ಕೇವಲ 30 ನಿಮಿಷಗಳಲ್ಲಿ Home Loan, Car Loan : ಈ ಬ್ಯಾಂಕ್ ಪರಿಚಯಿಸಿದೆ ಹೊಸ ಸೌಲಭ್ಯ

                        

Home loan: ಸಾಲ ತೆಗೆದುಕೊಳ್ಳುವುದು ಎಂದರೆ ದೊಡ್ಡ ತಲೆ ನೋವೇ ಸರಿ. ಆದರೆ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯು ಅದನ್ನು ಅತ್ಯಂತ ಸುಲಭಗೊಳಿಸಿದೆ. ಈಗ ನೀವು ಮನೆಯಲ್ಲಿ ಕುಳಿತೇ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಅಷ್ಟೇ ಅಲ್ಲ ನೀವು ಬಹಳ ಕಡಿಮೆ ದಾಖಲೆಗಳನ್ನು ಒದಗಿಸಿ ಕೆಲವೇ ನಿಮಿಷಗಳಲ್ಲಿ ಸಾಲ ತೆಗೆದುಕೊಳ್ಳಬಹುದು. ಬ್ಯಾಂಕ್ ಆಫ್ ಬರೋಡಾ ಅಂತಹ ಒಂದು ಡಿಜಿಟಲ್ ಪ್ಲಾಟ್‌ಫಾರ್ಮ್ ಅನ್ನು ಪ್ರಾರಂಭಿಸಿದೆ.

1 /5

Home loan: ಸಾಲ ತೆಗೆದುಕೊಳ್ಳುವುದು ಎಂದರೆ ದೊಡ್ಡ ತಲೆ ನೋವೇ ಸರಿ. ಆದರೆ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯು ಅದನ್ನು ಅತ್ಯಂತ ಸುಲಭಗೊಳಿಸಿದೆ. ಈಗ ನೀವು ಮನೆಯಲ್ಲಿ ಕುಳಿತೇ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಅಷ್ಟೇ ಅಲ್ಲ ನೀವು ಬಹಳ ಕಡಿಮೆ ದಾಖಲೆಗಳನ್ನು ಒದಗಿಸಿ ಕೆಲವೇ ನಿಮಿಷಗಳಲ್ಲಿ ಸಾಲ ತೆಗೆದುಕೊಳ್ಳಬಹುದು. ಬ್ಯಾಂಕ್ ಆಫ್ ಬರೋಡಾ ಅಂತಹ ಒಂದು ಡಿಜಿಟಲ್ ಪ್ಲಾಟ್‌ಫಾರ್ಮ್ ಅನ್ನು ಪ್ರಾರಂಭಿಸಿದೆ.  

2 /5

ಬ್ಯಾಂಕ್ ಆಫ್ ಬರೋಡಾ ಪ್ರಸ್ತುತ ಆಫ್‌ಲೈನ್ / ಆನ್‌ಲೈನ್ ಪಾಲುದಾರ ಚಾನೆಲ್‌ಗಳ ಮೂಲಕ ಏನನ್ನಾದರೂ ಖರೀದಿಸಲು ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಪೂರ್ವ-ಅನುಮೋದನೆ ಮೈಕ್ರೋ ಪರ್ಸನಲ್ ಸಾಲಗಳನ್ನು ನೀಡುತ್ತದೆ ಮತ್ತು ಸುಲಭ ಇಎಂಐ (EMI) ನಲ್ಲಿ ಪಾವತಿ ಸೌಲಭ್ಯವನ್ನು ಒದಗಿಸುತ್ತಿದೆ. ಗ್ರಾಹಕರು ಬಯಸಿದರೆ ಈ ಮೊತ್ತವನ್ನು ಅವರ ಉಳಿತಾಯ ಬ್ಯಾಂಕ್ ಖಾತೆಗೆ ಹಾಕಬಹುದು.  

