ಸರ್ಕಾರದಿಂದ ಅಗ್ಗದ ಬೆಲೆಗೆ ಚಿನ್ನ ಖರೀದಿಸಲು ಕೊನೆಯ ಅವಕಾಶ..! 10 ಗ್ರಾಂ ಬಂಗಾರದ ಮೇಲೆ 2186 ರೂ. ಲಾಭ

Sovereign Gold Bond Scheme: ಸರ್ಕಾರಿ ಯೋಜನೆಯ ಎರಡನೇ ಸರಣಿ ಆಗಸ್ಟ್ 22 ರಿಂದ ಆರಂಭವಾಗಿದೆ. ಈ ಯೋಜನೆಯಲ್ಲಿಹೂಡಿಕೆ ಮಾಡಲು ಇಂದು ಕೊನೆಯ ಅವಕಾಶ. ಸಾವರಿನ್ ಗೋಲ್ಡ್ ಬಾಂಡ್ ಡಿಜಿಟಲ್ ಚಿನ್ನದಲ್ಲಿ ಹೂಡಿಕೆ ಮಾಡಲು ಇರುವ ಸುರಕ್ಷಿತ ಮಾರ್ಗವಾಗಿದೆ. 

Written by - Ranjitha R K | Last Updated : Aug 26, 2022, 09:25 AM IST
  • ಯೋಜನೆಯಲ್ಲಿಹೂಡಿಕೆ ಮಾಡಲು ಇಂದು ಕೊನೆಯ ಅವಕಾಶ.
  • ಪ್ರತಿ ಗ್ರಾಂ ಮೇಲೆ 50 ರೂಪಾಯಿ ರಿಯಾಯಿತಿ
  • ಈ ರೀತಿಯಾಗಿ, ಆಗಲಿದೆ 2186 ರೂಪಾಯಿಗಳ ಲಾಭ
ಸರ್ಕಾರದಿಂದ ಅಗ್ಗದ ಬೆಲೆಗೆ ಚಿನ್ನ ಖರೀದಿಸಲು ಕೊನೆಯ ಅವಕಾಶ..! 10 ಗ್ರಾಂ ಬಂಗಾರದ  ಮೇಲೆ  2186 ರೂ.  ಲಾಭ title=
Sovereign Gold Bond Scheme (file photo)

Sovereign Gold Bond Scheme : ಚಿನ್ನದ ಮೇಲೆ ಹೂಡಿಕೆ ಮಾಡಲು ಬಯಸುವುವವರು ಸರ್ಕಾರದ ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯಡಿಯಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ಅದರಲ್ಲಿ ಹೂಡಿಕೆ ಮಾಡುವುದರಿಂದ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಚಿನ್ನ ಸಿಗುತ್ತದೆ. ಈ ಸರ್ಕಾರಿ ಯೋಜನೆಯ ಎರಡನೇ ಸರಣಿ ಆಗಸ್ಟ್ 22 ರಿಂದ ಆರಂಭವಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಇಂದು ಕೊನೆಯ ಅವಕಾಶ. ಸಾವರಿನ್ ಗೋಲ್ಡ್ ಬಾಂಡ್ ಡಿಜಿಟಲ್ ಚಿನ್ನದಲ್ಲಿ ಹೂಡಿಕೆ ಮಾಡಲು ಇರುವ ಸುರಕ್ಷಿತ ಮಾರ್ಗವಾಗಿದೆ. 

