Great Diwali offer: ಕೇವಲ 101 ರೂ. ಪಾವತಿಸಿ ಮನೆಗೆ ತನ್ನಿ 49,990 ರೂ. ಬೆಲೆಯ ಸ್ಮಾರ್ಟ್‌ಫೋನ್

Tue, 10 Nov 2020-7:54 am,

ನವದೆಹಲಿ: ಹಬ್ಬದ ಋತುವಿನಲ್ಲಿ ನೀವು ಹೊಸ ಸ್ಮಾರ್ಟ್‌ಫೋನ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಮತ್ತು ಹಣದ ಕೊರತೆಯು ನಿಮಗೆ ತಡೆ ಆಗುತ್ತಿದೆ ಎಂದಾದರೆ ಚಿಂತೆಬಿಡಿ. ಈ ಸುದ್ದಿ ನಿಮಗಾಗಿ ಮಾತ್ರ. ವಿವೋ ಎಕ್ಸ್ 50 ಪ್ರೊ (Vivo X50 Pro) ನಂತಹ ದುಬಾರಿ ಸ್ಮಾರ್ಟ್‌ಫೋನ್‌ಗಳನ್ನು ನಿಮ್ಮ ಮನೆಗೆ ತರಲು ಕೇವಲ 101 ರೂ. ಪಾವತಿಸಿದರೆ ಸಾಕು. ಸ್ಮಾರ್ಟ್ಫೋನ್ ಕಂಪನಿ ವಿವೋ (VIVO) ತನ್ನ ಗ್ರಾಹಕರಿಗೆ ಈ ವಿಶೇಷ ಗ್ರೇಟ್ ದೀಪಾವಳಿ ಕೊಡುಗೆಯನ್ನು ತಂದಿದೆ. ಇದರಲ್ಲಿ ಉಳಿದ ಹಣವನ್ನು ನೀವು ನಂತರ ಮಾಸಿಕ ಕಂತಿನಲ್ಲಿ (ಇಎಂಐ) ಪಾವತಿಸಬೇಕು. ಈ ಕೊಡುಗೆ ಅಡಿಯಲ್ಲಿ ವಿವೊನ ಸ್ಮಾರ್ಟ್ಫೋನ್ಗಳ ಅನೇಕ ಮಾದರಿಗಳನ್ನು ಖರೀದಿಸಲು ಆಯ್ಕೆಗಳಿವೆ. ನಿಮ್ಮ ಬಜೆಟ್ ಮತ್ತು ಆಯ್ಕೆಯ ಪ್ರಕಾರ ನೀವು ಸ್ಮಾರ್ಟ್ಫೋನ್ ಖರೀದಿಸಬಹುದು.

ವಿವೊದಿಂದ ಈ ಕೊಡುಗೆಯಡಿಯಲ್ಲಿ ಸ್ಮಾರ್ಟ್‌ಫೋನ್ ಖರೀದಿಗೆ ಉಳಿದ ಹಣ ಪಾವತಿಸಲು ನೀವು ಐಸಿಐಸಿಐ ಬ್ಯಾಂಕ್ (ICICI Bank), ಬ್ಯಾಂಕ್ ಆಫ್ ಬರೋಡಾ, ಕೊಟಕ್ ಮಹೀಂದ್ರಾ ಬ್ಯಾಂಕ್, ಫೆಡರಲ್ ಬ್ಯಾಂಕಿನ ಕ್ರೆಡಿಟ್ ಕಾರ್ಡ್‌ನಿಂದ ಇಎಂಐ ವಹಿವಾಟು ನಡೆಸಿದರೆ ಈ ಸ್ಮಾರ್ಟ್‌ಫೋನ್‌ಗಳಲ್ಲಿ ನೀವು 10% ವರೆಗೆ ತ್ವರಿತ ಕ್ಯಾಶ್‌ಬ್ಯಾಕ್ ಪಡೆಯಬಹುದು. 