3 /5

ಗ್ರಾಹಕರು ಬಯಸಿದರೆ, ಅದನ್ನು 3 ತಿಂಗಳಿಂದ 18 ತಿಂಗಳ ಇಎಂಐ ಆಗಿ ಪರಿವರ್ತಿಸಬಹುದು. ಇದಕ್ಕಾಗಿ ಗ್ರಾಹಕರು ಬ್ಯಾಂಕ್ ಆಫ್ ಬರೋಡಾದ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ m-Connect+ ಅನ್ನು ಬಳಸಬೇಕಾಗುತ್ತದೆ. 'ಈ ಆ್ಯಪ್ ಮೂಲಕ ಇಎಂಐ ಪರಿವರ್ತನೆ ಕೇವಲ 60 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ' ಎಂದು ಬ್ಯಾಂಕ್ ಆಫ್ ಬರೋಡಾ ಹೇಳಿದೆ. ಈ ಡಿಜಿಟಲ್ ಸಾಲ ವೇದಿಕೆಯನ್ನು ಪ್ರಾರಂಭಿಸಿದ ಬ್ಯಾಂಕ್ ಆಫ್ ಬರೋಡಾ ಕಾರ್ಯನಿರ್ವಾಹಕ ನಿರ್ದೇಶಕ ವಿಕ್ರಮಾದಿತ್ಯ ಸಿಂಗ್ ಖಿಚಿ, "ಉತ್ತಮ ಗ್ರಾಹಕ ಅನುಭವವನ್ನು ನೀಡುವುದು ಮತ್ತು ಸಾಲ ನೀಡುವ ವ್ಯವಹಾರವನ್ನು ಡಿಜಿಟಲೀಕರಣದತ್ತ ಸಾಗಿಸುವುದು ನಮ್ಮ ಮುಖ್ಯ ಉದ್ದೇಶ" ಎಂದು ಹೇಳಿದರು. ಇದನ್ನೂ ಓದಿ: 15 ಸೆಕೆಂಡ್ ಗಳಿಗಿಂತಲೂ ಕಮ್ಮಿ ಅವಧಿಯಲ್ಲಿ No Cost EMI ಮೇಲೆ ವಸ್ತುಗಳನ್ನು ಖರೀದಿಸಿ

4 /5

ಡಿಜಿಟಲ್ ಸಾಲ ವೇದಿಕೆ 30 ನಿಮಿಷಗಳಲ್ಲಿ ಗೃಹ ಸಾಲಗಳು (Home Loan), ಕಾರು ಸಾಲಗಳು ಮತ್ತು ವೈಯಕ್ತಿಕ ಸಾಲಗಳಿಗೆ ತಾತ್ವಿಕವಾಗಿ ಅನುಮೋದನೆ ನೀಡುತ್ತದೆ ಮತ್ತು ಪ್ರಕ್ರಿಯೆಯಲ್ಲಿ ಯಾವುದೇ ಮಾನವ ಹಸ್ತಕ್ಷೇಪವಿಲ್ಲ. ಸಾಲ ಪಡೆಯುವ ಅರ್ಜಿದಾರರು ಇದಕ್ಕೆ ಹಲವು ವಿಧಗಳಲ್ಲಿ ಅರ್ಜಿ ಸಲ್ಲಿಸಬಹುದು. ವೆಬ್‌ಸೈಟ್, ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಸೋಷಿಯಲ್ ಮೀಡಿಯಾದಿಂದಲೂ ಗ್ರಾಹಕರು ಈ ಸೌಲಭ್ಯವನ್ನು ಪಡೆಯಬಹುದು. ಇದನ್ನೂ ಓದಿ:  ಹೈಟೆಕ್ ಆದ PNB, ಹೊಸ ವ್ಯವಸ್ಥೆಯಲ್ಲಿ ತಕ್ಷಣವೇ ಸಿಗುತ್ತೆ ಸಾಲ

5 /5

ಈ ಹೊಸ ಪ್ಲಾಟ್‌ಫಾರ್ಮ್ ಮೂಲಕ ಬ್ಯಾಂಕ್ ಆಫ್ ಬರೋಡಾ 'ಸ್ಥಿರ ಠೇವಣಿಗಳ  (Fixed Deposits) ಮೇಲೆ ಆನ್‌ಲೈನ್ ಸಾಲವನ್ನು' ಸಹ ನೀಡುತ್ತಿದೆ. ಈ ಪ್ಲಾಟ್‌ಫಾರ್ಮ್ ಮೂಲಕ ಗ್ರಾಹಕರು ತಮ್ಮ ಸ್ಥಿರ ಠೇವಣಿಗಳ ಮೇಲೆ ಮೊಬೈಲ್ ಬ್ಯಾಂಕಿಂಗ್ ಅಥವಾ ನೆಟ್ ಬ್ಯಾಂಕಿಂಗ್ ಸೌಲಭ್ಯದಿಂದ ತ್ವರಿತ ಸಾಲವನ್ನು ಪಡೆಯಬಹುದು. ಮುಂದಿನ 5 ವರ್ಷಗಳಲ್ಲಿ ಚಿಲ್ಲರೆ ಸಾಲಗಳಲ್ಲಿನ ಡಿಜಿಟಲ್ ಪಾಲು 74% ಕ್ಕೆ ಏರಿಕೆಯಾಗಲಿದೆ ಎಂದು ಬ್ಯಾಂಕ್ ಆಫ್ ಬರೋಡಾ ನಿರೀಕ್ಷಿಸಿದೆ.