ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಖಂಡಿತವಾಗಿಯೂ ಕಷ್ಟಗಳು ಎಂಬುದು ಇರುತ್ತವೆ. ಜನರು ಆತಂಕ ಮತ್ತು ಒತ್ತಡದಿಂದಾಗಿ ಅಸಮಾಧಾನಗೊಳ್ಳುತ್ತಾರೆ. ಇದರ ಹಿಂದೆ ನಿಮ್ಮ ಸುತ್ತ ಋಣಾತ್ಮಕ ಶಕ್ತಿಯೂ ಇರಬಹುದು. ಇದರಿಂದ ಮನೆಯ ನೆಮ್ಮದಿಗೆ ಭಂಗ ಬರಬಹುದು. ವಾಸ್ತವವಾಗಿ ಇದು ಮನೆಯಲ್ಲಿ ವಾಸ್ತು ದೋಷದಿಂದ ಸಂಭವಿಸುತ್ತದೆ. ನಾವು ನಮ್ಮ ಮನೆಯಲ್ಲಿ ಕೆಲ ವಸ್ತುಗಳನ್ನು ಚೆನ್ನಾಗಿ ಅಲಂಕರಿಸುತ್ತೇವೆ, ಆದರೆ ಸರಿಯಾದ ದಿಕ್ಕಿನಲ್ಲಿ ಮತ್ತು ಸ್ಥಳದಲ್ಲಿ ವಸ್ತುಗಳಿಲ್ಲದ ಕಾರಣ, ವಾಸ್ತು ದೋಷಗಳು ಉಂಟಾಗುತ್ತವೆ ಮತ್ತು ಸಮಸ್ಯೆಗಳು ಬರಲು ಪ್ರಾರಂಭಿಸುತ್ತವೆ. ಮನೆಯಲ್ಲಿ ಇರುವ ಕನ್ನಡಿ ಕೂಡ ಸಂತೋಷ ಮತ್ತು ಶಾಂತಿಗೆ ಸಂಬಂಧಿಸಿದೆ. ಇಂತಹ ಪರಿಸ್ಥಿತಿಯಲ್ಲಿ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಯಾವ ರೀತಿಯ ಕನ್ನಡಿ ಇರಬೇಕು ಮತ್ತು ಯಾವ ದಿಕ್ಕಿನಲ್ಲಿ ಇಡಬೇಕು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Health Tips: ಬರ್ಗರ್, ಪಿಜ್ಜಾ ತಿಂದರೆ ನಿಮ್ಮ ಆಯಸ್ಸು ನಿಮಿಷಕ್ಕೆ ಇಷ್ಟರಂತೆ ಕಡಿಮೆಯಾಗುತ್ತೆ!


ಕನ್ನಡಿಯನ್ನು ಯಾವ ದಿಕ್ಕಿನಲ್ಲಿ ಇಡಬೇಕು?


ವಾಸ್ತು ಶಾಸ್ತ್ರದ ಪ್ರಕಾರ ಮನೆಯೊಳಗೆ ಕನ್ನಡಿಯನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಬಹಳ ಮುಖ್ಯ. ಮನೆಯಲ್ಲಿ ಪೂರ್ವ ಅಥವಾ ಉತ್ತರ ದಿಕ್ಕಿನ ಗೋಡೆಯ ಮೇಲೆ ಕನ್ನಡಿ ಇಡುವುದು ಉತ್ತಮ. ಕನ್ನಡಿಯನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿದರೆ, ಆರ್ಥಿಕ ಸ್ಥಿತಿಯು ಸುಧಾರಿಸುತ್ತದೆ ಎಂದು ನಂಬಲಾಗಿದೆ. ಇದಲ್ಲದೇ ಸಮಾಜದಲ್ಲಿ ಗೌರವ ಹೆಚ್ಚುತ್ತದೆ.


ಕನ್ನಡಿಯ ಗಾತ್ರ ಹೇಗಿರಬೇಕು?


ನಿಮ್ಮ ಮನೆಯಲ್ಲಿ ಅಳವಡಿಸಲಾಗಿರುವ ಕನ್ನಡಿಯಲ್ಲಿ ನಿಮ್ಮ ಮುಖವು ಸ್ಪಷ್ಟವಾಗಿ ಗೋಚರಿಸಬೇಕು. ಕನ್ನಡಿ ಕೊಳಕು ಇರಬಾರದು ಮತ್ತು ಅಸ್ಪಷ್ಟವಾಗಿ ಕಾಣಿಸಬಾರದು.


ಇದನ್ನೂ ಓದಿ: 10 ಗ್ರಾಂ ಬಂಗಾರದ ಮೇಲೆ 2186 ರೂ. ಲಾಭ.! ಅಗ್ಗದ ಬೆಲೆಗೆ ಚಿನ್ನ ಖರೀದಿಸಲು ಕೊನೆಯ ಅವಕಾಶ..!


ಒಡೆದ ಕನ್ನಡಿಯನ್ನು ಎಂದಿಗೂ ಮನೆಯಲ್ಲಿ ಇಡಬೇಡಿ


ವಾಸ್ತು ಶಾಸ್ತ್ರದ ಪ್ರಕಾರ ಒಡೆದ ಕನ್ನಡಿಯನ್ನು ಮನೆಯಲ್ಲಿ ಇಡುವುದು ಅಶುಭ. ಒಡೆದ ಕನ್ನಡಿಯನ್ನು ಮನೆಯಲ್ಲಿಟ್ಟರೆ ನಕಾರಾತ್ಮಕ ಶಕ್ತಿ ಹರಡುತ್ತದೆ. ಈ ಕಾರಣಕ್ಕಾಗಿ, ಒಡೆದ ಕನ್ನಡಿಯನ್ನು ಮನೆಯಲ್ಲಿ ಇಡಬಾರದು. ಕನ್ನಡಿಯು ಬಿರುಕು ಬಿಟ್ಟರೆ, ಅದನ್ನು ತಕ್ಷಣವೇ ಬದಲಾಯಿಸಬೇಕು.


(ಸೂಚನೆ: ಈ ಸುದ್ದಿಯು ಸಾಮಾನ್ಯ ಊಹೆಗಳನ್ನು ಆಧರಿಸಿದೆ. ಜೀ ನ್ಯೂಸ್ ಅದನ್ನು ಖಚಿತಪಡಿಸುವುದಿಲ್ಲ.)


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.