ಇಲ್ಲಿನ ಜನರು ಹೊಸ ವರ್ಷವನ್ನು ಏಪ್ರಿಲ್ 13 ರಿಂದ 15 ರವರೆಗೆ ಆಚರಿಸುತ್ತಾರೆ. ಇಲ್ಲಿ ಹೊಸ ವರ್ಷದ ಆಚರಣೆಯನ್ನು ಟಿಜಾನ್ ಎಂದು ಕರೆಯಲಾಗುತ್ತದೆ. 

ಇರಾನ್‌ನಲ್ಲಿ, ಸೂರ್ಯನು ಮೇಷ ರಾಶಿಗೆ ಪ್ರವೇಶಿಸಿದ ದಿನದಂದು ಹೊಸ ವರ್ಷವನ್ನು ಆಚರಿಸಲಾಗುತ್ತದೆ. ಇರಾನ್‌ (Iran)ನಲ್ಲಿ ಇದನ್ನು ನೌರೋಜ್  (Nowroz) ಎಂದು ಕರೆಯಲಾಗುತ್ತದೆ. ಇರಾನಿಯನ್ನರು ನೌರೋಜ್‌ನಲ್ಲಿಯೇ ಹೊಸ ವರ್ಷವನ್ನು ಆಚರಿಸುತ್ತಾರೆ. ನೌರುಜ್ ಹೆಚ್ಚಾಗಿ ಮಾರ್ಚ್ ತಿಂಗಳಲ್ಲಿ ಬರುತ್ತದೆ.

ಇದನ್ನೂ ಓದಿ: ಕೇವಲ 30 ನಿಮಿಷಗಳಲ್ಲಿ Home Loan, Car Loan : ಈ ಬ್ಯಾಂಕ್ ಪರಿಚಯಿಸಿದೆ ಹೊಸ ಸೌಲಭ್ಯ

ಥೈಲ್ಯಾಂಡ್‌ನಲ್ಲಿ (Thailand) ಹೊಸ ವರ್ಷವನ್ನು ಜನವರಿ 1 ರಂದು ಆಚರಿಸಲಾಗುವುದಿಲ್ಲ. ಇಲ್ಲಿ ಹೊಸ ವರ್ಷದ ಆಚರಣೆಯನ್ನು ಏಪ್ರಿಲ್ 12 ರಿಂದ 15 ರವರೆಗೆ ಆಚರಿಸಲಾಗುತ್ತದೆ. ಇಲ್ಲಿನ ಜನರು ಹೊಸ ವರ್ಷವನ್ನು ಏಪ್ರಿಲ್‌ನಲ್ಲಿ ಬಹಳ ಆಡಂಬರದಿಂದ ಸ್ವಾಗತಿಸುತ್ತಾರೆ.

ಇದನ್ನೂ ಓದಿ: Happy New Year : ಜನವರಿ 1ರಿಂದ ಪ್ರಾರಂಭವಾಗಲಿದೆ Amazon ಬಂಪರ್ ಸೇಲ್

ಜಪಾನ್‌ನಲ್ಲಿ (Japan) ಜನವರಿ 1 ರಂದು ಹೊಸ ವರ್ಷವನ್ನು ಆಚರಿಸಲಾಗುವುದಿಲ್ಲ. ಹೊಸ ವರ್ಷವನ್ನು ಜನವರಿ 5 ರಂದು ಜಪಾನ್‌ನಲ್ಲಿ ಆಚರಿಸಲಾಗುತ್ತದೆ. ಮೊದಲ ಹೊಸ ವರ್ಷವನ್ನು ಜನವರಿ 20 ರಿಂದ ಫೆಬ್ರವರಿ 19 ರವರೆಗೆ ಇಲ್ಲಿ ಆಚರಿಸಲಾಯಿತು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link