ವಿವೋ ಅವರ ಸ್ಮಾರ್ಟ್‌ಫೋನ್ (Smartphone) ಅನ್ನು 101 ರೂ. ಡೌನ್ ಪೇಮೆಂಟ್‌ನಲ್ಲಿ ಖರೀದಿಸಲು, ಉಳಿದ ಮೊತ್ತಕ್ಕೆ ನೀವು ಬಜಾಜ್ ಫಿನ್‌ಸರ್ವ್‌ನಿಂದ ಇಎಂಐ ಸೌಲಭ್ಯವನ್ನು ಪಡೆಯಬಹುದು. ಇದರಲ್ಲಿ ನಿಗದಿತ ಮೊತ್ತದ ಇಎಂಐ ಅನ್ನು ಭರಿಸಬೇಕಾಗುತ್ತದೆ. ಅಂತೆಯೇ ನೀವು ಹೋಮ್ ಕ್ರೆಡಿಟ್‌ನಿಂದ ಹಣಕಾಸು ನೀಡಿದರೆ ಶೂನ್ಯ ಡೌನ್ ಪೇಮೆಂಟ್‌ನಲ್ಲಿಯೂ ಸಹ ನೀವು ಸ್ಮಾರ್ಟ್‌ಫೋನ್ ಖರೀದಿಸಬಹುದು.  

ಕಂಪನಿಯ ಪ್ರಕಾರ ವಿವೊ (Vivo) ಸ್ಮಾರ್ಟ್‌ಫೋನ್‌ಗಳಾದ Y50, V20SE, V20 ಮತ್ತು X50 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು 101 ರೂಪಾಯಿಗಳ ಡೌನ್ ಪೇಮೆಂಟ್‌ನಲ್ಲಿ ಖರೀದಿಸಬಹುದು. ಈ ಸ್ಮಾರ್ಟ್‌ಫೋನ್‌ಗಳಲ್ಲಿ 24 ತಿಂಗಳ ಖಾತರಿಯನ್ನೂ ನೀಡಲಾಗುತ್ತಿದೆ.  

ಈ ಕೊಡುಗೆಯಲ್ಲಿ ನೀವು ಖರೀದಿಸಿದರೆ ಕಂಪನಿಯಿಂದ ಒಂದು ಬಾರಿ ನಿಮಗೆ ಸ್ಕ್ರೀನ್ ರಿಪ್ಲೇಸ್ ಮೆಂಟ್ ಲಭ್ಯವಿರುತ್ತದೆ. ಇದು ಮಾತ್ರವಲ್ಲ ನೀವು ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ನಿಂದ ಶೇಕಡಾ 5 ರಷ್ಟು ಕ್ಯಾಶ್‌ಬ್ಯಾಕ್ ಪಡೆಯಬಹುದು. ಅದೇ ವಿವೋ ಅಪ್‌ಗ್ರೇಡ್ ಆಫರ್ ಅಡಿಯಲ್ಲಿ 1500 ರೂಪಾಯಿಗಳ ಹೆಚ್ಚುವರಿ ವಿನಿಮಯ ಬೋನಸ್ ಸಹ ಲಭ್ಯವಿರುತ್ತದೆ.

ಈ ಕೊಡುಗೆಯಡಿಯಲ್ಲಿ ನೀವು ಸ್ಮಾರ್ಟ್ಫೋನ್ ಖರೀದಿಸಲು ಬಯಸಿದರೆ ನಂತರ ನೀವು ವಿವೊದ ಅಧಿಕೃತ ಅಂಗಡಿಗೆ ಭೇಟಿ ನೀಡಬಹುದು. ಇಲ್ಲಿ ಶಾಪಿಂಗ್ ಮತ್ತು ಹಣಕಾಸು ಸಂಪೂರ್ಣ ಪ್ರಕ್ರಿಯೆಯನ್ನು ಮಾಡಲಾಗುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link