ಪ್ರತಿ ಗ್ರಾಂ ಮೇಲೆ 50 ರೂಪಾಯಿ ರಿಯಾಯಿತಿ :
ಸಾವರಿನ್ ಗೋಲ್ಡ್ ಬಾಂಡ್‌ನಲ್ಲಿ, ಪ್ರತಿ 10 ಗ್ರಾ ಚಿನ್ನದ ಬೆಲೆಯಲ್ಲಿ ಒಂದು ದಿನದ ಹಿಂದಿನ ಬೆಲೆಯನ್ನು ನಿರ್ಧರಿಸಲಾಗುತ್ತದೆ. ಅಂದರೆ ನಿನ್ನೆ 52,094 ರೂಪಾಯಿ ಬೆಲೆಯೊಂದಿಗೆ ಮಾರುಕಟ್ಟೆ ಮುಕ್ತಾಯವಾಗಿತ್ತು. ಆದರೆ ಈ ಯೋಜನೆಯಲ್ಲಿ 10 ಗ್ರಾಂ.ಗೆ  51,470 ರೂಪಾಯಿಯಂತೆ ನಿಗದಿಯಾಗುತ್ತದೆ. ಒಂದು ಗ್ರಾಂ ಚಿನ್ನವನ್ನು ಖರೀದಿ ಮಾಡಬೇಕಾದರೆ  5,147 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಆದರೆ, ಆರ್‌ಬಿಐ ಎರಡನೇ ಸರಣಿಯ ಸಾವರಿನ್ ಗೋಲ್ಡ್ ಬಾಂಡ್‌ಗಳ ಅಡಿಯಲ್ಲಿ ಬಾಂಡ್‌ನ ವಿತರಣೆಯ ಬೆಲೆಯನ್ನು ಪ್ರತಿ ಗ್ರಾಂಗೆ 5,197 ರೂ. ಎಂದು ನಿಗದಿ ಮಾಡಿದೆ. ಡಿಜಿಟಲ್ ರೂಪದಲ್ಲಿ ಪಾವತಿ ಮಾಡಿದರೆ, ಇದರ ಮೇಲೆ ಪ್ರತಿ ಗ್ರಾಂಗೆ 50 ರೂ. ರಿಯಾಯಿತಿ  ಸಿಗಲಿದೆ. 

ಇದನ್ನೂ ಓದಿ : Today Vegetable Price: ಇಷ್ಟೊಂದು ಏರಿಕೆಯಾಯ್ತಾ ತರಕಾರಿಗಳ ಬೆಲೆ? ಇಲ್ಲಿದೆ ನೋಡಿ ಬೆಲೆ ವಿವರ

ಈ ರೀತಿಯಾಗಿ,  ಆಗಲಿದೆ  2186 ರೂಪಾಯಿಗಳ ಲಾಭ : 
ನೀವು 10 ಗ್ರಾಂ ಚಿನ್ನವನ್ನು ಖರೀದಿಸುವಾಗ ಇದಕ್ಕಾಗಿ 5,1470 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಅಂದರೆ, 52, 094 ರೂಪಾಯಿಗೆ  ಹೋಲಿಸಿದರೆ  624 ರೂ. ಕಡಿಮೆಯಾಗುತ್ತದೆ. ಇದರ ಜೊತೆಗೆ ಬುಲಿಯನ್ ಮಾರುಕಟ್ಟೆಯಿಂದ ಚಿನ್ನವನ್ನು ಖರೀದಿಸುವಾಗ,  3 ಪ್ರತಿಶತ ಜಿಎಸ್‌ಟಿಯನ್ನು ಪಾವತಿಸಬೇಕಾಗುತ್ತದೆ. ಅಂದರೆ 1562 ರೂಪಾಯಿ ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ. ಈ ರೀತಿಯಾಗಿ, 10 ಗ್ರಾಂ ಚಿನ್ನದ ಮೇಲೆ 1562 + 624 = 2186 ಲಾಭ ಸಿಗಲಿದೆ. 

ಹೂಡಿಕೆ ಮಾಡಲು ಇಂದು ಕೊನೆಯ ದಿನ : 
ಆಗಸ್ಟ್ 22 ರಿಂದ ಪ್ರಾರಂಭವಾದ ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯಲ್ಲಿ ಹಣ ಹೂಡಲು ಇಂದು ಕೊನೆಯ ದಿನವಾಗಿದೆ.  ಇದಕ್ಕೂ ಮೊದಲು ಜೂನ್ 20 ರಿಂದ ಜೂನ್ 24 ರವರೆಗೆ ಆರ್‌ಬಿಐ ಮೊದಲ ಸರಣಿಯನ್ನು ಪ್ರಾರಂಭಿಸಿತ್ತು. ಜೂನ್‌ನಲ್ಲಿ ಬಂದ  ಈ ಯೋಜನೆಯ ಮೊದಲ ಸರಣಿಯಡಿ, ಚಿನ್ನದ ಬೆಲೆ ಪ್ರತಿ ಗ್ರಾಂಗೆ 5,091 ರೂ. ನಿಗದಿಯಾಗಿತ್ತು. ಈ ಬಾರಿ ಪ್ರತಿ ಗ್ರಾಂಗೆ 106 ರೂ. ಏರಿಕೆಯಾದಂತಾಗಿದೆ.  

ಇದನ್ನೂ ಓದಿ : Gold Price Today : ಏರುತ್ತಲೇ ಇದೆ ಬಂಗಾರದ ಬೆಲೆ , ಖರೀದಿ ಬಲು ಕಷ್ಟ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News