ನವದೆಹಲಿ: ಹಿಂದೂ ಧರ್ಮದಲ್ಲಿ ಪ್ರತಿಯೊಂದು ಹಬ್ಬಕ್ಕೂ ವಿಶೇಷ ಮಹತ್ವವಿದೆ. ಭಾದ್ರಪದ ಮಾಸ ಆರಂಭವಾಗಿದೆ. ಈ ತಿಂಗಳಲ್ಲಿ ಅನೇಕ ಉಪವಾಸಗಳು ಮತ್ತು ಹಬ್ಬಗಳು ಬರುತ್ತವೆ. ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಬಾರಿಯ ಜನ್ಮಾಷ್ಟಮಿ ಹಬ್ಬವನ್ನು ಆಗಸ್ಟ್ 18ರಂದು ಆಚರಿಸಲಾಗುವುದು. ಜನ್ಮಾಷ್ಟಮಿಯ ದಿನದಂದು ಶ್ರೀಕೃಷ್ಣನನ್ನು ಪೂಜಿಸಲಾಗುತ್ತದೆ & ಉಪವಾಸ ಮತ್ತು ವ್ರತ ಇತ್ಯಾದಿ ಮಾಡಲಾಗುತ್ತದೆ. ಈ ದಿನ ಶ್ರೀ ಕೃಷ್ಣನಿಗೆ ಪ್ರಿಯವಾದ ವಸ್ತುಗಳನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ.


COMMERCIAL BREAK
SCROLL TO CONTINUE READING

ಜನ್ಮಾಷ್ಟಮಿಯ ದಿನದಂದು ಶ್ರೀ ಕೃಷ್ಣನು ರೋಹಿಣಿ ನಕ್ಷತ್ರದಲ್ಲಿ ಜನಿಸಿದನು. ಈ ಹಬ್ಬವನ್ನು ದೇಶದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ದಿನ ದೇವಾಲಯ ಮತ್ತು ಮನೆಗಳಲ್ಲಿ ಶ್ರೀ ಕೃಷ್ಣನನ್ನು ಸುಂದರವಾಗಿ ಅಲಂಕರಿಸಲಾಗುತ್ತದೆ. ಜನ್ಮಾಷ್ಟಮಿಯ ದಿನದಂದು ಕೆಲವು ವಸ್ತುಗಳನ್ನು ಖರೀದಿಸುವುದು ಒಳಿತಾಗುತ್ತದೆ ಎಂದು ಜ್ಯೋತಿಷ್ಯದಲ್ಲಿ ಉಲ್ಲೇಖಿಸಲಾಗಿದೆ. ಇದರ ಜೊತೆಗೆ ಲಕ್ಷ್ಮಿಯ ಆಶೀರ್ವಾದವೂ ಸಿಗುತ್ತದೆ ಎಂದು ಹೇಳಲಾಗಿದೆ.


ಇದನ್ನೂ ಓದಿ: Gajkesari Yog: ಈ ರಾಶಿಯ ಜಾತಕದಲ್ಲಿ ಆಗಸ್ಟ್ 15 ರಿಂದ ನಿರ್ಮಾಣಗೊಳ್ಳುತ್ತಿದೆ ಗಜ ಕೇಸರಿ ಯೋಗ, ಯಾರಿಗೆ ಲಾಭ?


ಜನ್ಮಾಷ್ಟಮಿಯ ದಿನದಂದು ಈ ವಸ್ತುಗಳನ್ನು ಖರೀದಿಸಿ


ಕೊಳಲು: ಶ್ರೀಕೃಷ್ಣನಿಗೆ ಕೊಳಲು ಎಂದರೆ ತುಂಬಾ ಇಷ್ಟ. ಕೊಳಲು ಇಲ್ಲದೆ ಶ್ರೀಕೃಷ್ಣನನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಜನ್ಮಾಷ್ಟಮಿಯ ದಿನದಂದು ಮರದ ಅಥವಾ ಬೆಳ್ಳಿಯ ಕೊಳಲನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಕೊಳಲು ತರುವುದರಿಂದ ವ್ಯಕ್ತಿಯ ಮನೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಇರುವುದಿಲ್ಲ. ಮನೆಯ ಆರ್ಥಿಕ ಸ್ಥಿತಿ ಸದೃಢವಾಗುತ್ತದೆ ಮತ್ತು ಲಕ್ಷ್ಮಿದೇವಿಯ ಆಶೀರ್ವಾದವೂ ಸಿಗುತ್ತದೆ.


ನವಿಲು ಗರಿ: ಭಗವಾನ್ ಶ್ರೀ ಕೃಷ್ಣನ ನೆಚ್ಚಿನ ವಸ್ತುಗಳಲ್ಲಿ ನವಿಲು ಗರಿ ಕೂಡ ಸೇರಿದೆ. ಶ್ರೀಕೃಷ್ಣನು ತನ್ನ ಕಿರೀಟದಲ್ಲಿ ನವಿಲು ಗರಿಗಳನ್ನು ಇಡುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜನ್ಮಾಷ್ಟಮಿಯಂದು ನವಿಲು ಗರಿಗಳನ್ನು ಕೊಂಡರೆ ಗ್ರಹದೋಷ ನಿವಾರಣೆಯಾಗುತ್ತದೆ. ಅಲ್ಲದೆ ಇದು ಕಾಲ ಸರ್ಪದೋಷವನ್ನು ಸಹ ನಿವಾರಿಸುತ್ತದೆ.


ಬೆಣ್ಣೆ: ಜನ್ಮಾಷ್ಟಮಿಯ ದಿನದಂದು ಶ್ರೀ ಕೃಷ್ಣನಿಗೆ ಪ್ರಿಯವಾದ ಬೆಣ್ಣೆಯನ್ನು ಅರ್ಪಿಸಬೇಕು. ಬೆಣ್ಣೆ ನೈವೇದ್ಯ ಮಾಡುವ ಮೂಲಕ ಲಡ್ಡು ಗೋಪಾಲ್ ಸಂತಸಗೊಂಡು ಭಕ್ತರ ಮೇಲೆ ಕೃಪೆ ತೋರುತ್ತಾನೆ.


ವೈಜಯಂತಿ ಮಾಲೆ: ಧಾರ್ಮಿಕ ಗ್ರಂಥಗಳ ಪ್ರಕಾರ ವೈಜಯಂತಿ ಮಾಲೆಯಲ್ಲಿ ಲಕ್ಷ್ಮಿದೇವಿ ನೆಲೆಸಿದ್ದಾಳೆ. ವೈಜಯಂತಿ ಮಾಲಾ ಶ್ರೀಕೃಷ್ಣನಿಗೆ ಬಹಳ ಪ್ರಿಯ. ಜನ್ಮಾಷ್ಟಮಿಯ ದಿನದಂದು ವೈಜಯಂತಿ ಮಾಲೆಯನ್ನು ಖರೀದಿಸಿ ಮನೆಗೆ ತಂದರೆ ಮನೆ ಧನ್ಯವಾಗುತ್ತದೆ. ವ್ಯಕ್ತಿಯ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.


ಹಸು-ಕರುವಿನ ಪ್ರತಿಮೆ: ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗುರು ಗ್ರಹವು ಹಸುವಿನೊಳಗೆ ನೆಲೆಸಿದೆ. ಶ್ರೀಕೃಷ್ಣನಿಗೆ ಗೋವು ತುಂಬಾ ಪ್ರಿಯವಾಗಿದೆ ಎಂದು ಹೇಳಲಾಗುತ್ತದೆ. ಆದುದರಿಂದ ಜನ್ಮಾಷ್ಟಮಿಯ ದಿನದಂದು ಹಸು ಮತ್ತು ಕರುವಿನ ವಿಗ್ರಹವನ್ನು ಮನೆಗೆ ತಂದು ಈಶಾನ್ಯ ದಿಕ್ಕಿನಲ್ಲಿಟ್ಟರೆ ಶ್ರೀಕೃಷ್ಣನ ಅನುಗ್ರಹ ದೊರೆಯುತ್ತದೆ. ಇದರೊಂದಿಗೆ ವ್ಯಕ್ತಿಯ ಅದೃಷ್ಟ ಹೆಚ್ಚಾಗುತ್ತದೆ ಮತ್ತು ಮಕ್ಕಳು ಸಂತೋಷವನ್ನು ಪಡೆಯುತ್ತಾರೆ.


ಇದನ್ನೂ ಓದಿ: August 31ರ ವರೆಗೆ ಈ ರಾಶಿಗಳ ಜನರಿಗೆ ಅಪಾರ ಧನಲಾಭ ! ಕಾರಣ ಇಲ್ಲಿದೆ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.